ಹಾಸನ : ಹಾಸನ ಜಿಲ್ಲೆಯ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಿಗೆ ಆಚಾರ್ಯ ಕಾಮರ್ಸ್ ಕಾಲೇಜಿನ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಕಾಲೇಜಿನ ಪ್ರಾoಶುಪಾಲ ಡಾ. ಆದರ್ಶ ಹೆಚ್ ಆರ್ ತಿಳಿಸಿದ್ದಾರೆ.
ಆಚಾರ್ಯ ವಾಣಿಜ್ಯ ಪದವಿಪೂರ್ವ ಹಾಗೂ ಪದವಿ ಕಾಲೇಜಿನಿಂದ ಪ್ರತಿ ವರ್ಷ ಪ್ರತಿಷತ ಶೇಖಡ 100ರಷ್ಟು ಫಲಿತಾಂಶ ಬರುತ್ತಿದ್ದು ಹಾಸನ ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇದೇ ಸಂದರ್ಭದಲ್ಲಿ ಇಂಡೋ ನೇಪಾಳ ಅಂತರರಾಷ್ಟ್ರೀಯ ಯುವ ಕ್ರೀಡಾ ಕೂಟ 2026-27ನೇ ಸಾಲಿನ ಪೋಕ್ರಾದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ನಮ್ಮ ಕಾಲೇಜಿನ ಪ್ರಥಮ ಬಿ ಕಾಂ ವಿದ್ಯಾರ್ಥಿ ಪ್ರೀತಂ ಆರ್ ಜಾವೇಲಿನ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ದೇಶಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ ನಮ್ಮ ಕಾಲೇಜಿಗೆ ಕೀರ್ತಿ ತಂದಿರುವುದರಿಂದ ನೀರಜ್ ಚೋಪ್ರಾ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಆಸಕ್ತ ಶಿಕ್ಷಕರು ವಾಟ್ಸಾಪ್ ಸಂಖ್ಯೆ 9845458315 ಗೆ ಸಂಪೂರ್ಣ ಪರಿಚಯ ಪತ್ರವನ್ನು ಕಳುಹಿಸಿ ಕೊಡಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
