ಟಿಟಿ ಚಾಲಕನನ್ನ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ತಮಿಳಿಗರು ದರ್ಪ ತೋರಿರುವ ಘಟನೆ ರಾಜ್ಯದ ಗಡಿಭಾಗ ಅತ್ತಿಬೆಲೆ ಬಳಿ ಕಳೆದ ತಿಂಗಳು 15ನೇ ತಾರೀಖು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಟಿಟಿ ವಾಹನ ಚಾಲಕ ರಾಮು ಎಂಬಾತ ವೈಟ್ ಫೀಲ್ಡ್ ನಿಂದ ತಮಿಳುನಾಡಿನ ಕೃಷ್ಣಗಿರಿಗೆ ಬಾಡಿಗೆ ಹೋಗಿದ್ದ.
ಈ ವೇಳೆ ಟಿಟಿ ವಾಹನದಲ್ಲಿದ್ದವರಿಗೆ ಮತ್ತು ಅಲ್ಲಿನ ಲೋಕಲ್ ಅವರ ಜೊತೆ ಕಿರಿಕ್ ಆಗಿದೆ.
ಅಲ್ಲಿಂದ ತಪ್ಪಿಸಿಕೊಂಡು ಟಿಟಿವಾಹನದಲ್ಲಿ ಅತ್ತಿಬೆಲೆ ಕಡೆ ಬಂದಿದ್ರು. ಬಳಿಕ ದೊಣ್ಣೆ, ಮಾರಕಾಸ್ತ್ರಗಳನ್ನ ಹಿಡಿದು ಹಿಂಬಾಲಿಸಿದ ತಮಿಳಿಗರ ಗ್ಯಾಂಗ್, ಹೆದ್ದಾರಿಯ ಅತ್ತಿಬೆಲೆ ಟೋಲ್ನಲ್ಲಿ ಟಿಟಿ ವಾಹನವನ್ನ ಅಡ್ಡಗಟ್ಟಿ, ವಾಹನದ ಗ್ಲಾಸ್ ಹೊಡೆದು ನಡುರಸ್ತೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ.
ಮಹಿಳೆಯರು ಮಕ್ಕಳಿದ್ದಾರೆ ಎಂದು ಕೇಳಿಕೊಂಡ್ರು ಬಿಡದ ಪಾಪಿಗಳು, ಟಿಟಿ ವಾಹನದ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಮಾಡಿದ್ದಾರೆ. ಗಲಾಟೆ ದೃಶ್ಯ ಟಿಟಿ ವಾಹನದ ಡ್ಯಾಷ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಘಟನಾ ಸಂಬಂಧ ಟಿಟಿ ಚಾಲಕ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ
