ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪತಿ ವಿಜಯ್ ದೇವರಕೊಂಡ ಜೊತೆ ಇತ್ತೀಚೆಗೆ ತವರಿಗೆ ಬಂದಿದ್ದಾರೆ. ಮದುವೆ ಬಳಿಕ ಮೊದಲ ಬಾರಿ ಕೊಡಗಿಗೆ ಬಂದ ಅವರು ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಔಟಣ ಕೂಟ ಏರ್ಪಡಿಸಿದ್ದರು.
ಈ ವೇಳೆ ತಮ್ಮೂರಿನ ಜನರಿಗೆ ಗಂಡನನ್ನು ಪರಿಚಯಿಸಿದರು. ಕೊಡವ (Kodava) ಭಾಷೆಯಲ್ಲೇ ಅವರು ಗಂಡನ ಪರಿಚಯ ಮಾಡಿಸಿದರು. ವಿಜಯ್ ದೇವರಕೊಂಡ (Vijay Deverakonda) ಅವರು ಎಲ್ಲರ ಜೊತೆ ಬೆರೆತರು. ರಶ್ಮಿಕಾ ಮಂದಣ್ಣ ಅವರಿಗೆ ಹುಟ್ಟುಹಬ್ಬದ ಉಡುಗೊರೆ ರೂಪದಲ್ಲಿ ತಂದೆ ಮದನ್ ಮಂದಣ್ಣ ಅವರು ಬಂಗಲೆಯನ್ನು ನೀಡಿದ್ದಾರೆ.
