ರಾಮನಾಥಪುರ – ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಉಳಿವು–ಬೆಳವಣಿಗೆಗೆ ನಮ್ಮ ಸಮಾಜ ಸದಾ ಬದ್ಧವಾಗಿದೆ. ಮಠ–ಮಂದಿರಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನೈತಿಕ ಮೌಲ್ಯಗಳನ್ನು ಬಲಪಡಿಸುವ ಕೇಂದ್ರಗಳಾಗಿವೆ. ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಏಕೀಕರಿಸುವ ಶಕ್ತಿಯಾಗಿದೆ ಎಂದು ಕೊಡಗಿನ ಹೆಬ್ಬಾಲೆ ಗ್ರಾಮದ ಕಾಳಿಕಾಂಭ ದೇವಾಲಯದ ಸಮಿತಿ ಅಧ್ಯಕ್ಷರು ಸದಾನಂದರವರು ತಿಳಿಸಿದರು.

ಹೆಬ್ಬಾಲೆ ಗ್ರಾಮದಲ್ಲಿ ನಿರ್ಮಾಣವಾಗಿ ಲೋಕಾರ್ಪಣೆಯಾಗಿರುವ ಕಾಳಿಕಾಂಭ ದೇವಾಲಯದಲ್ಲಿ ರುದ್ರಾಭಿಕ್ಷೆ ಪೂಜೆಗೆ ಅಹ್ವಾನಿಸಿದ ಅರಕಲಗೂಡು ತಾಲ್ಲೂಕು ಕಸಭಾ ಹೋಬಳಿ ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮಿಗಳವರಿಂದ ಅಶಿರ್ವಾದ ಪಡೆದರು.
ಈ ಸಂದರ್ಭದಲ್ಲಿ ಕೊಡಗಿನ ಹೆಬ್ಬಾಲೆ ಗ್ರಾಮದ ಕಾಳಿಕಾಂಭ ದೇವಾಲಯದ ಗೌರವಾಧ್ಯಕ್ಷರು ನಂಜುಂಡಚಾರ್, ಉಪಾಧ್ಯಕ್ಷರು ಮಂಜುನಾಥ್, ಕಾರ್ಯದರ್ಶಿ ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ತಿನ. ಜಿಲ್ಲಾಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅರ್.ಕೆ. ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
