ಪ್ರಕೃತಿಯ ಸೃಷ್ಟಿ ಬಹಳ ವಿಚಿತ್ರ ಮತ್ತು ಸಂಕೀರ್ಣವಾದುದು. ಅದರಲ್ಲೂ ಪ್ರಾಣಿ ಪ್ರಪಂಚದಲ್ಲಿ ಕೆಲವುಗಳ ವರ್ತನೆಗಳು ನಮಗೆ ಆಶ್ಚರ್ಯ ಉಂಟುಮಾಡುತ್ತವೆ. ಅಂತಹವುಗಳಲ್ಲಿ ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ಬೃಹತ್ ‘ಹಸಿರು ಅನಕೊಂಡ’ಗಳ (Green Anacondas) ಸಂತಾನೋತ್ಪತ್ತಿ ಪ್ರಕ್ರಿಯೆ ಕೂಡ ಒಂದು.
ಸಂ*ಭೋಗದ ನಂತರ ಹೆಣ್ಣು ಹಾವು ಗಂಡು ಹಾವನ್ನು ನುಂಗಿ ಹಾಕುವ ಈ ವಿಶಿಷ್ಟ ಪ್ರವೃತ್ತಿಯ ಹಿಂದಿನ ಕಾರಣಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಸಾಮಾನ್ಯವಾಗಿ ಹಾವಿನ ಸಂ*ಭೋಗವನ್ನೂ ನಾವು ‘ಶೃಂಗಾರ ‘ ಅಥವಾ ಕಾ*ಮದಾಟ ಎನ್ನುತ್ತೇವೆ. ಆದರೆ ಅನಕೊಂಡಗಳ ವಿಷಯಕ್ಕೆ ಬಂದರೆ ಇದು ಕೇವಲ ಪ್ರೀತಿಯಲ್ಲ, ಅಳಿವು-ಉಳಿವಿನ ಹೋರಾಟವೂ ಹೌದು. ಸುಮಾರು 29 ಅಡಿಗಳಿಗೂ ಹೆಚ್ಚು ಉದ್ದ ಬೆಳೆಯುವ, ನೂರಾರು ಕೆಜಿ ತೂಕವಿರುವ ಈ ದೈತ್ಯ ಹಾವುಗಳ ಸಂ*ಭೋಗ ಪ್ರಕ್ರಿಯೆಯ ನಂತರ ಹೆಣ್ಣು ಹಾವು ಗಂಡನ್ನು ಆಹಾರವಾಗಿಸಿಕೊಳ್ಳುತ್ತದೆ ಎಂಬ ಅಂಶ ಸಂಶೋಧನೆಯಿಂದ ಹೊರಬಂದಿದೆ.
ಏಕೆ ಈ ಭೀಕರ ವರ್ತನೆ?
ಗಾತ್ರದಲ್ಲಿನ ವ್ಯತ್ಯಾಸ
ಹೆಣ್ಣು ಅನಕೊಂಡಗಳು ಗಂಡು ಹಾವುಗಳಿಗಿಂತ 4 ರಿಂದ 5 ಪಟ್ಟು ದೊಡ್ಡದಾಗಿರುತ್ತವೆ. ಹೆಣ್ಣು ಹಾವುಗಳು ಸಾಮಾನ್ಯವಾಗಿ 15 ರಿಂದ 29 ಅಡಿ ಉದ್ದವಿದ್ದು, 170 ಪೌಂಡ್ಗೂ (77 ಕಿಲೋಗ್ರಾಂ) ಹೆಚ್ಚು ತೂಕವಿರುತ್ತವೆ. ಇದಕ್ಕೆ ವಿರುದ್ಧವಾಗಿ ಗಂಡು ಹಾವುಗಳು ಕೇವಲ 9 ರಿಂದ 14 ಅಡಿ ಉದ್ದವಿರುತ್ತವೆ. ಈ ಗಾತ್ರದ ವ್ಯತ್ಯಾಸವೇ ಹೆಣ್ಣು ಹಾವಿಗೆ ಮೇಲುಗೈ ನೀಡುತ್ತದೆ.
ಗಂಡು ಹಾವು ಅವಳಿಗೆ ಬಲವರ್ಧಕ ಆಹಾರ
ಹೆಣ್ಣು ಅನಕೊಂಡಗಳು ಗರ್ಭ ಧರಿಸಿದ ನಂತರ ಸುಮಾರು 7 ತಿಂಗಳ ಕಾಲ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಈ ದೀರ್ಘಾವಧಿಯ ಉಪವಾಸದ ಸಮಯದಲ್ಲಿ ತನ್ನ ದೇಹಕ್ಕೆ ಬೇಕಾದ ಶಕ್ತಿ ಮತ್ತು ಭ್ರೂಣದ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳಿಗಾಗಿ ಅದು ತನ್ನ ಸಂಗಾತಿಯನ್ನೇ ಬಲಿಪಶು ಮಾಡುತ್ತದೆ. ಗಂಡು ಹಾವು ಅವಳಿಗೆ “ಬಲವರ್ಧಕ ಆಹಾರ”ವಾಗಿ ಪರಿಣಮಿಸುತ್ತದೆ.
