ಬೆಂಗಳೂರು, ಮಾ.5: ಭಾರತದ ಸೆಮಿಕಂಡಕ್ಟರ್ ಮತ್ತು ಎಐ ಕ್ಷೇತ್ರದ ನವೀನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ‘ಡೀಪ್ಟೆಕ್ ಹ್ಯಾಕಥಾನ್’ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯ ವಿಜೇತರನ್ನು ಇಂದು ಘೋಷಿಸಲಾಯಿತು. ಈ ಸ್ಪರ್ಧೆಯನ್ನು (IESA), ಇಂಡಿಯಾ, ಹಾಗೂ (i4C) ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಪ್ರತಿಷ್ಠಿತ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಈ ಹ್ಯಾಕಥಾನ್ನಲ್ಲಿ ದೇಶದಾದ್ಯಂತ 359 ಕಾಲೇಜುಗಳಿಂದ 911 ತಂಡಗಳು ಭಾಗವಹಿಸಿದ್ದವು. ಬಹು ಹಂತದ ಮೌಲ್ಯಮಾಪನದ ನಂತರ 532 ಆಲೋಚನೆಗಳು ಅಂತಿಮ ಹಂತಕ್ಕೆ ತಲುಪಿದ್ದು, ತಜ್ಞರ ಮಾರ್ಗದರ್ಶನ ಮತ್ತು ತಾಂತ್ರಿಕ ಮೌಲ್ಯಮಾಪನದ ಬಳಿಕ 10 ತಂಡಗಳು ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದವು.
ಸ್ಪರ್ಧೆಯಲ್ಲಿ “ಸೆಮಿಕಂಡಕ್ಟರ್ ಚಿತ್ರಗಳಿಗಾಗಿ ಎಡ್ಜ್ ಎಐ ಆಧಾರಿತ ದೋಷ ವರ್ಗೀಕರಣ ವ್ಯವಸ್ಥೆ” ಅಭಿವೃದ್ಧಿಪಡಿಸುವ ಸವಾಲನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. ಇದು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಎಐ ಬಳಕೆಯನ್ನು ಉತ್ತೇಜಿಸುವ ಮಹತ್ವದ ಪ್ರಯತ್ನವಾಗಿದೆ.
IESA ಮತ್ತು SEMI ಇಂಡಿಯಾ ಅಧ್ಯಕ್ಷರಾದ ಮಾತನಾಡಿ, ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ಈಗ ನಿರ್ಣಾಯಕ ಹಂತದಲ್ಲಿದ್ದು, ಯುವ ಇಂಜಿನಿಯರ್ಗಳ ಪ್ರತಿಭೆ ಮತ್ತು ಡೀಪ್ಟೆಕ್ ಆವಿಷ್ಕಾರಗಳು ದೇಶದ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಹೇಳಿದರು.
(ಉಪಾಧ್ಯಕ್ಷರು ಮತ್ತು ಇಂಡಿಯಾ ಕಂಟ್ರಿ ಹೆಡ್, GlobalFoundries) ಅವರು, ಇಂತಹ ಹ್ಯಾಕಥಾನ್ಗಳು ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ಚಿಪ್ ವಿನ್ಯಾಸ, ಉತ್ಪಾದನೆ ಮತ್ತು ಎಐ ತಂತ್ರಜ್ಞಾನಗಳನ್ನು ಬಳಸಿ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶ ನೀಡುತ್ತವೆ ಎಂದು ಹೇಳಿದರು.
(ಉಪಾಧ್ಯಕ್ಷರು ಮತ್ತು ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್, NXP Semiconductors) ಅವರು, ಸೆಮಿಕಂಡಕ್ಟರ್ ಮತ್ತು ಎಐ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ಸಹಯೋಗ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ವಿಜೇತರು
- ಪ್ರಥಮ ಬಹುಮಾನ: ತಂಡ – ₹1,00,000
- ಮೊದಲ ರನ್ನರ್-ಅಪ್: – ₹60,000
- ಎರಡನೇ ರನ್ನರ್-ಅಪ್: – ₹40,000
ಈ ಹ್ಯಾಕಥಾನ್ ಭಾರತದಲ್ಲಿ ಸೆಮಿಕಂಡಕ್ಟರ್ ಮತ್ತು ಎಐ ಕ್ಷೇತ್ರದ ಮುಂದಿನ ತಲೆಮಾರಿನ ನವೀನತೆಯನ್ನು ಉತ್ತೇಜಿಸುವ ಪ್ರಮುಖ ವಾಗಿ ಗುರುತಿಸಲ್ಪಟ್ಟಿದೆ.
