ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ), ಸಿದ್ಧನಹಳ್ಳಿ ವತಿಯಿಂದ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಹಾಗೂ ಅನಿಕೇತನ ಕನ್ನಡ ಬಳಗದ ಸಹಕಾರದಲ್ಲಿ ಏಪ್ರಿಲ್ 19ರಂದು ಭಾನುವಾರ ನಗರದ ಗಾಂಧಿ ಭವನದಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ–ಸಂಗೀತ ಸಂಭ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.
ಈ ಸಮಾರಂಭದಲ್ಲಿ ನಾಡೋಜ ಹಂಪನಾ, ಡಾ. ಜಯಶ್ರೀ ಅರವಿಂದ್, ಶ್ರೀಮತಿ ಶಾಂತಿ ವಾಸು, ಡಾ. ವೇಮಗಲ್ ನಾರಾಯಣಸ್ವಾಮಿ, ಇಂದಿರಾ ಕೃಷ್ಣಪ್ಪ, ಡಾ. ಬೈರಮಂಗಲ ರಾಮೇಗೌಡ, ಅನಿಕೇತನ ಮಾಯಣ್ಣ, ಉದಯರವಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಡಾ. ಸಿಸಿರಾ ಸ್ನೇಹ ಬಳಗದಿಂದ ನೀಡಲಾಗುವ “ಕಾಯಕಜೀವಿ ಪ್ರಶಸ್ತಿ”ಗೆ ಹಿರಿಯ ಸಾಹಿತಿ ಹಾಗೂ ಕೃಷಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಎಂ.ವಿ. ಶಿವಪ್ರಸಾದ್, ಪತ್ರಕರ್ತ ಎಪಿಎಂ ವೀರೇಶ್ ಯರಬಾಳು, ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಚಕ್ಕೆರೆ ಯೋಗೇಶ್ ಹಾಗೂ ಯುವ ಲೇಖಕಿ ಎಂ.ಕೆ. ಲತಾಮಣಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಲಯನ್ ಡಾ. ಕೆ.ಪಿ. ಶೈಲಜಾ ಮತ್ತು ಲಯನ್ ವೆಂಕಟಸುಬ್ಬಯ್ಯ ಚೆಟ್ಟಿ ದತ್ತಿ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಾದ ಜಿ.ಎಸ್. ರಾಮದೇವ್, ಡಾ. ಬಂಡ್ಲಹಳ್ಳಿ ವಿಜಯ್ ಕುಮಾರ್, ಎಂ. ಗೌಡಯ್ಯ, ಕವಿತಾ ಕೆ.ಆರ್., ಬಿ. ಆನಂದಮೂರ್ತಿ, ವೈ.ಎಸ್. ಶೈಲಜಾ, ಆರ್. ಪ್ರಸನ್ನ, ವಿಜಯ್ ಕುಮಾರ್ ಹೊಸಪಾಳ್ಯ, ಗೋವಿಂದರಾಜು ಪಟೇಲ್, ಹೆಚ್. ಸತೀಶ್ ಕುಮಾರ್, ವೈಬಿಹೆಚ್ ಜಯದೇವ್, ದೊ. ಚಿ. ಗೌಡ, ಶ್ರೀಮತಿ ದೇವಮ್ಮ, ಎಂ. ಶಿವಸ್ವಾಮಿ, ಮಂದಗೆರೆ ರಾಮಕುಮಾರ್, ಹೇಮಾ ಕನ್ನಡತಿ ಸೇರಿದಂತೆ ಅನೇಕರಿಗೆ ಸನ್ಮಾನ ನಡೆಯಲಿದೆ.
ಹಿರಿಯ ಸಾಹಿತಿ ಡಾ. ಟಿ. ಗೋವಿಂದರಾಜು ಅವರ ಜಾನಪದ ಬೆಳಕಿಂಡಿ ಹಾಗೂ ಕವಯಿತ್ರಿ ಎಂ.ಎಸ್. ಆಶಾಲತಾ ಅವರ ಮನದ ಸಿರಿ ಕೃತಿಗಳನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಗುತ್ತದೆ.
ಕಾರ್ಯಕ್ರಮದ ಅಂಗವಾಗಿ ವಸಂತ ಕವಿಗೋಷ್ಠಿ, ಭಾವಗೀತೆ ಮತ್ತು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮಗಳು ನಡೆಯಲಿವೆ.
ಈ ಕುರಿತು ಸಂಸ್ಥೆಯ ಕಾರ್ಯದರ್ಶಿ ಹೇಮಾವತಿ ಸಿಸಿರಾ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.