ಬೆಂಗಳೂರು, ಮಾ.30: ಪ್ರಮಾಣೀಕೃತ ಲ್ಯಾಬ್-ಗ್ರೋನ್ ವಜ್ರಾಭರಣಗಳ ಬ್ರಾಂಡ್ ಆಗಿರುವ ಔರ್ಯ ಡೈಮಂಡ್ಸ್ ಸಂಸ್ಥೆಯು ಬೆಂಗಳೂರು ನಗರದ ಜಯನಗರದಲ್ಲಿ ತನ್ನ ಅತ್ಯಾಧುನಿಕ ಐಷಾರಾಮಿ ವಜ್ರ ಗ್ಯಾಲರಿಯನ್ನು ಉದ್ಘಾಟಿಸುವ ಮೂಲಕ ಭಾರತೀಯ ಮಾರುಕಟ್ಟೆಗೆ ಭರ್ಜರಿ ಪದಾರ್ಪಣೆ ಮಾಡಿದೆ.
ದಶಕಗಳ ಅನುಭವ ಹೊಂದಿರುವ ಜೆಮ್ಮಾಲಜಿಸ್ಟ್ ಹಾಗೂ ಪ್ರಶಸ್ತಿ ವಿಜೇತ ಉದ್ಯಮಿ ಶಿಖಾ ದಾದಾ ಮತ್ತು ಉದ್ಯಮದ ಹಿರಿಯರಾದ ಸಾದ್ ಸಲ್ಮಾನ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ಸಾಂಪ್ರದಾಯಿಕ ಚಿನ್ನಾಭರಣ ಮಳಿಗೆಗಳ ಮಾದರಿಯನ್ನು ಮೀರಿದ ವಿಭಿನ್ನ ಅನುಭವವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.
ಆಧುನಿಕ ಗ್ರಾಹಕರಿಗೆ ವಿಭಿನ್ನ ಅನುಭವ
ಸಾಮಾನ್ಯವಾಗಿ ಚಿನ್ನದ ಅಂಗಡಿಗಳಲ್ಲಿ ಗಾಜಿನ ಆಚೆ ಪ್ರದರ್ಶಿಸುವ ಮಾದರಿಯನ್ನು ಬದಿಗೊತ್ತಿರುವ ಔರ್ಯ ಡೈಮಂಡ್ಸ್, ಗ್ರಾಹಕರು ಆಭರಣಗಳನ್ನು ನೇರವಾಗಿ ಮುಟ್ಟಿ, ಧರಿಸಿ, ಅನುಭವಿಸಲು ಅವಕಾಶ ನೀಡುವ ರೀತಿಯಲ್ಲಿ ತನ್ನ ಗ್ಯಾಲರಿಯನ್ನು ವಿನ್ಯಾಸಗೊಳಿಸಿದೆ.
ಆಧುನಿಕ ಭಾರತದ ಗ್ರಾಹಕರ ಅಭಿರುಚಿಗೆ ತಕ್ಕಂತೆ ರೂಪುಗೊಂಡಿರುವ ಈ ಐಷಾರಾಮಿ ಗ್ಯಾಲರಿ, ಸೌಂದರ್ಯ, ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ಐಷಾರಾಮಿತನವನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಪ್ರಯತ್ನವಾಗಿದೆ. “ನ್ಯೂ ಇಂಡಿಯಾ” ಪರಿಕಲ್ಪನೆಗೆ ತಕ್ಕಂತೆ, ಲ್ಯಾಬ್-ಗ್ರೋನ್ ವಜ್ರಗಳ ಮೂಲಕ ಆಕರ್ಷಕ ಮತ್ತು ಸುಲಭವಾಗಿ ಕೈಗೆಟುಕುವ ಆಭರಣಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಎರಡು ದಿನಗಳ ಅದ್ಧೂರಿ ಉದ್ಘಾಟನಾ ಸಂಭ್ರಮ
ಬ್ರ್ಯಾಂಡ್ನ ಅಧಿಕೃತ ಪ್ರವೇಶವನ್ನು ಎರಡು ದಿನಗಳ ಹೈ-ಪ್ರೊಫೈಲ್ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು.
ಮೊದಲ ದಿನ ರಾಜಕೀಯ ಗಣ್ಯರ ಉಪಸ್ಥಿತಿ
ಉದ್ಘಾಟನಾ ಸಮಾರಂಭದಲ್ಲಿ
- ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ,
- ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್,
- ವಸತಿ ಹಾಗೂ ವಕ್ಫ್ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್
ಸಹಿತ ಹಲವು ರಾಜಕೀಯ ಗಣ್ಯರು ಭಾಗವಹಿಸಿದರು.
