ತುಮಕೂರು: ಸ್ಪರ್ಧಾತ್ಮಕ ಯುಗದಲ್ಲಿ ಯುವಕರಿಗೆ ಮಾರಕವಾಗಿರುವ ಆನ್ಲೈನ್ ಗೇಮ್, ಸಾಮಾಜಿಕ ಜಾಲತಾಣದ ಪ್ರಸ್ತುತದ ವಸ್ತು ಸ್ಥಿತಿಗಳ ಬಗ್ಗೆ ಅರಿತು ಜೀವನಕ್ಕೆ ಬೆಳಕಾಗುವ ಅಂತರಾಳಕ್ಕೆ ಕರೆದ್ಯೂಯುವ ಚಿತ್ರಕಥೆಯನ್ನಾಧಾರಿತ “ಅಂತರ್ಯಾಮಿ” ಮಾರ್ಚ್ 6.ರಂದು ರಾಜ್ಯಾದ್ಯಂತ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಳ್ಳುತ್ತಿದೆ ಎಂದು ನಿರ್ದೇಶಕ ಕೆ. ಧನಂಜಯ ಅವರು ತಿಳಿಸಿದರು.
ನಗರದ ಕಾರ್ಯನಿರತ ಪತ್ರಕರ್ತರ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತರ್ಯಾಮಿ ಚಲನಚಿತ್ರದ ಕಥಾ ಹಂದರವಿದ್ದು, ಸಾಮಾಜಿಕ ಜಾಲತಾಣದ ಕರಾಳ ಮುಖವನ್ನು ತೆರದಿಡಲಿದೆ. ಈ ಚಿತ್ರ ಕುಟುಂಬ ಸಮಾಜ ಮತ್ತು ಸ್ನೇಹತ್ವದ ಮಹತ್ವವನ್ನು ತಿಳಿಸುತ್ತದೆ, ಜೀವನದ ಹಾದಿ ಉಜ್ವಲ ಭವಿಷ್ಯಕ್ಕೆ ಕಣ್ಣುತೆರೆಸುವ ಕಥೆಯನ್ನು ಒಳಗೊಂಡಿದೆ. ಮನರಂಜನೆ ಹಾಸ್ಯ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ವಿಷಯಗಳಿದ್ದು ಕುಟುಂಬ ಸಮೇತವಾಗಿ ನೋಡಬಹುದಾದ ಚಿತ್ರವಾಗಿದೆ ಎಂದರು.
ಚಿತ್ರಕ್ಕೆ ಸಾಹಿತ್ಯ ನೀಡಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಹಳೆ ವಿದ್ಯಾರ್ಥಿ ವಿನಯ್ ಕಾವ್ಯಕಾಂತಿ ಮಾತನಾಡಿ ಯುವ ಸಮುದಾಯವನ್ನ ಸಾಮಾಜಿ ಜಾಲತಾಣದ ವ್ಯಸನದಿಂದ ಎಚ್ಚರಗೊಳಿಸುವ ಸಾಹಿತ್ಯದ ಹಾಡು ಹಾಗೂ ಚಿತ್ರ ಸಂಭಾಷಣೆ ಮತ್ತು ಸಾಹಿತ್ಯಕ್ಕೆ ಪೂರಕವಾದ ಸಂಗೀತವನ್ನ ನಾದಬ್ರಹ್ಮ ಸಂಗೀತ ದಿಗ್ಗಜ ಹಂಸಲೇಖ ಅವರ ಶಿಷ್ಯ ದೇಸಿ ಮೋಹನ್ ನೀಡಿದ್ದಾರೆ. ಇವರ ಸಂಗೀತ ಪ್ರೇಕ್ಷಕರಿಗೆ ಮುದನೀಡಲಿದೆ ಎಂದರು.
ನಿರ್ಮಾಪಕ ನವೀನ್ ಎನ್.ಜಿ ಮಾತನಾಡಿ ಈ ಚಿತ್ರವನ್ನು 25 ದಿನಗಳಲ್ಲಿ ತುಮಕೂರಿನ ಸಿದ್ದಗಂಗಾ ಮಠ , ಎಸ್ಎಸ್ಐಟಿ ಕಾಲೇಜು, ಬಂಡೆಮಠ, ಸೋಮವಾರಪೇಟೆ, ಮಾದಾಪುರ ಸೇರಿದಂತೆ ರಾಜ್ಯದ ಇತರೆ ನಿಸರ್ಗದ ತವರಿನಲ್ಲಿ ಚಿತ್ರಿಕರಿಸಲಾಗಿದೆ. ಇದು ಗುರು ರೇಣುಕಾ ಪ್ರೊಡಕ್ಷನ್ನ ನಿರ್ಮಾಣದ ಚೊಚ್ಚಲ ಚಿತ್ರವಾಗಿದೆ ಎಂದು ಹೇಳಿದರು.
ಅರವಿಂದ್ ರಾಜ್ ಅವರ ಸಂಕಲನದೊಂದಿಗೆ ಬಾಲು ಮಾಸ್ಟರ್ ಅವರ ನೃತ್ಯ ಸಂಯೋಜನೆ ಇದೆ. ಪೃಥ್ವಿ ಭಟ್ ಮೇಘನಾ ಕುಲಕರ್ಣಿ ಅವರು ದೇಸಿ ಮೋಹನ್ ರವರ ಸಂಗೀತಕ್ಕೆ ಧ್ವನಿಯಾಗಿದ್ದಾರೆ. ಚೊಚ್ಚಲ ಬಾರಿಗೆ ನಿಭಾಯಿಸಿದ್ದು ಚಿತ್ರಕ್ಕೆ ಎಸ್ ಬಾಲು ಅವರ ಛಾಯಾಗ್ರಹಣವಿದೆ. ಶ್ರೀ ಸಿದ್ಧಾರ್ಥ ಮಾಧ್ಯಮ ಕೇಂದ್ರದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಅವರು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀಮತಿವಾಣಿ, ಚಿತ್ರದ ನಾಯಕಿ ಮೊಹಿರಾ ಆಚಾರ್ಯ, ನಟಿ ಬೇಬಿ ಹಾನ್ಸಿ, ನಾಯಕ ನಟ ಮತ್ತು ನಿರ್ಮಾಪಕರಾದ ಪ್ರಣವ್. ಸಹ ನಿರ್ಮಾಪಕರಾದ ಡಾ.ಕಮಲಾನರಸಿಂಹನ್, ನಟರಾಜ್, ತುಮಕೂರು ಕಿಟ್ಟಿ,ಉಪಸ್ಥಿತರಿದ್ದರು, ಶ್ರೀ ಸಿದ್ಧಾರ್ಥ ಮಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ. ಮುದ್ದೇಶ್ ಚಿತ್ರ ತಂಡವನ್ನ ಪರಿಚಯಿಸಿದರು.
– ಕೆ.ಬಿ.ಚಂದ್ರಚೂಡ
