ಬೆಂಗಳೂರು, 23 ಮಾರ್ಚ್ 2026: ಪ್ಲಂಬಿಂಗ್ ಮತ್ತು ನೀರು ನಿರ್ವಹಣಾ ಉತ್ಪನ್ನಗಳನ್ನು ಒದಗಿಸುವ ಭಾರತದ ಪ್ರಮುಖ ಸಂಸ್ಥೆಯಾದ ‘ಆಶೀರ್ವಾದ್ ಬೈ ಅಲಿಯಾಕ್ಸಿಸ್’ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಿಗ್ಗೆ 10:30ಕ್ಕೆ ತನ್ನ ಡೀಲರ್ ಗಳಿಗಾಗಿ ಅದ್ಧೂರಿ ‘ಹೋಳಿ ಮಿಲನ್’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕರ್ನಾಟಕ ಮತ್ತು ಭಾರತದ ಇತರ ಭಾಗಗಳಿಂದ 2,000ಕ್ಕೂ ಹೆಚ್ಚು ಡೀಲರ್ ಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದು, ಇದು ನಗರದಲ್ಲಿ ಕಂಪನಿಯು ಆಯೋಜಿಸಿದ್ದ ಅತಿದೊಡ್ಡ ಡೀಲರ್ ಸಮಾವೇಶಗಳಲ್ಲಿ ಒಂದಾಗಿದೆ.
ಆಶೀರ್ವಾದ್ ಬೈ ಅಲಿಯಾಕ್ಸಿಸ್ ಸಂಸ್ಥೆಯು ಬೆಂಗಳೂರಿನಲ್ಲಿ ಆರಂಭವಾಗಿದ್ದು, ಕಳೆದ ಮೂರು ದಶಕಗಳಿಂದ ಈ ನಗರವು ಕಂಪನಿಗೆ ಆಯಕಟ್ಟಿನ ಮಾರುಕಟ್ಟೆಯಾಗಿದೆ. ನಂಬಿಕಸ್ತ ಡೀಲರ್ ಗಳ ಬಲವಾದ ಜಾಲದೊಂದಿಗೆ, ಆಶೀರ್ವಾದ್ ಬೈ ಅಲಿಯಾಕ್ಸಿಸ್ ನಗರದಾದ್ಯಂತ ಮತ್ತು ಇಡೀ ಕರ್ನಾಟಕದ ಮನೆಗಳು, ಅಪಾರ್ಟ್ ಮೆಂಟ್ ಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಗುಣಮಟ್ಟದ ಪ್ಲಂಬಿಂಗ್ ಮತ್ತು ನೀರು ನಿರ್ವಹಣಾ ಉತ್ಪನ್ನಗಳನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಬಾಂಧವ್ಯವನ್ನು ಗೌರವಿಸುವ ಕ್ಷಣವಾಗಿ ಇಂದಿನ ಸಂಭ್ರಮಾಚರಣೆ ಮೂಡಿಬಂದಿದ್ದು, ಡೀಲರ್ ಗಳನ್ನು ಕೇವಲ ವ್ಯಾಪಾರ ಪಾಲುದಾರರನ್ನಾಗಿ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲಿ ಆಶೀರ್ವಾದ್ ನ ಪರಂಪರೆಯನ್ನು ನಿರ್ಮಿಸಿದ ಸಹ ನಿರ್ಮಾತೃಗಳೆಂದು ಗೌರವಿಸಲಾಯಿತು.
ಈ ಕಾರ್ಯಕ್ರಮವು ಬೆಂಗಳೂರಿನಲ್ಲಿ ಆಶೀರ್ವಾದ್ ಸಂಸ್ಥೆಯ ವಿತರಣಾ ಮತ್ತು ವ್ಯಾಪಾರ ಜಾಲದ ಶಕ್ತಿಯನ್ನು ಪ್ರತಿಬಿಂಬಿಸಿತು. ವಿತರಕರು, ಮಾರಾಟಗಾರರು ಮತ್ತು ಮಾರಾಟ ತಂಡದವರು ಪಾಲ್ಗೊಂಡಿದ್ದ ಈ ವರ್ಣರಂಜಿತ ಹೋಳಿ ಸಂಭ್ರಮಾಚರಣೆಯು, ಆಶೀರ್ವಾದ್ ಸಂಸ್ಥೆಯು ತನ್ನ ಪಾಲುದಾರರೊಂದಿಗೆ ಹೊಂದಿರುವ ಸುದೀರ್ಘ ಮತ್ತು ಪರಸ್ಪರ ಬಾಂಧವ್ಯವನ್ನು ಎತ್ತಿ ತೋರಿಸಿತು. ಈ ಪಾಲುದಾರರು ಕಳೆದ ಹಲವು ವರ್ಷಗಳಿಂದ ಬ್ರ್ಯಾಂಡ್ ನ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ.
