ತುಮಕೂರು: ನಗರ ಸಮೀಪ ಬಿದರೆಕಟ್ಟೆ ಬಳಿ ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಸುಸಜ್ಜಿತವಾಗಿ ಅಭಿವೃದ್ಧಿಯಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪ್ರಶಾಂತತಾಣವಾಗುತ್ತಿದೆ.ಜ್ಞಾನಸಿರಿ ಕ್ಯಾಂಪಸ್ ಅಭಿವೃದ್ಧಿಗೆ ಹಲವಾರು ಶಿಕ್ಷಣ ಪ್ರೇಮಿಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವಹಿಸಿಕೊಂಡು ನಿರ್ವಹಿಸುತ್ತಿದ್ದಾರೆ ಎಂದು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಹೇಳಿದರು.
ಯುಗಾದಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಸಮಾಜ ಸೇವಕರೂ ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಶಬ್ಬೀರ್ಅಹ್ಮದ್, ಎಸ್.ರಾಮಚಂದ್ರರಾವ್, ಕೋಮಲವೀರಭದ್ರಯ್ಯ, ರಾಮಣ್ಣ, ರಫೀಕ್ಅಹ್ಮದ್, ಇಮ್ರಾನ್ಅಹ್ಮದ್ಅವರು ಕುಲಪತಿ ಪ್ರೊ.ವೆಂಕಟೇಶ್ವರ್ಅವರಿಗೆ ಶುಭಾಶಯ ಕೋರಿ ಸನ್ಮಾನಿಸಿದರು.
ಸಾರ್ವಜನಿಕರ ಸಹಯೋಗವಿದ್ದರೆ ವಿಶ್ವವಿದ್ಯಾಲಯವು ಉತ್ತಮವಾಗಿ ಬೆಳವಣಿಗೆಯಾಗುತ್ತದೆ.ತುಮಕೂರು ಕ್ಯಾಂಪಸ್ನಲ್ಲಿ ದಾನಿಗಳ ನೆರವಿನಿಂದ ಅನ್ನಪೂರ್ಣ ಯೋಜನೆಯಡಿ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಜ್ಞಾನಸಿರಿ ಕ್ಯಾಂಪಸ್ನಲ್ಲಿ ಕೂಡಾ ಅನೇಕ ದಾನಿಗಳು ವಿವಿಧ ಸೇವಾ ಜವಾಬ್ದಾರಿ ವಹಿಸಿಕೊಂಡು ಕಾಳಜಿಯಿಂದ ಸಹಕರಿಸಿದ್ದಾರೆ.ಸಾರ್ವಜನಿಕರು, ಸಂಘ ಸಂಸ್ಥೆಗಳು ವಿಶ್ವವಿದ್ಯಾಲಯದ ಬೆಳವಣಿಗೆಗೆ ಸ್ಪಂದಿಸಬೇಕು ಎಂದು ಪ್ರೊ.ವೆಂಕಟೇಶ್ವರಲು ಈ ವೇಳೆ ಹೇಳಿದರು.
ವರದಿ : ಕೆ ಬಿ ಚಂದ್ರಚೂಡ್
