ಕೆ.ಆರ್.ಪೇಟೆ: ಕಲ್ಲಿಗೆ ಜೀವ ಕೊಡುವವನು ಶಿಲ್ಪಿ. ಕಲ್ಲಿಗೆ ಜೀವ ನೀಡಿ ದೇವರಾಗಿಸುವ ನಾವು ತಾಯಿ–ತಂದೆಯರನ್ನೂ ದೇವರ ಸ್ಥಾನದಲ್ಲಿ ನೋಡುವ ಪರಿಪಾಠ ಜೊತೆಗೆ ಮಾನವೀಯ ಮೌಲ್ಯ ಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ತುಳಸಿ ಗ್ರಾಮ ಶ್ರೀ ಬಸವೇಶ್ವರ ದೇವಾಲಯದ ಉದ್ಘಾಟನೆ ಸೇರಿದಂತೆ ವಿವಿಧ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಏರ್ಪಡಿಸಿದ ರಾಜ ಸತ್ಯವ್ರತ ಅಥವಾ ಶನಿಮಹಾತ್ಮ ಎಂಬ ಪೌರಾಣಿಕ ನಾಟಕವನ್ನು ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ್ ಗಿಡಕ್ಕೆ ನೀರುಣಿಸುವ ಮೂಲಕ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದೆ ದೇವಾಲಯಗಳು ಕೇವಲ ಧಾರ್ಮಿಕ ಸ್ಥಾನಗಳಾಗದೇ ಗ್ರಾಮೀಣ ಜನರ ನ್ಯಾಯಾಲಯಗಳು, ಆರೋಗ್ಯ ಕೇಂದ್ರಗಳೂ ಆಗಿದ್ದವು. ಇಂದು ಒತ್ತಡದ ಬದುಕಿನ ನಡುವೆ ಮಾನಸಿಕ ನೆಮ್ಮದಿ ನೀಡುವ ತಾಣಗಳಾಗಿವೆ.
ಪ್ರತಿಯೊಂದು ಗ್ರಾಮದಲ್ಲೂ ಸಹ ಪ್ರೀತಿ ಸೋದರತ್ವದಿಂದ ಬಾಳ್ಮೆ ಮಾಡಬೇಕು, ಎಲ್ಲ ಗ್ರಾಮಸ್ಥರು ಒಂದೇ ಎಂಬ ಭಾವನೆಯಿಂದ ಸಹಜೀವನನ್ನ ಮಾಡಬೇಕು, ಇಂತಹ ಐತಿಹಾಸಿಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿಕೊಂಡು ಎಲ್ಲಾ ಗ್ರಾಮಸ್ಥರು ಒಗ್ಗಟ್ಟಿನಿಂದ ಸ್ನೇಹಮಯಿ ಜೀವನವನ್ನು ಸಾಗಿಸಲು ತುಳಸಿ ಗ್ರಾಮ ಮಾದರಿಯಾಗಿದೆ.ತುಳಸಿ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀ ಬಸವೇಶ್ವರ ಸ್ವಾಮಿಯ ದೇವಸ್ಥಾನವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿರುವ ತೊಳಸಿ ಗ್ರಾಮದ ಹಿರಿಯ ಮತ್ತು ಕಿರಿಯ ಮುಖಂಡರ ಶ್ರದ್ಧಾ ಕಾರ್ಯಕ್ಕೆ ನಿಜಕ್ಕೂ ಶ್ಲಾಘನೀಯ,ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ಗ್ರಾಮಸ್ಥರು ಒಗ್ಗಟ್ಟಾಗಿ ನಿಂತು ಸದೃಢ ಸಮಾಜಕ್ಕೆ ಸಾಕ್ಷಿ ಆಗಬೇಕು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ತಿಳಿಸಿದರು.
ತುಳಸಿ ಗ್ರಾಮಸ್ಥರಿಂದ ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ್ ರವರಿಗೆ ಅದ್ದೂರಿ ಸ್ವಾಗತ
ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ತುಳಸಿ ಗ್ರಾಮದ ಮುಖ್ಯ ದ್ವಾರಕ್ಕೆ ಕಾಲಿಡುತ್ತಿದ್ದಂತೆ ಗ್ರಾಮದ ಹಿರಿಯ ಹಾಗೂ ಕಿರಿಯ ಜನರು ಸಹಸ್ರ ಸಂಖ್ಯೆಯಲ್ಲಿ ಸೇರಿ ಜೆಸಿಬಿ ಮೂಲಕ ಹೂ ಎರಚಿ ಪಟಾಕಿ ಸಿಡಿಸಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಡಾ:ರಾಮಕೃಷ್ಣೇಗೌಡ,ಸ್ನೇಹ ಜೀವಿ ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ (ರಮೇಶ್),ಚಂದ್ರು,ಗ್ರಾಮದ ಹಿರಿಯ ಮುಖಂಡ ರಾಮೇಗೌಡ ಪಾಪೇಗೌಡ,ನಂಜೇಗೌಡ,ಚಿಕ್ಕೇಗೌಡ,ಚಿಕ್ಕತ್ತರಹಳ್ಳಿ ಮರೀಗೌಡ,ಪುಟ್ಟರಾಜು, ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್,ಗ್ರಾಮದ ಬಸವೇಶ್ವರ ಯುವಕರ ಬಳಗದ ಯುವ ಸಮುದಾಯ ಸೇರಿದಂತೆ ಗ್ರಾಮಸ್ಥರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
