ಪಡುವಣದೆಡೆಗೆ
ಬಾ ಗೆಳತಿ ಬಾ ಗರತಿ ಬಾ ಬಾ
ಬೆರಳೊಳಗೆ ಬೆರಳುಗಳ ಸೇರಿಸು,
ಉಸಿರೊಳಗೆ ಉಸಿರು ಬೆರಿಸು
ತುಸು ಭರವಸೆಯ ಕೂಡಿಸು
ಪಿರುತಿ ಸಂಚಯವ ಕರಗಿಸದೆ
ಜೊತೆಗಿರಿಸಿ ಬಾ ಬಾ
ಸಾಗೋಣ ನಗು ನಗುತ ,
ನೆಗೆ ನೆಗೆಯುತ ನಾಕದೆಡೆ…..
ಬಾಡದ ಸ್ಮಿತ ವದನ
ಕಾಂತಿಯುತ ಕಣ್ಣೊಡಣನೆ
ವರುಷ ಅರವತ್ತಾದರೇನು
ಹರುಷ ದುಪ್ಪಟ್ಟಾಗಿಲ್ಲವೇನು?
ಸತ್ವಯುತ ದಾಂಪತ್ಯದ ಬುತ್ತಿ ಜೋತೆಗಿರಲು
ಸಾರ್ಥಕ ಬದುಕು ಕಳೆದಿರುವ ನೆಮ್ಮದಿಯು ನಮ್ಮದಾಗಿರಲು
ಪರರ ದ್ವೇಶಿಸದೆ ಯಾರ ದೂಶಿಸದೆ
ಕೇಡನ್ನೂ ಕನಸಲ್ಲೂ ಯಾರಿಗೂ | ಬಯಸದೆ
ನಿರ್ಮಲ,ನಿಷ್ಕಲ್ಮಶ,ಪ್ರಾಂಜಲ ನಿಲಾಂಜನದ ಬದುಕು | ನಮ್ಮದಾಗಿರಲು
ಯಾರೀಗೂ ಕೈ ಚಾಚದ, ಹಣ ಭಾರ ಋಣವ ಹೊರದ ಬದುಕು | ನಮ್ಮದು ಗೆಳತಿ ..ಗರತಿ.
ಧಾವಂತ ಬದುಕಿನಲಿ ಪ್ರತಿ ಚಣವು ಪ್ರತಿ ದಿನವು ನಮ್ಮ ಪ್ರಭಂಜನ ವಿಠ್ಠಲನನ್ನು ಸ್ಮರಿಸಲಿಲ್ಲಾ,ಮರೆಯಲೂ ಇಲ್ಲಾ,ಮೆರೆಯಲೂ ಇಲ್ಲಾ.
ಹಾಗಂತ …ಅವನಿಟ್ಟ ಈ ಬದುಕಿಗೆ ದೂಶಿಸಲೂ ಇಲ್ಲಾ
ಹೆದರದಿರು ಗೆಳತಿ ಗರತಿ ಅವನಿರುವ ಧರಣಿಯಿದು
ಸೋಲು,ಹತಾಶೆ,ನಿರಾಶೆ ಆಯಾಸಗಳಿಗೆಲ್ಲಾ ಅವಕಾಶವಿಲ್ಲಾ
ನಮ್ಮ ಪ್ರಭಂಜನ ವಿಠ್ಠಲನ ನಾಮದ ಪ್ರಣತಿ ಜೊತೆಗಿದೆ.
ಅದರೊಳಗೆ ಭಕ್ತಿ ತೃಪ್ತಿ ಪ್ರಾಪ್ತಿ ಸಂತೃಪ್ತಿ ತೈಲವೂ ಇದೆ.
ಬಾ ಗೆಳತಿ ಬಾ ಗೆಳತಿ……
ಬಾ ಗರತಿ ಬಾ ಬಾ……..
ಮೂಡದ ಪಯಣವಿದು ಮುಗಿಯುತ್ತ ಬಂದಿಹುದು
ಸಂತೃಪ್ತಮನಸ್ಸಿಂದ ,ಜೀವನದ ಕಾನನವ ದಾಟಿ ಹೂ ಬನದ ಪಡುವಣದ ಕಡೆಗೆ ಹೋಗೊಣ ಬಾ ಬಾ ಗೆಳತಿ..ಗರತಿ.
– ಬೇರುಭೂಮಿ
