ಸವಣೂರು: ಬೇಡಿಕೆಗೆ ಅನುಗುಣವಾಗಿ ಡ್ಯೂಟಿ ನೀಡದ ಹಿನ್ನೆಲೆಯಲ್ಲಿ ಮನನೊಂದು ಕೆಎಸ್ಆರ್ಟಿಸಿ ಚಾಲಕ ಮಹಾದೇವಪ್ಪ ಫಕ್ಕಿರಪ್ಪ ಯರೇಶಿಮಿ (49) ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಬಸ್ ನಿಲ್ದಾಣದ ಡೀಸೆಲ್ ಪಂಪ್ ಕಚೇರಿಯಲ್ಲಿ ನಡೆದಿದೆ.
ಹಾವೇರಿ ವಲಯ ಸಾರಿಗೆ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಸವಣೂರ ಕೆಎಸ್ಆರ್ಟಿಸಿ ಬಸ್ ಘಟಕದಲ್ಲಿ ಚಾಲಕನಾಗಿ ನೇಮಕವಾಗಿದ್ದ ಮಹಾದೇವಪ್ಪ ಅವರನ್ನು ಚಾಲಕರಿಗೆ ತರಬೇತಿ ಜತೆಗೆ ಇಂಧನ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ಚಾಲಕನಾಗಿ ನೇಮಕ ಆಗಿದ್ದರಿಂದ ಚಾಲಕ ಡ್ಯೂಟಿಯನ್ನೇ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿರಲಿಲ್ಲ. ಇದರಿಂದ ಬೇಸತ್ತು ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
