ಚನ್ನರಾಯಪಟ್ಟಣ: ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಬಾಜನರಾದ ಡಾ. ಚಂದ್ರು ಕಾಳೇನಹಳ್ಳಿ ಹಾಗೂ ಶ್ರೀಮತಿ ಭಾಗ್ಯ ಚಂದ್ರು ಅವರಿಗೆ ನಾಡಪ್ರಭು ಕೆಂಪೇಗೌಡ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅನಂತ್ ಕುಮಾರ್ ಮಾತನಾಡಿ ನಮ್ಮೂರಿನ ಹಿರಿಯ ಸಾಹಿತಿಗಳಾದ ಶ್ರೀಯುತ ಡಾ. ಚಂದ್ರು ಕಾಳೇನಹಳ್ಳಿರವರ ವಿರಚಿತ ಗಂಧವತಿ ಎಂಬ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಲಭಿಸಿದ್ದು, ಈ ಪ್ರಶಸ್ತಿಯೊಂದಿಗೆ 25,000 ನಗದು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರ ಹಲವಾರು ಕೃತಿಗಳಿಗೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಹುಡುಕಿಕೊಂಡು ಬಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯನ್ನು ತಂದಿದೆ ಎಂದರು, ಮುಂದಿನ ದಿನಗಳಲ್ಲಿ ಶ್ರೀಯುತರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಗೊಳ್ಳಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಾಡಪ್ರಭ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕಾಳೇನಹಳ್ಳಿ ಆನಂದ್ ಕುಮಾರ್, ಡಿ ಕಾಳೇನಹಳ್ಳಿ ಗ್ರಾಮಸ್ಥರುಗಳಾದ ಉಮೇಶ್,ಜಯರಾಮ್, ದಿಲೀಪ್ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
