ಕೊರಟಗೆರೆ:– ಅಧಿಕಾರಿಗಳೇ ದಿನದ ಅರ್ಧದಿನ ಕಚೇರಿಯಲ್ಲಿ ಜನರ ಕೆಲಸ ಮಾಡಿ ಇನ್ನೂಳಿದ ಅರ್ಧದಿನ ಇಲಾಖೆ ಕಾರ್ಯವ್ಯಾಪ್ತಿಗೆ ಹೋಗಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ರೇ 6ತಿಂಗಳಲ್ಲಿ ಆಗುವ ಕೆಲಸ ಕೇವಲ ಮೂರೇ ತಿಂಗಳಲ್ಲಿ ಆಗುತ್ತೇ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೊರಟಗೆರೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಜನಸಂಪರ್ಕ ಮತ್ತು ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸರಕಾರದಿಂದ ಕಾಮಗಾರಿಗಳ ಅನುಮೋದನೆ ಸಿಕ್ಕಿದೆ, ಸರಕಾರಿ ಇಲಾಖೆಗಳಿಂದ ಅನುಧಾನಗಳು ಬಿಡುಗಡೆ ಆಗಿದೆ, ಆದರೇ ಕಾಮಗಾರಿಗಳೇ ಪ್ರಾರಂಭವಾಗಿಲ್ಲ ಏಕೆ. ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಲು 6ತಿಂಗಳು ಏಕೆ ಬೇಕು. ಸಮಸ್ಯೆ ಇದ್ರೇ ನೇರವಾಗಿ ನನ್ನ ಗಮನಕ್ಕೆ ತನ್ನಿ ತಕ್ಷಣ ಪರಿಹಾರ ನೀಡುವ ಕೆಲಸ ಮಾಡೋಣ ಎಂದರು.
ಸರಕಾರಿ ಇಲಾಖೆಗಳ ಅಧಿಕಾರಿವರ್ಗ ಜನಪರವಾಗಿ ಕೆಲಸ ಮಾಡಬೇಕಿದೆ. ಗ್ರಾಮೀಣ ಭಾಗದ ರೈತರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತರಬಾರದು. ಕೊರಟಗೆರೆಯ ಬಡಜನರ ಸಮಸ್ಯೆ ನನ್ನ ಕಚೇರಿಗೆ ಬಂದ್ರೇ ಅಂತಹ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳುತ್ತೇನೆ. ಜನರ ಸಮಸ್ಯೆ ಬಗೆಹರಿಸುವುದರ ಜೊತೆ ಅಭಿವೃದ್ದಿ ಕಾಮಗಾರಿಯ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಜಿಪಂ ಸಿಇಓ ಆಗಿ ಈಗ ಜಿಲ್ಲಾಧಿಕಾರಿ
ನಾನು ಜಿಪಂ ಸಿಇಓ ಆಗಿ ಈಗ ಜಿಲ್ಲಾಧಿಕಾರಿ ಆಗಿದ್ದೀನಿ. ನನಗೇ ಗ್ರಾಪಂಗೆ ಬರುವ ಅನುಧಾನಗಳ ಬಗ್ಗೆ ಮಾಹಿತಿ ಇದೆ. ಗ್ರಾಮಗಳ ಸ್ವಚ್ಚತೆಗೆ 15ನೇ ಹಣಕಾಸು ಅಥವಾ ವರ್ಗ-1ರ ಹಣ ಬಳಕೆಗೆ ಅವಕಾಶವಿದೆ. ಗ್ರಾಮಗಳ ನೈರ್ಮಲ್ಯಕ್ಕೆ ಪ್ರಮುಖ ಆಧ್ಯತೆ ನೀಡಬೇಕು. ಅನಾರೋಗ್ಯ ಹರಡದಂತೆ ಗ್ರಾಪಂ ಪಿಡಿಓಗಳು ತುರ್ತಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಓ ಅಶ್ವಿಜಾ, ಮಧುಗಿರಿ ಎಸಿ ಶಿವಪ್ಪ ಗೋಟೋರು, ತಹಶೀಲ್ದಾರ್ ಮಂಜುನಾಥ, ತಾಪಂ ಇಓ ಅಪೂರ್ವ, ಸಿಪಿಐ ಅನಿಲ್, ಸಮಾಜ ಕಲ್ಯಾಣ ಯಮೂನಾ, ಹಿಂದುಳಿದ ವರ್ಗದ ಅನಂತರಾಜು, ಸಿಡಿಪಿಓ ಗಂಗಾಧರ್, ಬೆಸ್ಕಾಂ ಎಇಇ ಪ್ರಸನ್ನಕುಮಾರ್, ಪಿಡಬ್ಲ್ಯೂಡಿ ಎಇಇ ದೀಪಕ್, ಪಪಂ ಸಿಇಓ ಉಮೇಶ್, ಗ್ರಾಮೀಣ ಎಇಇ ಕಾಂತರಾಜು, ಜಿಪಂ ದಯಾನಂದ ಸೇರಿದಂತೆ ಇತರರು ಹಾಜರಿದ್ದರು.

