ನವದೆಹಲಿ: ಭಾರತದ ರಾಷ್ಟ್ರಪತಿ Droupadi Murmu ಅವರು ಕೇಂದ್ರ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಒಂದೇ ರಾತ್ರಿ ಒಟ್ಟು 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್ ಗವರ್ನರ್ಗಳ ವರ್ಗಾವಣೆ ಮತ್ತು ನೇಮಕಾತಿ ಆದೇಶ ಹೊರಡಿಸಿದ್ದಾರೆ.ಈ ದಿಢೀರ್ ಬೆಳವಣಿಗೆ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಹೊರಡಿಸಿದ ಈ ಆದೇಶದಂತೆ ಹಲವು ರಾಜ್ಯಗಳ ರಾಜ್ಯಪಾಲರು ಮತ್ತು ಉಪರಾಜ್ಯಪಾಲರ ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ.
ಪ್ರಮುಖ ನೇಮಕಾತಿ ಮತ್ತು ವರ್ಗಾವಣೆಗಳು:-
Vinai Kumar Saxena – Delhi ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ವರ್ಗಾವಣೆಗೊಂಡು Ladakh ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ.
Taranjit Singh Sandhu – Delhi ನೂತನ ಲೆಫ್ಟಿನೆಂಟ್ ಗವರ್ನರ್.
Shiv Pratap Shukla – Himachal Pradesh ರಾಜ್ಯಪಾಲ ಹುದ್ದೆಯಿಂದ ವರ್ಗಾವಣೆಗೊಂಡು Telangana ರಾಜ್ಯಪಾಲ.
Jishnu Dev Varma – Telangana ರಾಜ್ಯಪಾಲ ಹುದ್ದೆಯಿಂದ ವರ್ಗಾವಣೆಗೊಂಡು Maharashtra ರಾಜ್ಯಪಾಲ.
Nand Kishore Yadav – Nagaland ನೂತನ ರಾಜ್ಯಪಾಲ.
Syed Ata Hasnain – Bihar ರಾಜ್ಯಪಾಲರಾಗಿ ನೇಮಕ.
R. N. Ravi – Tamil Nadu ರಾಜ್ಯಪಾಲ ಹುದ್ದೆಯಿಂದ ವರ್ಗಾವಣೆಗೊಂಡು West Bengal ರಾಜ್ಯಪಾಲ.
Rajendra Vishwanath Arlekar – Kerala ರಾಜ್ಯಪಾಲರಾಗಿರುವ ಇವರಿಗೆ Tamil Nadu ರಾಜ್ಯಪಾಲ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ.
Kavinder Gupta – Ladakh ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ವರ್ಗಾವಣೆಗೊಂಡು Himachal Pradesh ರಾಜ್ಯಪಾಲ.
ರಾಜಕೀಯ ಲೆಕ್ಕಾಚಾರಗಳೇನು?
West Bengal ಹಾಗೂ Tamil Nadu ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಇನ್ನೂ ಕೆಲವೇ ವಾರಗಳು ಬಾಕಿ ಇರುವ ಹಿನ್ನೆಲೆ, ಕೇಂದ್ರ ಸರ್ಕಾರದ ಈ ಬದಲಾವಣೆಗಳು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿವೆ. ಚುನಾವಣಾ ದೃಷ್ಟಿಯಿಂದಲೇ ಈ ಬದಲಾವಣೆಗಳನ್ನು ಮಾಡಲಾಗಿದೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ.