ಹೆಣ್ಣು ಹಾವಿನ ಸುತ್ತ ಸುತ್ತುವರಿಯುವ ಗಂಡು ಹಾವುಗಳು
ಅನಕೊಂಡಗಳಲ್ಲಿ ಸಂತಾನೋತ್ಪತ್ತಿಯ ವಿಧಾನವೇ ವಿಶಿಷ್ಟ. ಒಂದು ಹೆಣ್ಣು ಹಾವಿನ ಸುತ್ತ ಸುಮಾರು 10 ರಿಂದ 15 ಗಂಡು ಹಾವುಗಳು ಸುತ್ತುವರಿಯುತ್ತವೆ. ಇದನ್ನು ‘ಬ್ರೀಡಿಂಗ್ ಬಾಲ್’ ಎನ್ನಲಾಗುತ್ತದೆ. ಈ ಗಂಡು ಹಾವುಗಳು ಹೆಣ್ಣಿನೊಂದಿಗೆ ಸಂಭೋಗಿಸಲು ದಿನಗಟ್ಟಲೆ ಹೋರಾಡುತ್ತವೆ. ಅಂತಿಮವಾಗಿ ಯಶಸ್ವಿಯಾದ ಗಂಡು ಹಾವನ್ನು ಅಥವಾ ಸಮೀಪವಿರುವ ಹಾವನ್ನು ಹೆಣ್ಣು ಹಾವು ತಿಂದು ಹಾಕಬಹುದು.
ಫೆರೋಮೋನ್ಸ್ ಪಾತ್ರ
ಹೆಣ್ಣು ಹಾವು ಪೊರೆ ಬಿಡುವ ಸಮಯದಲ್ಲಿ ‘ಫೆರೋಮೋನ್ಸ್’ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಈ ವಾಸನೆಯನ್ನು ಆಘ್ರಾಣಿಸಿ ಗಂಡು ಹಾವುಗಳು ಹೆಣ್ಣಿನ ಬಳಿ ಬರುತ್ತವೆ. ಹೆಣ್ಣು ಹಾವು ಎಷ್ಟು ದೊಡ್ಡದಾಗಿದೆಯೋ ಅಷ್ಟು ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ ಎಂಬ ಕಾರಣಕ್ಕೆ ಗಂಡು ಹಾವುಗಳು ದೊಡ್ಡ ಹೆಣ್ಣನ್ನು ಹುಡುಕಿಕೊಂಡು ಹೋಗುತ್ತವೆ.
ಅತೃಪ್ತಿ ಮತ್ತು ವೈವಿಧ್ಯತೆ
ಒಂದು ವೇಳೆ ಸಂ*ಭೋಗದಲ್ಲಿ ತೃಪ್ತಿ ಸಿಗದಿದ್ದರೆ ಹೆಣ್ಣು ಹಾವು ಗಂಡನ್ನು ಹತ್ತಿರ ಸೇರಿಸದೆ ಮತ್ತೊಂದು ಹಾವಿಗಾಗಿ ಕಾಯುತ್ತದೆ. ಅಲ್ಲದೆ, ಒಂದು ಹೆಣ್ಣು ಹಾವು ಕೇವಲ ಒಬ್ಬ ಸಂಗಾತಿಗೆ ಸೀಮಿತವಾಗದೆ, ಬೇರೆ ಬೇರೆ ಗಂಡು ಹಾವುಗಳ ಜೊತೆಗೂ ಸೇರಲು ಆಸಕ್ತಿ ತೋರಿಸುತ್ತದೆ.
ಪ್ರಾಣಿ ಪ್ರಪಂಚದಲ್ಲಿ ಇಂತಹ ವರ್ತನೆಯನ್ನು ‘ಸೆ*ಕ್ಷುಯಲ್ ಕ್ಯಾನಿಬಾಲಿಸಂ’ ಎಂದು ಕರೆಯುತ್ತಾರೆ. ಇದು ಕೇವಲ ಅನಕೊಂಡಗಳಲ್ಲಿ ಮಾತ್ರವಲ್ಲದೆ, ಕೆಲವು ಜಾತಿಯ ಜೇಡಗಳು ಮತ್ತು ಪ್ರೇಯಿಂಗ್ ಮ್ಯಾಂಟಿಸ್ಗಳಲ್ಲೂ ಕಂಡುಬರುತ್ತದೆ. ಇದು ಪ್ರಕೃತಿಯಲ್ಲಿ ಜೀವವಿಕಾಸದ ಒಂದು ಭಾಗವಾಗಿದೆ.