ಈ ಹೋಳಿ ಮಿಲನ್ ಕಾರ್ಯಕ್ರಮವು ದೇಶಾದ್ಯಂತ ನಡೆಯಲಿರುವ ಆಶೀರ್ವಾದ್ ಸಂಸ್ಥೆಯ ಪ್ಯಾನ್ -ಇಂಡಿಯಾ ಹೋಳಿ ಮಿಲನ್ ಸರಣಿಯ ಒಂದು ಭಾಗವಾಗಿದ್ದು, ಮಾರ್ಚ್ 1, 2026 ರಿಂದ ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಯುತ್ತಿದೆ. ಈ ಸರಣಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಬೆಂಗಳೂರು ಆವೃತ್ತಿಯಲ್ಲಿ ಡೀಲರ್ ಗಳಿಗಾಗಿ ವಿಶೇಷವಾಗಿ ರೂಪಿಸಲಾದ ವಿವಿಧ ಕಾರ್ಯಕ್ರಮಗಳು ನಡೆದುವು.
ಈ ಮೂಲಕ ಮಾರುಕಟ್ಟೆಯಲ್ಲಿ ಆಶೀರ್ವಾದ್ ಸಂಸ್ಥೆಯ ಅಸ್ತಿತ್ವವನ್ನು ಗಟ್ಟಿಗೊಳಿಸಿದ ಅಭಿವೃದ್ಧಿ, ನಂಬಿಕೆ ಮತ್ತು ಪಾಲುದಾರಿಕೆಯ ಪಯಣವನ್ನು ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಶೀರ್ವಾದ್ ಬೈ ಅಲಿಯಾಕ್ಸಿಸ್ ಸಂಸ್ಥೆಯ ಕಟ್ಟಡ ವಿಭಾಗದ ಉಪಾಧ್ಯಕ್ಷರಾದ ಸುಬಿಮಲ್ ಶರ್ಮಾ ಅವರು, “ಆಶೀರ್ವಾದ್ ಸಂಸ್ಥೆಯ ಪ್ರಯಾಣವು ಯಾವಾಗಲೂ ನಂಬಿಕೆ, ಬಾಂಧವ್ಯ ಮತ್ತು ಅದರ ಪಾಲುದಾರರ ಶಕ್ತಿಯ ಮೇಲೆ ನಿಂತಿದೆ. ನಮ್ಮ ಮಾರಾಟಗಾರರು ಮತ್ತು ವಿತರಕರ ಜಾಲವು ಬ್ರ್ಯಾಂಡ್ ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಜಾಲವು ಕಳೆದ ಹಲವು ವರ್ಷಗಳಲ್ಲಿ ಮಾರುಕಟ್ಟೆಯಾದ್ಯಂತ ಬಲವಾದ ಮತ್ತು ಸುಸ್ಥಿರ ಅಸ್ತಿತ್ವವನ್ನು ನಿರ್ಮಿಸಲು ನಮಗೆ ಸಹಾಯ ಮಾಡಿದೆ. ನಮ್ಮ ಈ ಪಯಣದಲ್ಲಿ ಬೆಂಗಳೂರಿಗೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಆಶೀರ್ವಾದ್ ಸಂಸ್ಥೆಯನ್ನು ದಕ್ಷಿಣ ಭಾರತದಾದ್ಯಂತ ನಂಬಿಕಸ್ತ ಹೆಸರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮ ಗೌರವಾನ್ವಿತ ವಿತರಣಾ ಪಾಲುದಾರರ ಬದ್ಧತೆ ಮತ್ತು ಸೇವೆಗೆ ನಾವು ವಿಶೇಷವಾಗಿ ಕೃತಜ್ಞರಾಗಿದ್ದೇವೆ. ನಮಗೆ ನಮ್ಮ ಮಾರಾಟಗಾರರು ಕೇವಲ ವ್ಯಾಪಾರ ಪಾಲುದಾರರಲ್ಲ, ಬದಲಿಗೆ ಅವರು ಆಶೀರ್ವಾದ್ ಪರಂಪರೆಯ ಸಹ- ನಿರ್ಮಾತೃಗಳು. ಇಂದಿನ ಈ ‘ಹೋಳಿ ಮಿಲನ್’ ಆ ಸುದೀರ್ಘ ಪಾಲುದಾರಿಕೆಯ ಸಂಭ್ರಮಾಚರಣೆಯಾಗಿದೆ ಮತ್ತು ಕಳೆದ ಹಲವು ವರ್ಷಗಳಿಂದ ಈ ಸಮುದಾಯವು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಹಾಗೂ ನೀಡಿದ ಬೆಂಬಲಕ್ಕೆ ನಮ್ಮ ಪ್ರಾಮಾಣಿಕ ಮೆಚ್ಚುಗೆಯ ಸಲ್ಲಿಕೆಯಾಗಿದೆ. ಭಾರತದಾದ್ಯಂತ ನವೀನ, ವಿಶ್ವಾಸಾರ್ಹ ಮತ್ತು ವಿಶ್ವದರ್ಜೆಯ ಪ್ಲಂಬಿಂಗ್ ಹಾಗೂ ನೀರು ನಿರ್ವಹಣಾ ಉತ್ಪನ್ನಗಳನ್ನು ಒದಗಿಸುವುದನ್ನು ಮುಂದುವರಿಸುವ ಮೂಲಕ ಈ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಆಶಿಸುತ್ತೇವೆ” ಎಂದು ತಿಳಿಸಿದರು.
