ಸುಂಟೆಕ್ ಎನರ್ಜಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಸೌರ ಇಂಧನ ಪರಿಹಾರ ಒದಗಿಸುವ ಸಂಸ್ಥೆಯಾದ ಟ್ರೂಜೋನ್ ಸೋಲಾರ್ (TRUZON Solar), ಟೀಮ್ ಇಂಡಿಯಾದ ಐಸಿಸಿ ಪುರುಷರ T20 ವಿಶ್ವಕಪ್ 2026 ವಿಜೇತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅದೇ ತಂಡದ ಸದಸ್ಯರಾದ ತಿಲಕ್ ವರ್ಮಾ ಅವರಿಂದ ಹೂಡಿಕೆಯನ್ನು ಪಡೆದುಕೊಂಡಿರುವುದಾಗಿ ಘೋಷಿಸಿದೆ.
ಟ್ರೂಜೋನ್ ಸೋಲಾರ್ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಚಾರುಗುಂಡ್ಲ ಭವಾನಿ ಸುರೇಶ್ ಅವರು, ಇಬ್ಬರೂ ಆಟಗಾರರು ಕಂಪನಿಯಲ್ಲಿ ಹೂಡಿಕೆ ಮಾಡಿರುವುದನ್ನು ಖಚಿತಪಡಿಸಿದ್ದಾರೆ. ಇದು ಸಂಸ್ಥೆಯ ದೀರ್ಘಕಾಲೀನ ದೃಷ್ಟಿಕೋನ ಮತ್ತು ಭಾರತದ ಇಂಧನ ಪರಿವರ್ತನೆಗೆ ಕಂಪನಿಯು ನೀಡುತ್ತಿರುವ ಕೊಡುಗೆಯ ಮೇಲಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಭವಾನಿ ಸುರೇಶ್ ‘ಟ್ರೂಜೋನ್ ಸೋಲಾರ್ ಸೌರ ಇಂಧನ ಕ್ಷೇತ್ರದಲ್ಲಿ 17 ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿದೆ. ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರು ಹೂಡಿಕೆ ಮಾಡಲು ನಿರ್ಧರಿಸಿರುವುದು ನಾವು ಈ ಕ್ಷೇತ್ರದಲ್ಲಿ ಗಳಿಸಿರುವ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ’ ಎಂದರು.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಈಗಾಗಲೇ ಈ ಕಂಪನಿಯಲ್ಲಿ ಹೂಡಿಕೆದಾರರಾಗಿದ್ದಾರೆ. ತೆಲುಗು ಚಲನಚಿತ್ರ ಸೂಪರ್ಸ್ಟಾರ್ ಮಹೇಶ್ ಬಾಬು ಅವರು ಟ್ರೂಜೋನ್ ಸೋಲಾರ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ತುತ ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್ಗಢದಲ್ಲಿ ಪ್ರಬಲ ಅಸ್ತಿತ್ವ ಹೊಂದಿರುವ ಕಂಪನಿಯು, ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಒಡಿಶಾ ರಾಜ್ಯಗಳಿಗೆ ತನ್ನ ಸೇವೆಯನ್ನು ವಿಸ್ತರಿಸಲು ಯೋಜಿಸಿದೆ.
ಪನಿಯು ಸದ್ಯ 580ಕ್ಕೂ ಹೆಚ್ಚು ವೃತ್ತಿಪರರನ್ನು ಹೊಂದಿದ್ದು, 82ಕ್ಕೂ ಹೆಚ್ಚು ಚಾನಲ್ ಪಾಲುದಾರರು ಮತ್ತು ಸೇವಾ ಕೇಂದ್ರಗಳ ಬಲವಾದ ವ್ಯವಸ್ಥೆಯನ್ನು ಹೊಂದಿದೆ.
ತನ್ನ ಮಾತೃ ಸಂಸ್ಥೆಯಾದ ಸುಂಟೆಕ್ ಎನರ್ಜಿ ಸಿಸ್ಟಮ್ಸ್ ಮೂಲಕ, ಟ್ರೂಜೋನ್ ಸೋಲಾರ್ ಭಾರತದಾದ್ಯಂತ ಸೌರ ಶಕ್ತಿಯ ಬಳಕೆಯನ್ನು ಹೆಚ್ಚಿಸಲು ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ. ಹೆಚ್ಚುತ್ತಿರುವ ಹೂಡಿಕೆದಾರರ ವಿಶ್ವಾಸದೊಂದಿಗೆ, ಕಂಪನಿಯು ಈಗ ತನ್ನ ರಾಷ್ಟ್ರೀಯ ವ್ಯಾಪ್ತಿಯನ್ನು ವಿಸ್ತರಿಸಲು ಸಜ್ಜಾಗಿದೆ.
