ತುಮಕೂರು- ಓರ್ವ ವೈದ್ಯನಿಗೆ ರೋಗಿಗಿಂತ ದೊಡ್ಡವರು ಯಾರು ಇಲ್ಲ.ರೋಗಿಯನ್ನು ಉಪಚರಿಸಲು ನಮಗೆ ದೇವರೇ ನೀಡಿದ ಅವಕಾಶ ಎಂದು ತಿಳಿದು ಸೇವೆ ಮಾಡಿದರೆ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದು ಎಂದು ಚೆನೈ ಜೆಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಪಳನಿವೇಲು ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಮತ್ತು ಡಾ.ಎಂ.ಆರ್.ಹುಲಿನಾಯ್ಕರ್ ಪ್ರತಿಷ್ಠಾನವತಿಯಿಂದ ಆಯೋಜಿಸಿದ್ದ ಸಂಸ್ಥೆಯ ಡಾ.ಎಂ.ಆರ್.ಹುಲಿನಾಯ್ಕರ್ ಮತ್ತು ಶ್ರೀಮತಿ ಶಾಂತಾದುರ್ಗಾದೇವಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡುತಿದ್ದ ಅವರು,ವೈದ್ಯನಲ್ಲಿರುವ ಅಧ್ಯಾತ್ಮ ಪ್ರಚೋದನೆಗೊಂಡಾಗಲೇ ಒಳ್ಳೆಯ ಸೇವೆ ದೊರೆಯಲು ಸಾಧ್ಯ ವೃತ್ತಿಗೆ ಹೆಚ್ಚು ಗೌರವ ನೀಡಿ, ಹಣಕ್ಕಲ್ಲ ಎಂದರು.
ಸಮಯವೆಂಬುದು ಬಹು ಅಮೂಲ್ಯ,ಭಾರತೀಯರಲ್ಲಿ ಕೌಶಲ್ಯಕ್ಕೆ ಕೊರತೆ ಇಲ್ಲ.ನಮ್ಮಲ್ಲಿ ಸಾಧನೆಯ ಕಡೆಗೆ ಪ್ರಯತ್ನವಿಲ್ಲದೆ ಇನ್ನೊಬ್ಬರನ್ನು ದೂರುವ ಅಗತ್ಯವಿಲ್ಲ. ಯುವಕರಾಗಿದ್ದಾಗಲೇ ಎನಾದರೂ ಸಾಧಿಸಲು ಪ್ರಯತ್ನಿಸಿ,ಅತಿ ಹೆಚ್ಚು ಶ್ರಮ ವಹಿಸಬೇಕೆಂದು ಯುವ ವೈದ್ಯರಿಗೆ ಡಾ.ಪಳನಿವೇಲು ಸಲಹೆ ನೀಡಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ,ಡಾ.ಪಳನಿವೇಲು ಅವರು ತಮ್ಮ ಇಡೀ ಜೀವನವನ್ನು ವೈದ್ಯಕೀಯ ಕ್ಷೇತ್ರಕ್ಕೆ ಮುಡಿಪಾಗಿಟ್ಟಿದ್ದಾರೆ.ಅವರಿಗೆ ಬೇರೆಯ ಚಟಗಳಿಲ್ಲ. ವೃತ್ತಿಯನ್ನೇ ಚಟವಾಗಿಸಿಕೊಂಡಿದ್ದಾರೆ. ನಾನು ಕೂಡ ವೃತ್ತಿಯಲ್ಲಿ ವೈದ್ಯನಾಗಿ, ಡಾ.ಪಳನಿವೇಲು ಅವರಿಂದ ಲ್ಯಾಪ್ರೋಸ್ಕೋಪಿ ಶಸ್ತçಚಿಕಿತ್ಸೆ ತರಬೇತಿ ಪಡೆದು, ಅದನ್ನು ನನ್ನ ವೃತ್ತಿಯಲ್ಲಿ ಬಳಕೆ ಮಾಡಿ, ಸಾವಿರಾರು ರೋಗಿಗಳಿಗೆ ಸೇವೆ ಒದಗಿಸಿದ್ದೇನೆ.ಇಬ್ಬರ ಜೀವನದ ನಡುವೆ ಹೊಲಿಕೆ ಇದೆ. ಅಂತಹ ವ್ಯಕ್ತಿಗೆ ನಮ್ಮ ಪ್ರತಿಷ್ಠಾನದಿಂದ ಮೊದಲನೇ ಬಾರಿಗೆ ಪ್ರಶಸ್ತಿ ನೀಡುತ್ತಿರುವುದು ಖುಷಿ ತಂದಿದೆ ಎಂದರು.
ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಈಶ್ವರ್ ಹೊಸಮನಿ ಉಪಸ್ಥಿತರಿದ್ದರು, ಸುವರ್ಣಮುಖಿ ಸಂಸ್ಕöÈತಿ ಧಾಮದ ಸಂಸ್ಥಾಪಕರಾದ ಡಾ.ಆಚಾರ್ಯ ಎಂ.ನಾಗರಾಜು ಮಾತನಾಡಿ,ವೈದ್ಯೋ ನಾರಾಯಣೋ ಹರಿ ಎಂದರೆ ವೈದ್ಯರು ನಾರಾಯಣನ ಸ್ವರೂಪ ಎಂದಲ್ಲ.ವೈದ್ಯರಿಗೆ ರೋಗಿ ನಾರಾಯಣನ ಸ್ವರೂಪ.ಹಾಗೆ ತಿಳಿದರೆ ಮಾತ್ರ ಒಳ್ಳೆಯ ಸೇವೆ ನೀಡಲು ಸಾಧ್ಯ.ಎಲ್ಲರ ಸಂತೋಷವೇ ನನ್ನ ಸಂತೋಷ ಎಂದರೆ ಅದಕ್ಕಿಂತ ದೊಡ್ಡ ಪೂಜೆ ಮತ್ತೊಂದಿಲ್ಲ.ನಮ್ಮಲ್ಲಿ ಹೇಳಿಕೆಗೂ, ನಡೆವಳಿಕೆಗೂ ಸಾಕಷ್ಟು ವೆತ್ಯಾಸವಿದೆ.ಮಹಿಳೆಯರನ್ನು ದೇವರು ಎಂದು ಹೇಳುವ ನಾವು, ಅವರ ಮೇಲಿನ ದೌರ್ಜನ್ಯಗಳನ್ನು ಕಂಡು ಕಾಣದಂತೆ ಇದ್ದೇವೆ.ಇದು ಬದಲಾಗಬೇಕು ಎಂದರು.
ವೇದಿಕೆಯಲ್ಲಿ ಶ್ರೀಮತಿಶಾಂತ ದುರ್ಗಾದೇವಿ, ಡಾ.ರಮಣ್ ಹುಲಿನಾಯ್ಕರ್,ಡಾ.ಲಾವಣ್ಯ ರಮಣ ಹುಲನಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ನೂರಾರು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
– ಕೆ.ಬಿ.ಚಂದ್ರಚೂಡ