ಎರಡನೇ ದಿನ ತಾರೆಯರ ಮೆರುಗು
“ಎಥಿಕಲ್ ಬ್ರಿಲಿಯೆನ್ಸ್” ಪರಿಕಲ್ಪನೆಯಡಿ ನಡೆದ ಎರಡನೇ ದಿನದ ಸಂಭ್ರಮಾಚರಣೆಯಲ್ಲಿ
- ಬಾಲಿವುಡ್ ನಟಿ ಊರ್ವಶಿ ರೌಟೇಲಾ,
- ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಧುರ್ ಭಂಡಾರ್ಕರ್,
ಹಾಗೂ ಬೆಂಗಳೂರಿನ ಹಲವು ಗಣ್ಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.
‘ಆಭರಣವು ವ್ಯಕ್ತಿತ್ವದ ಅಭಿವ್ಯಕ್ತಿ’ – ಶಿಖಾ ದಾದಾ
ಈ ಸಂದರ್ಭದಲ್ಲಿ ಮಾತನಾಡಿದ ಔರ್ಯ ಡೈಮಂಡ್ಸ್ ಸಂಸ್ಥಾಪಕಿ ಶಿಖಾ ದಾದಾ, ವಜ್ರ ಉದ್ಯಮವು ದೊಡ್ಡ ಬದಲಾವಣೆಯ ಹಂತದಲ್ಲಿದ್ದು, ನಿಜವಾದ ಐಷಾರಾಮಿತನವು ಬೆಲೆ ಅಥವಾ ಅಪರಾಧ ಪ್ರಜ್ಞೆಯಿಂದ ಲಾಕರ್ಗಳಲ್ಲಿ ಸೀಮಿತವಾಗಬಾರದು ಎಂದು ಹೇಳಿದರು.
“ಆಭರಣವು ಒಬ್ಬ ವ್ಯಕ್ತಿಯ ಗುರುತಿನ ಚಿಹ್ನೆಯಾಗಬೇಕು. ಮಹಿಳೆಯರ ಆತ್ಮವಿಶ್ವಾಸದ ಅಭಿವ್ಯಕ್ತಿಯಾಗಿ ನಾವು ಆಭರಣಗಳನ್ನು ರೂಪಿಸುತ್ತಿದ್ದೇವೆ. ಸೊಬಗಿನ ಆಭರಣ ಜವಾಬ್ದಾರಿಯುತವಾಗಿಯೂ, ಸುಲಭವಾಗಿ ಕೈಗೆಟುಕುವಂತದ್ದಾಗಿಯೂ ಇರಬೇಕು. ಪರಿಸರದೊಂದಿಗೆ ರಾಜಿ ಮಾಡಿಕೊಳ್ಳದೆ, ಯಾವುದೇ ಅಪರಾಧ ಪ್ರಜ್ಞೆ ಇಲ್ಲದೆ ಪ್ರತಿದಿನ ಧರಿಸಬಹುದಾದ ಲ್ಯಾಬ್-ಗ್ರೋನ್ ವಜ್ರಗಳನ್ನು ನಾವು ಪರಿಚಯಿಸುತ್ತಿದ್ದೇವೆ,” ಎಂದು ಅವರು ತಿಳಿಸಿದರು.
‘ನೈತಿಕವೂ, ಆರ್ಥಿಕವಾಗಿಯೂ ಲಾಭದಾಯಕ’ – ಸಾದ್ ಸಲ್ಮಾನ್
ಔರ್ಯ ಡೈಮಂಡ್ಸ್ನ ಸಹ-ಸಂಸ್ಥಾಪಕ ಹಾಗೂ ಹೂಡಿಕೆದಾರ ಸಾದ್ ಸಲ್ಮಾನ್ ಮಾತನಾಡಿ, “ಲ್ಯಾಬ್-ಗ್ರೋನ್ ವಜ್ರಗಳು ಕಳೆದ ದಶಕಗಳಲ್ಲಿ ಜ್ಯುವೆಲ್ಲರಿ ವಲಯದಲ್ಲಿ ಕಂಡ ಅತ್ಯಂತ ಗಮನಾರ್ಹ ಬದಲಾವಣೆ. ಉನ್ನತ ಮಟ್ಟದ ರೀಟೇಲ್ ಮಾರುಕಟ್ಟೆ ಮತ್ತು ಸುಸ್ಥಿರ ತಂತ್ರಜ್ಞಾನ ಒಂದಾಗುವ ಭವಿಷ್ಯದ ಕ್ಷೇತ್ರದಲ್ಲಿ ನಾವು ಹೂಡಿಕೆ ಮಾಡುತ್ತಿದ್ದೇವೆ. ಭಾರತದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಗ್ರಾಹಕರಿಗೆ ಆರ್ಥಿಕವಾಗಿ ಲಾಭದಾಯಕ ಹಾಗೂ ನೈತಿಕವಾಗಿ ಶ್ರೇಷ್ಠ ಉತ್ಪನ್ನ ಒದಗಿಸುವುದು ನಮ್ಮ ಗುರಿ” ಎಂದು ಹೇಳಿದರು.
