ಕೆ.ಆರ್.ಪೇಟೆ,ಮಾ.16: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿ ನಾಗರಘಟ್ಟ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ 10ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8ಮಂದಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾಗಿ ಭರ್ಜರಿ ಗೆಲುವು ಸಾಧಿಸಿದ ನೂತನ ನಿರ್ದೇಶಕರಾದ ಎನ್.ಕೆ.ಪ್ರೇಮಮಂಜೇಗೌಡ, ಸುಜಾತ ಕುಮಾರಸ್ವಾಮಿ, ಪ್ರೇಮಮಹಾದೇವು, ರಾಣಿಪ್ರಭಾಕರ್, ಭಾರತಿಚಂದ್ರಶೇಖರ್, ಮೀನಾಕ್ಷಿಮೂರ್ತಾಚಾರ್, ಯೋಗಲಕ್ಷ್ಮಿವೆಂಕಟರಾಮು, ಮಂಜುಳಾಲವಕುಮಾರ್, ಜಯಭೇರಿ ಬಾರಿಸಿದ್ದಾರೆ. ಗ್ರಾ.ಪಂ.ಸದಸ್ಯೆ ದಿವ್ಯಶ್ರೀಯದುಕುಮಾರ್, ವಿಶಾಲಾಕ್ಷಿದೊಡ್ಡೇಗೌಡ ಅವರನ್ನು ಶಾಸಕರು ತಮ್ಮ ತಾಲ್ಲೂಕು ಜೆಡಿಎಸ್ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ನೂತನ ನಿರ್ದೇಶಕರಾಗಿ ಆಯ್ಕೆಯಾದ ಎಲ್ಲಾ ನಿರ್ದೇಶಕರುಗಳನ್ನು ಶಾಸಕ ಹೆಚ್.ಟಿ.ಮಂಜು, ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ನಿರ್ದೇಶಕ ನಾಗರಘಟ್ಟ ಎನ್.ಕೆ.ದಿಲೀಪ್ಕುಮಾರ್, ಅಘಲಯ ವಿ.ಎಸ್.ಎಸ್.ಎನ್.ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಮಂಜೇಗೌಡ, ಮಾಜಿ ಅಧ್ಯಕ್ಷೆ ಆಶಾನಾಗೇಂದ್ರ, ಗ್ರಾಮದ ಮುಖಂಡರಾದ ಎನ್.ಎಂ.ಉಮೇಶ್, ಅಘಲಯ ಸೊಸೈಟಿ ನಿರ್ದೇಶಕ ಮಂಜು, ಕುಮಾರ್, ಪುಟ್ಟೇಗೌಡ, ಅನಿಲ್, ದಿವಾಕರ್, ಅನಿಲ್ ಕುಮಾರ್, ಲೋಕೇಶ್, ನಾಗರಾಜು, ಚಂದ್ರೇಗೌಡ, ಪ್ರಭಾಕರ್, ದೊಡ್ಡೇಗೌಡ, ಯದುಕುಮಾರ್, ನಾಗಣ್ಣ, ಕುಮಾರ್, ಪುಟ್ಟಸ್ವಾಮಿ, ಡಿ.ಎಸ್.ನಾಗೇಂದ್ರ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ನೂತನ ನಿರ್ದೇಶಕರನ್ನು ಶಾಸಕ ಹೆಚ್.ಟಿ.ಮಂಜು ಅಭಿನಂದಿಸಿ ಮಾತನಾಡಿ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ ಇವುಗಳನ್ನು ಅಭಿವೃದ್ಧಿ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು. ಈ ಮೂಲಕ ರೈತರ ಅಭಿವೃದ್ದಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
-ಶ್ರೀನಿವಾಸ್ ಆರ್.