*ಸ್ಥಳದಲ್ಲಿಯೇ ಪಡಿತರ ಚೀಟಿ ಮಂಜೂರು
ಅರ್ಜಿ ಹಿಡಿದು ಜಿಲ್ಲಾಧಿಕಾರಿಗಳ ಮುಂದೆ ತನ್ನ ಅಸಹಾಯಕತೆಯನ್ನು ಅಂಗಲಾಚಿದ ವಿಶೇಷ ಚೇತನ ವ್ಯಕ್ತಿಗೆ ಸ್ಥಳದಲ್ಲಿಯೇ ಪಡಿತರ ಚೀಟಿ ಮಂಜೂರು ಮಾಡುವ ಮುಖ್ಯನಾ ಡಿಸಿ ಶುಭಾ ಕಲ್ಯಾಣ್ ಮಾನವೀಯತೆ ಮೆರೆದರು.
*ಯಶಸ್ವಿಯಾದ ಜನಸಂಪರ್ಕ ಸಭೆ
ಕೊರಟಗೆರೆ ಪಟ್ಟಣದ ಆಡಳಿತ ಸೌಧದಲ್ಲಿ ಆಯೋಜನೆಗೊಂಡ ಜನ ಸಂಪರ್ಕ ಸಭೆ ಬಹಳ ವ್ಯವಸ್ಥಿತವಾಗಿ ಸ್ವತಹ ತಾಸಿಶೀಲ್ದಾರ್ ಮಂಜುನಾಥ್ ಅವರು ಕಾಳಜಿ ವಹಿಸಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಸ್ವತಹ ಅರ್ಜಿ ಸ್ವೀಕಾರ ಮಾಡಿದರು, ಕೆಲವು ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಮುಖ್ಯನ ಸ್ವೀಕರಿಸಿ ಸ್ಥಳದಲ್ಲಿಯೇ ಒಂದಷ್ಟು ಅರ್ಜಿಗಳು ಇತ್ಯರ್ಥಗೊಂಡವು, 150ಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರಗೊಂಡು ಅತಿ ಜೋರಾಗಿ ಅರ್ಜಿ ವಿಲೇವಾರಿ ಕುಳಿಸಿ ಸಾರ್ವಜನಿಕರಿಗೆ ಪರಿಹಾರ ಕಲ್ಪಿಸುವಂತೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
150ಕ್ಕೂ ಅಧಿಕ ಅರ್ಜಿಗಳ ಸ್ವೀಕಾರ..
20ಕ್ಕೂ ಅಧಿಕ ಇಲಾಖೆ ಗಳಿಂದ 150ಕ್ಕೂ ಅಧಿಕ ಜನರು ಜಿಲ್ಲಾಧಿಕಾರಿಗಳಿಗೆ ಅರ್ಜಿಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಸ್ಪಂಧಿಸಿ 27ಜನರ ಸಮಸ್ಯೆಯ ಬಗ್ಗೆ ನಾನೇ ಖುದ್ದಾಗಿ ಬಗೆಹರಿಸುತ್ತೇನೆ. ಇನ್ನೂಳಿದ ಅರ್ಜಿಗಳನ್ನು ವಾರದೊಳಗೆ ಬಗೆಹರಿಸಿ ಮಾಹಿತಿ ನೀಡುವಂತೆ ಸೂಚಿಸಿದರು.
ತುಮಕೂರು ಜಿಲ್ಲೆಗೆ ಪ್ರತಿನಿತ್ಯ 2ಸಾವಿರ ಸಿಲಿಂಡರ್ ಬೇಡಿಕೆ ಇದೆೆ. 20ಸಾವಿರ ಸಿಲಿಂಡರ್ 25ಗೌಡನ್ಗಳಲ್ಲಿ ಸಂಗ್ರಹವಿದೆ. 5ಲಾರಿಗಳಲ್ಲಿ ಈಗಾಗಲೇ ಬೇಡಿಕೆಗೆ ಅನುಗುಣವಾಗಿ 3500 ಸಿಲಿಂಡರ್ ತುಮಕೂರಿಗೆ ಇವತ್ತು ಬರ್ತಿದೆ. ತುಮಕೂರು ಜಿಲ್ಲೆಯ ಗ್ರಾಹಕರು ಮತ್ತು ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ.
– ಶುಭಕಲ್ಯಾಣ್. ಜಿಲ್ಲಾಧಿಕಾರಿ. ತುಮಕೂರು.
ವರದಿ- ಶ್ರೀನಿವಾಸ್ ಕೊರಟಗೆರೆ.