‘ಪಾರದರ್ಶಕತೆ ಮತ್ತು ಮೌಲ್ಯಕ್ಕೆ ಆದ್ಯತೆ’ – ರಿತೇಶ್ ಗಡೆ
ಔರ್ಯ ಡೈಮಂಡ್ಸ್ನ ಚೀಫ್ ಆಫ್ ಆಪರೇಷನ್ಸ್ ರಿತೇಶ್ ಗಡೆ ಮಾತನಾಡಿ, “ಇಂದಿನ ಗ್ರಾಹಕರು ಅತ್ಯಂತ ವಿವೇಚನಾಶೀಲರು. ಅವರು ಸೌಂದರ್ಯ ಮತ್ತು ಗುಣಮಟ್ಟದ ಜೊತೆಗೆ ಪಾರದರ್ಶಕತೆ ಮತ್ತು ಹೆಚ್ಚಿನ ಮೌಲ್ಯವನ್ನೂ ಬಯಸುತ್ತಾರೆ. ಔರ್ಯ ಈ ಸಾಂಸ್ಕೃತಿಕ ಬದಲಾವಣೆಗೆ ತಕ್ಕಂತೆ ಸ್ಪಂದಿಸುತ್ತಿದ್ದು, ಕೇವಲ ಹೊಸ ವಜ್ರ ಬ್ರ್ಯಾಂಡ್ ಅನ್ನು ಪರಿಚಯಿಸುವುದಲ್ಲ, ಬದಲಾಗಿ ಜವಾಬ್ದಾರಿಯುತ ಐಷಾರಾಮಿ ಜೀವನಶೈಲಿಗೆ ಹೊಸ ಅವಕಾಶವನ್ನು ಒದಗಿಸುತ್ತಿದೆ” ಎಂದು ಹೇಳಿದರು.
ಭಾರತೀಯ ಐಷಾರಾಮಿ ಮಾರುಕಟ್ಟೆಗೆ ಹೊಸ ಮಾನದಂಡ
ಭಾರತದಲ್ಲಿ ಲ್ಯಾಬ್-ಗ್ರೋನ್ ವಜ್ರಗಳ ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಔರ್ಯ ಡೈಮಂಡ್ಸ್ ಪ್ರವೇಶಿಸಿದ್ದು, ಗಣಿಗಾರಿಕೆಯ ನೈತಿಕ ಭಾರವಿಲ್ಲದೆ ಐಷಾರಾಮಿ ಜೀವನವನ್ನು ಬಯಸುವ ಇಂದಿನ ಪೀಳಿಗೆಗೆ ಇದು ಹೊಸ ಆಯ್ಕೆಯಾಗಿದೆ.
ಉತ್ತಮ ಮೌಲ್ಯದೊಂದಿಗೆ ಹೆಚ್ಚಿನ ಕ್ಯಾರಟ್ ವಜ್ರಗಳು, ಆಕರ್ಷಕ ವಿನ್ಯಾಸಗಳು ಹಾಗೂ ಪಾರದರ್ಶಕ ಖರೀದಿ ಅನುಭವವನ್ನು ಒದಗಿಸುವ ಮೂಲಕ ಔರ್ಯ ಡೈಮಂಡ್ಸ್ ಭಾರತೀಯ ಐಷಾರಾಮಿ ಆಭರಣ ಮಾರುಕಟ್ಟೆಯಲ್ಲಿ ಹೊಸ ಮತ್ತು ಪರಿಷ್ಕೃತ ಮಾನದಂಡವನ್ನು ಸ್ಥಾಪಿಸುವತ್ತ ಹೆಜ್ಜೆಯಿಟ್ಟಿದೆ.