ದಕ್ಷಿಣ ಭಾರತದಾದ್ಯಂತ ಆಶೀರ್ವಾದ್ ಬೈ ಅಲಿಯಾಕ್ಸಿಸ್ ಪ್ರಬಲ ಅಸ್ತಿತ್ವವನ್ನು ಹೊಂದಿದ್ದು, ಅದರಲ್ಲಿ ಕರ್ನಾಟಕವು ಅತ್ಯಂತ ಸಕ್ರಿಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ, ಕಂಪನಿಯು 55,000ಕ್ಕೂ ಹೆಚ್ಚು ಡೀಲರ್ ಗಳ ಜಾಲವನ್ನು ಹೊಂದಿದೆ ಮತ್ತು ವಾರ್ಷಿಕ ಸುಮಾರು 3,00,000 ಟನ್ ಉತ್ಪಾದನಾ ಸಾಮರ್ಥ್ಯದ 7 ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ನಿರ್ವಹಿಸುತ್ತಿದೆ.
ಕಂಪನಿಯ ಉತ್ಪನ್ನಗಳ ಪಟ್ಟಿಯಯಲ್ಲಿ ವಸತಿ, ಕೃಷಿ, ಕೈಗಾರಿಕೆ ಮತ್ತು ಮೂಲಸೌಕರ್ಯ ಕ್ಷೇತ್ರಕ್ಕೆ ಒದಗುವ ಒಟ್ಟು 6,000ಕ್ಕೂ ಹೆಚ್ಚು ಉತ್ಪನ್ನಗಳಿವೆ. (ಎಸ್ ಕೆ ಯುಗಳು) ಅಲಿಯಾಕ್ಸಿಸ್ ಗ್ರೂಪ್ ನ ಜಾಗತಿಕ ಪರಿಣತಿಯ ಬೆಂಬಲದೊಂದಿಗೆ, ಆಶೀರ್ವಾದ್ ಸಂಸ್ಥೆಯು ಹೊಸತನ, ಸಾಮರ್ಥ್ಯ ವಿಸ್ತರಣೆ ಮತ್ತು ಪ್ರಾದೇಶಿಕ ವ್ಯಾಪ್ತಿಯನ್ನು ಹೆಚ್ಚಿಸಲು ನಿರಂತರವಾಗಿ ಹೂಡಿಕೆ ಮಾಡುತ್ತಿದೆ.
ಬೆಂಗಳೂರಿನಲ್ಲಿ ನಡೆದ ಈ ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಆಶೀರ್ವಾದ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ‘ಪ್ಲಂಬರ್’ ಕೇಂದ್ರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.
ಇದು ನೆರೆದವರಿಂದ ಅಪಾರ ಮೆಚ್ಚುಗೆಯನ್ನು ಪಡೆಯಿತು. ಮನೆ ಕಟ್ಟುವವರಿಗೆ ಹಾಗೂ ಗ್ರಾಹಕರಿಗೆ ಸರಿಯಾದ ಉತ್ಪನ್ನಗಳು ಮತ್ತು ಸೇವೆಗಳು ತಲುಪುವಂತೆ ಮಾಡಲು ಪ್ಲಂಬರ್ ಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ವಿತರಕರು ಮತ್ತು ಪಾಲುದಾರರು ಈ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತಪಡಿಸಿದರು.
ಈ ಹೋಳಿ ಮಿಲನ್ ಕಾರ್ಯಕ್ರಮವು, ಕರ್ನಾಟಕದಲ್ಲಿ ತನ್ನ ವ್ಯವಹಾರವನ್ನು ಮುನ್ನಡೆಸುತ್ತಿರುವ ಉದ್ಯಮ ಸಮುದಾಯದ ಜೊತೆ ನಿಕಟ ಸಂಪರ್ಕ ಹೊಂದುವ ಆಶೀರ್ವಾದ್ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ. ಬೆಂಗಳೂರು ನಗರವು ವಸತಿ, ವಾಣಿಜ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಕೇಂದ್ರವಾಗಿ ಬೆಳೆಯುತ್ತಿರುವುದರಿಂದ, ರಾಜ್ಯಾದ್ಯಂತ ಹೆಚ್ಚುತ್ತಿರುವ ವಿಶ್ವಾಸಾರ್ಹ ಪ್ಲಂಬಿಂಗ್ ಮತ್ತು ನೀರಿನ ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು ಆಶೀರ್ವಾದ್ ನ ವಿಸ್ತೃತ ಉತ್ಪನ್ನ ಶ್ರೇಣಿ ಮತ್ತು ವಿತರಣಾ ಬೆಂಬಲ ವ್ಯವಸ್ಥೆಯು ಸನ್ನದ್ಧವಾಗಿದೆ.
