ಬೆಂಗಳೂರು, ಮಾ.20: ಕನ್ನಡದ ಖ್ಯಾತ ಕವಿ, ಚಿಂತಕ ಹಾಗೂ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಅವರ ಜೀವನ ಮತ್ತು ಸಾಹಿತ್ಯ ಕುರಿತಾಗಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಆಯೋಜಿಸಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭಾರತಿ – ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ (ಶಿವಮೊಗ್ಗ) ಇವರ ಸಹಯೋಗದಲ್ಲಿ ಈ ವಿಚಾರ ಸಂಕಿರಣವು ಏಪ್ರಿಲ್ 6 ಮತ್ತು 7, 2026ರಂದು ನಡೆಯಲಿದೆ.
ಸಾಹಿತ್ಯಾಸಕ್ತರಿಂದ ಲೇಖನ ಆಹ್ವಾನ
ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಲೇಖನ ಮಂಡಿಸಲು ಆಸಕ್ತ 20ರಿಂದ 50 ವರ್ಷದೊಳಗಿನ ಸಾಹಿತ್ಯಾಸಕ್ತರಿಂದ ಅಕಾಡೆಮಿ ಲೇಖನಗಳನ್ನು ಆಹ್ವಾನಿಸಿದೆ.
ರಾಜ್ಯದ ಎಲ್ಲಾ ಭಾಗಗಳ ಆಸಕ್ತರು ‘ಜಿ.ಎಸ್. ಶಿವರುದ್ರಪ್ಪ ಅವರ ಜೀವನ ಮತ್ತು ಸಾಹಿತ್ಯದ ಆಧಾರದ ಮೇಲೆ’ ಲೇಖನವನ್ನು ಕಳುಹಿಸಬಹುದಾಗಿದೆ.
ಲೇಖನ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31, 2026 ಎಂದು ನಿಗದಿಪಡಿಸಲಾಗಿದೆ.
ಲೇಖನ ಸಲ್ಲಿಕೆಗೆ ಪ್ರಮುಖ ನಿಯಮಗಳು
ಅಕಾಡೆಮಿ ಪ್ರಕಟಿಸಿರುವ ಮಾರ್ಗಸೂಚಿಗಳ ಪ್ರಕಾರ:
-
ಅಭ್ಯರ್ಥಿಗಳ ವಯಸ್ಸು 20 ರಿಂದ 50 ವರ್ಷಗಳೊಳಗೆ ಇರಬೇಕು
-
ಲೇಖನದೊಂದಿಗೆ ಹೆಸರು, ಸ್ಥಳ, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ ಹಾಗೂ ಪ್ರಕಟಿತ ಲೇಖನಗಳ ವಿವರ ಸಲ್ಲಿಸಬೇಕು
-
ಲೇಖನವು ಸ್ವಂತ ರಚನೆಯಾಗಿರಬೇಕು
-
ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು
-
ಲೇಖನವು 4 ಪುಟಗಳ ಮಿತಿಯಲ್ಲಿರಬೇಕು
-
ಲಕೋಟೆಯ ಮೇಲ್ಭಾಗದಲ್ಲಿ ‘ಜಿ.ಎಸ್. ಶಿವರುದ್ರಪ್ಪ ಅವರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ’ ಎಂದು ನಮೂದಿಸಬೇಕು
ಆಯ್ಕೆಯಾದವರಿಗೆ ಊಟ, ವಸತಿ – ಪ್ರಯಾಣ ಭತ್ಯೆ ಇಲ್ಲ
ಆಯ್ಕೆಯಾದ ಭಾಗವಹಿಸುವವರಿಗೆ ಕಾರ್ಯಕ್ರಮ ನಡೆಯುವ ದಿನಗಳಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುತ್ತದೆ.
ಅಕಾಡೆಮಿ ನಿಯಮಾನುಸಾರ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
ಆದರೆ ಯಾವುದೇ ಪ್ರಯಾಣ ಭತ್ಯೆ (TA/DA) ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪಟ್ಟಿ ವೆಬ್ಸೈಟ್ನಲ್ಲಿ ಪ್ರಕಟಣೆ
ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಕೊನೆಯ ದಿನಾಂಕದ ಬಳಿಕ ಬರುವ ಲೇಖನಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಕಾಡೆಮಿ ತಿಳಿಸಿದೆ.
ಲೇಖನ ಸಲ್ಲಿಸುವ ವಿಳಾಸ
ಲೇಖನಗಳನ್ನು ಕೊರಿಯರ್/ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ ಸಲ್ಲಿಸಬಹುದು.
ಅಂಚೆ ವಿಳಾಸ:
ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ,
2ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ,
ಬೆಂಗಳೂರು – 560002.
ದೂರವಾಣಿ: 080-29601730
