ಹಾಸನ : ತಣ್ಣೀರುಹಳ್ಳ ಮಠದಲ್ಲಿ ಶ್ರೀಮಠದ ಶ್ರೀ ವಿಜಯಕುಮಾರಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ಏಪ್ರಿಲ್ 26 ರಂದು ಹಾಸನ ತಣ್ಣಿರುಹಳ್ಳ ಮಠದಲ್ಲಿ ಶ್ರೀ ವಿಶ್ವಗುರು ಬಸವೇಶ್ವರ 896 ನೇ ಬಸವಜಯಂತಿ, ಶ್ರೀ ಸಿದ್ದಗಂಗಾ ಮಠದ ತ್ರೀವಿಧ ದಾಸೋಹಿ, ನಡೆದಾಡುವ ದೇವರು ಪರಮಪೂಜ್ಯ ಡಾ. ಶ್ರೀ ಶಿವಕುಮಾರಮಹಾಸ್ವಾಮೀಜಿಯವರ 119 ನೇ ಜಯಂತೋತ್ಸವ.

ಲಿಂಗೈಕ್ಯ ಶ್ರೀ ಶಿವಲಿಂಗಮಹಾ ಸ್ವಾಮೀಜಿಯವರ 92 ನೇ ವರ್ಷದ ಜಯಂತೋತ್ಸವ, ನಿರಂಜನ ನಿರಾಭಾರಿ ಜಂಗಮ ಪಟ್ಟಾಧಿಕಾರ 56 ನೇ ಮಾಸದ ಕಾರ್ಯಕ್ರಮ. ಅಲೂರಿನ ಲಿಂಗೈಕ್ಯ ಶ್ರೀ ಎಸ್. ನಾಗೇಂದ್ರ ಇವರ ಜ್ಲಾಪಕಾರ್ಥವಾಗಿ ಶ್ರೀ ಸಿದ್ದೇಶ್ ನಾಗೇಂದ್ರ ಕುಟುಂಭದವರು ನಿರ್ಮಿಸಿಕೊಟ್ಟಿರುವ ಶ್ರೀ ಶಿವಲಿಂಗಸ್ವಾಮಿಗಳವರ ದಾಸೋಹ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸುತ್ತೂರು ಜಗದ್ಗುರುಗಳು, ಸಿದ್ದಗಂಗಾ ಶ್ತೀಗಳು, ದೇಗುಲಮಠದ ಶ್ತೀಗಳು, ಕೋಡಿಮಠದ ಜಗದ್ಗುರುಗಳು, ಸೋಮನಹಳ್ಳಿ ಮಠದ ಶ್ರೀಗಳು, ಸಂಕಾಲಪುರ ಮಠದ ಶ್ರೀಗಳು ಪುಪ್ಪಗಿರಿ ಮಠದ ಶ್ರೀಗಳು, ಹಾಸನ ಅಧಿಚುಂಚನಗಿರಿ ಮಠದ ಶ್ರೀಗಳು,ಬಿಜೆಪಿ ರಾಜ್ಯಧ್ಯಕ್ಷರು ಬಿ.ವೈ. ವಿಜಯೇಂದ್ರ, ಶಾಸಕರು ಎಚ್.ಪಿ. ಸ್ವರೂಪ್ ಪ್ರಕಾಶ್ ಮುಂತಾದವರು ಭಾಗವಹಿಸುವರು ಎಂದು ಶ್ರೀಮಠದ ಶಿಷ್ಯ ಗುರುಪಾದಸ್ವಾಮಿ ತಿಳಿಸಿದರು.
ಇಷ್ಠಲಿಂಗ ಪೂಜೆ ಹಾಗೂ ಉಚಿತ ಲಿಂಗಧಾರಣೆ. ಏಪ್ರಿಲ್ 25 ಕ್ಕೆ ತಣ್ಣೀರುಹಳ್ಳ ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಪ್ರಯುಕ್ತ ದಿನಾಂಕ 25-4-2026 ರಂದು ಶನಿವಾರ ಬೆಳಿಗ್ಗೆ 6 ಗಂಟೆಗೆ ಇಷ್ಠಲಿಂಗ ಪೂಜೆ ಮತ್ತು ಲಿಂಗಧಾರಣೆ ಕಾರ್ಯಕ್ರಮ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರಸ್ವಾಮಿಜಿಯವರ ಸಾನಿಧ್ಯದಲ್ಲಿ ವಿಶ್ವ ವೀರಶೈವ- ಲಿಂಗಾಯಿತ ಮಹಾ ವೇದಿಕೆ ಸಂಸ್ಥಾಪಕ, ಅಧ್ಯಕ್ಷರು ಅನೇಕಲ್ ತಾಲ್ಲೂಕು ರಾಜಪುರ ಮಠದ ಶ್ರೀ ಸಿ. ನಟರಾಜುರವರ ಸಮ್ಮುಖದಲ್ಲಿ, ರಾಜ್ಯಧ್ಯಕ್ಷರು ಎಂ.ಎನ್. ಕುಮಾರಸ್ವಾಮಿಯವರ ನೇತೃತ್ವದಲ್ಲಿ 108 ವಟುಗಳಿಗೆ , ಲಿಂಗು, ಕರಡಿಗೆ, ಶಿವದಾರ, ಟವಲ್ ಉಚಿತವಾಗಿ ನೀಡಲಾಗುವುದು. 24-4-2026 ರ ಸಂಜೆ ಶ್ರೀಮಠದ ಸಭಾಂಗಣದಲ್ಲಿ ಬಂದು ತಂಗುವುದು. ಮತ್ತು ದಿನಾಂಕ . 22-4-26 ಒಳಗೆ ಹೆಸರು ನೊಂದಾಯಿಸಿಕೊಳ್ಳಲು ಹಾಸನ ಜಿಲ್ಲಾ ವಿಶ್ವ ವೀರಶೈವ – ಲಿಂಗಾಯಿತ ಮಹಾ ವೇದಿಕೆ ಅಧ್ಯಕ್ಷರು ಹಳ್ಳಿಮೈಸೂರು ಪ್ರಕಾಶ್ ಅವರು ಮನವಿ.
- ಹೆಚ್ಚಿನ ಮಾಹಿತಿಗೆ- ತಣ್ಣೀರುಹಳ್ಳ ಮಠ ಶಿಷ್ಯರಾದ
- ಶ್ರೀ ಕೆ.ಬಿ. ಜಗದೀಶ್, ಮೋ. 9481593142.
- ಶರಣ- ಗುರುಪಾದಸ್ವಾಮಿ, 9980052448.
- ಶರಣ- ಎಂ.ಎನ್. ಕುಮಾರಸ್ವಾಮಿ, 9448863158
- ಪ್ರಕಾಶ್, ಹಳ್ಳಿಮೈಸೂರು – 9845557817.
ವರದಿ.- ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
