ಕೊರಟಗೆರೆ:- ಪಟ್ಟಣದಲ್ಲಿ ಮೇ 1 ರಿಂದ 3ನೇ ತಾರೀಕಿನ ವರೆಗೆ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಕಬ್ಬಡ್ಡಿ ಜಾತ್ರೆಯನ್ನು ಗೃಹ ಸಚಿವರಾದ ಡ.ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಮತ್ತು ಮಾಜಿ ಯುವ ಕಾಂಗ್ರೆಸ್ ಅದ್ಯಕ್ಷ ಕೆ.ಎಸ್.ವಿನಯ್ ಕುಮಾರ್ ತಿಳಿಸಿದರು.
ಅವರು ಪಟ್ಟಣದ ರಾಜೀವ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಡಾ.ಜಿ.ಪರಮೇಶ್ವರ ಯುವ ಪಡೆ ಹಾಗೂ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಸಂಸ್ಥೆ ತುಮಕೂರು ಇವರ ಸಹಯೋಗದಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಕಬ್ಬಡ್ಡಿ ಪಂದ್ಯಗಳನ್ನು ನಡೆಸಲಾಗುವುದು ಈ ಪಂದ್ಯವಳಿಗಳಿಗೆ ಪುರಷರ 16 ತಂಡಗಳು ಮತ್ತು ಮಹಿಳೆಯರ 6 ತಂಡಗಳು ಭಾಗವಹಿಸಲಿವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಚಂದ್ರಶೇಖರ್ಗೌಡ ಮಾತನಾಡಿ ಡಾ.ಜಿ.ಪರಮೇಶ್ವರ ರವರಿಂದ ಜಿಲ್ಲೆಯಲ್ಲಿ ಕ್ರೀಡೆ ಮತ್ತು ಸಂಸ್ಕೃತಿಕ ವೈಭವ ಹೆಚ್ಚುತ್ತಿದೆ, ಈ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ವಿಜೇತರಿಗೆ ಮೊದಲ ಬಹುಮಾನ 1 ಲಕ್ಷ, ದ್ವೀತೀಯ 75 ಸಾವಿರ, ತೃತೀಯ 50 ಸಾವಿರ, ನಾಲ್ಕನೇ 25 ಸಾವಿರ ಬಹುಮಾನಗಳನ್ನು ಅದೇ ರೀತಿ ಮಹಿಳೆಯರಿಗೆ ಪ್ರಥಮ ಬಹುಮಾನ 40 ಸಾವಿರ, ದ್ವಿತೀಯ 30 ಸಾವಿರ, ತೃತಿಯ 20 ಸಾವಿರ, ನಾಲ್ಕನೇ ಬಹುಮಾನ10 ಸಾವಿರ ಬಹುಮಾನಗಳನ್ನು ಪ್ರಯೋಜಿಸಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಅರಕೆರೆಶಂಕರ್ ಮಾತನಾಡಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಮಾರ್ಗದರ್ಶನದಲ್ಲಿ ನಮ್ಮ ಕ್ಷೇತ್ರದಲ್ಲಿ ಕಬ್ಬಡ್ಡಿ ಪಂದ್ಯಾವಳಿಗಳು ನಡೆಯುತ್ತಿದ್ದು ಪಂದ್ಯವಳಿಗಳನ್ನು ವೀಕ್ಷಿಸಲು ಎರಡು ಗ್ಯಾಲೆರಿಗಳನ್ನು ನಿರ್ಮಿಸಲಾಗುವುದು, ಎಲ್ಲರಿಗೂ 3 ದಿನಗಳ ಕಾಲ ಊಟ ಮತ್ತು ತಿಂಡಿ ವ್ಯವಸ್ಥೆ ಇರುತ್ತದೆ, ಪಂದ್ಯವಳಿಗಳು ಹೊನಲು ಬೆಳಕಿನ ಪಂದ್ಯಗಳಾಗಿದ್ದು ಕಬ್ಬಡ್ಡಿ ಜಾತ್ರೆಗೆ ಜನರು ಹೆಚ್ಚಿನ ಜನಸಂಖ್ಯೆಯಲ್ಲಿ ಬರುವಂತೆ ಕೋರಿದರು.
ಪತ್ರಿಕಾ ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೊಡ್ಲಹಳ್ಳಿ ಅಶ್ವಥನಾರಾಯಣ, ಆಯೋಜಕ ಅರವಿಂದ್, ಮುಖಂಡರುಗಳಾದ ಮಹಾಲಿಂಗಪ್ಪ, ವಾಲೆಚಂದ್ರಯ್ಯ, ಕುಮಾರ್, ವೆಂಕಟೇಶ್, ಎಲ್.ರಾಜಣ್ಣ, ಜಯಮ್ಮ, ಕವಿತ, ಓಬಳರಾಜು, ರುದ್ರಪ್ರಸಾದ್, ಕೆ.ವಿ.ಮಜುನಾಥ್, ನಾಸೀರ್, ಜಿ ಟಿ ನಾಗಭೂಷಣ್ ,ಮುನ್ನಾಭಾಯ್, ಜಮೀರ್, ಜಯರಾಮ್, ಸುರೇಶ್, ಗೊಂದಿಹಳ್ಳಿ ರಂಗರಾಜು, ಆರಾದ್ಯ, ಸುನಿಲ್, ಅಟೋಕುಮಾರ್, ಕೆ.ಬಿ.ಲೋಕೇಶ್, ಅರವಿಂದ್, ಏರ್ಟೆಲ್ ಗೋಪಿ, ಕೆಎಲ್ಎಂ ಮಂಜು, ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
