ಫೆಬ್ರವರಿ 26, 2026: ಜೀವ ವಿಮೆಯ ಪ್ರವೇಶವನ್ನು ಹೆಚ್ಚಿಸುವ ಉದ್ದೇಶದಿಂದ Utkarsh Small Finance Bank ಮತ್ತು Kotak Mahindra Life Insurance ನಡುವೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಲಾಗಿದೆ. ಈ ಸಹಯೋಗವು ಬ್ಯಾಂಕಿನ ಉತ್ಪನ್ನ ವಿಸ್ತರಣಾ ಕಾರ್ಯತಂತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಗ್ರಾಹಕರಿಗೆ ಸಮಗ್ರ ಹಣಕಾಸು ರಕ್ಷಣಾ ಪರಿಹಾರಗಳನ್ನು ಒದಗಿಸುವ ಉದ್ದೇಶ ಹೊಂದಿದೆ.
ಈ ಒಪ್ಪಂದದ ಮೂಲಕ ಉತ್ಕರ್ಷ್ ಎಸ್ಎಫ್ಬಿಎಲ್ನ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,105 ಬ್ಯಾಂಕಿಂಗ್ ಔಟ್ಲೆಟ್ಗಳಲ್ಲಿ ಕೋಟಕ್ ಲೈಫ್ನ ವಿವಿಧ ವಿಮಾ ಉತ್ಪನ್ನಗಳನ್ನು ಪರಿಚಯಿಸಲಾಗುತ್ತದೆ. ಇದರ ಪ್ರಯೋಜನವನ್ನು ಬ್ಯಾಂಕಿನ ಸುಮಾರು 51.4 ಲಕ್ಷ ಗ್ರಾಹಕರು ಪಡೆಯಲಿದ್ದಾರೆ.
ಗ್ರಾಹಕರಿಗೆ ರಕ್ಷಣೆ, ಉಳಿತಾಯ, ಯೂನಿಟ್-ಲಿಂಕ್ಡ್ ಹಾಗೂ ನಿವೃತ್ತಿ ಯೋಜನೆಗಳಂತಹ ವೈಯಕ್ತಿಕಗೊಳಿಸಿದ ಜೀವ ವಿಮಾ ಪರಿಹಾರಗಳನ್ನು ಒದಗಿಸುವುದು ಈ ಪಾಲುದಾರಿಕೆಯ ಪ್ರಮುಖ ಉದ್ದೇಶವಾಗಿದೆ. ಶಾಖೆಗಳು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಹಾಗೂ ಅಸಿಸ್ಟೆಡ್ ಡಿಜಿಟಲ್ ವೇದಿಕೆಗಳ ಮೂಲಕ ಈ ಸೇವೆಗಳು ಲಭ್ಯವಾಗಲಿವೆ.
ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಗೋವಿಂದ್ ಸಿಂಗ್ ಮಾತನಾಡಿ, ಈ ಸಹಯೋಗವು ಗ್ರಾಹಕರಿಗೆ ಸಮಗ್ರ ಹಣಕಾಸು ಪರಿಹಾರಗಳನ್ನು ತಲುಪಿಸುವ ಬ್ಯಾಂಕಿನ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಹೇಳಿದರು. ಗ್ರಾಹಕರು ತಮ್ಮ ಅಗತ್ಯತೆಗಳಿಗೆ ಅನುಗುಣವಾದ ಜೀವ ವಿಮಾ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದರು.
ಕೋಟಕ್ ಮಹೀಂದ್ರಾ ಲೈಫ್ ಇನ್ಷುರೆನ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಾಲಸುಬ್ರಹ್ಮಣ್ಯನ್ ಮಾತನಾಡಿ, ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆ ಅಗತ್ಯವೆಂಬ ನಂಬಿಕೆಯಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ‘ಎಲ್ಲರಿಗೂ ವಿಮೆ’ ದೃಷ್ಟಿಕೋನಕ್ಕೆ ಅನುಗುಣವಾಗಿ ಉತ್ಕರ್ಷ್ ಬ್ಯಾಂಕಿನೊಂದಿಗೆ ಕೈಜೋಡಿಸಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಕೋಟಕ್ ಲೈಫ್ ಈಗಾಗಲೇ 5 ಕೋಟಿಗೂ ಹೆಚ್ಚು ಸಕ್ರಿಯ ಜೀವಗಳಿಗೆ ಭದ್ರತೆ ಒದಗಿಸಿದ್ದು, ಆರ್ಥಿಕ ಸುರಕ್ಷತೆ ನೀಡುವ ತನ್ನ ಅನುಭವವನ್ನು ಉತ್ಕರ್ಷ್ ಬ್ಯಾಂಕ್ ಗ್ರಾಹಕರಿಗೂ ವಿಸ್ತರಿಸಲಾಗುತ್ತಿದೆ. ಈ ಪಾಲುದಾರಿಕೆಯು ದೇಶದಲ್ಲಿ ಜೀವ ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆಗಳು ತಿಳಿಸಿವೆ.
