ತುಮಕೂರು- ರೈತರು ಮತ್ತು ನೇಕಾರರು ಈ ದೇಶದ ಎರಡು ಕಣ್ಣುಗಳಿದ್ದಂತೆ ಎಂಬುದು ಹಲವು ಹಿರಿಯರ ಅಭಿಪ್ರಾಯವಾಗಿದೆ.ಹಾಗಾಗಿ ನೇಕಾರರ ಸಮುದಾಯದ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವನ್ನು ನೀಡಲಾಗುತ್ತಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ದೇವಾಂಗ ಸಂಘ(ರಿ), ತುಮಕೂರು ಜಿಲ್ಲಾ ಕುರುಹಿನ ಶೆಟ್ಟಿ ಸಂಘ(ರಿ), ತುಮಕೂರು ಜಿಲ್ಲಾ ಪದ್ಮಶಾಲಿ ಸಂಘ(ರಿ), ತುಮಕೂರು ಜಿಲ್ಲಾ ತೊಗಟವೀರ ಸಂಘ(ರಿ), ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶ್ರೀದೇವರ ದಾಸಿಮಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮಾತನಾಡುತಿದ್ದ ಅವರು,ತುಮಕೂರು ನಗರದಲ್ಲಿರುವ ವಿವಿಧ ನೇಕಾರರ ಸಂಘಗಳ ಹಾಸ್ಟೆಲ್,ದೇವಾಲಯ,ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ.ಇನ್ನೂ ಕೆಲವು ಕಾಮಗಾರಿಗಳಿಗೆ ಅನುದಾನ ಕೇಳಿದ್ದಾರೆ.ಅದನ್ನು ಅದ್ಯತೆಯಾಗಿ ಪರಿಗಣಿಸಲಾಗುವುದು ಎಂದರು.
ಕಲ್ಯಾಣ ಕ್ರಾಂತಿಯ ವೇಳೆ ಅನುಭವ ಮಂಟಪದಲ್ಲಿದ್ದ ಪ್ರಮುಖರಲ್ಲಿ ಶ್ರೀದೇವರದಾಸಿಮಯ್ಯ ಕೂಡ ಒಬ್ಬರು,ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ.ಎಲ್ಲರೂ ಒಗ್ಗೂಡಿ ಸಮಾಜದ ಒಳಿತಿಗಾಗಿ ದುಡಿಯೋಣ.ಆದೇ ಮಹನೀಯರಿಗೆ ನೀಡುವ ಗೌರವ ಎಂದು ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ನುಡಿದರು.
ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ಮಾತನಾಡಿ,ನೇಕಾರರ ಸಮುದಾಯ ಬಹಳ ಶ್ರಮಜೀವಿ ಸಮುದಾಯ,ಮಾನವ ಸಂಘ ಜೀವಿಯಾಗಿ ಬದುಕಲು ಈ ಸಮುದಾಯವೂ ಒಂದು ಕಾರಣ.ಈ ಸಮುದಾಯದ ಹಿರಿಯರಾದ ಶ್ರೀದೇವರ ದಾಸಿಮಯ್ಯ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಕೆಲಸ ಮಾಡಬೇಕು.ಸರಕಾರ ಸಮುದಾಯದ ಪರವಾಗಿ ಕೆಲಸ ಮಾಡಲಿದೆ ಎಂದರು.
ಟಿ.ಕೆ.ಧನಿಯಕುಮಾರ್, ಆರ್.ರಾಮಕೃಷ್ಣಯ್ಯ, ಟಿ.ಹೆಚ್.ಯೋಗಾನಂದ್, ಜಿ.ಜಗದೀಶ್, ಜಿ.ಎ.ಬಾಲಾಜಿ, ಕಮಲಮ್ಮ, ಅನಿಲ್ಕುಮಾರ್, ಜಿ.ಕೆ.ಗುರುಸ್ವಾಮಿ, ಎಸ್.ವಿರೂಪಾಕ್ಷಯ್ಯ, ಎನ್.ವೆಂಕಟೇಶ್(ಎಸ್.ವಿ), ಶಂಕರಪ್ಪ, ಹೆಚ್, ಆರ್.ಚಂದ್ರಣ್ಣ, ರೇವಣ್ಣಕುಮಾರ್,ಕರಿಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
