ಕನಸುಗಳ ಮಳೆಯಿದು
ಸುರಿಯುತ್ತಿರಲಿ ಪ್ರಥ್ವಿಯ
ಅಂದ ಹೆಚ್ಚಲಿ ಹನಿಹನಿಯ
ಸಾಗರದಂತೆ ತುಂಬಿ ತುಳಕಲಿ
ತಣ್ಣನೆಯ ತಂಪು ಹವಾಮಾನ
ಬರಲಿ ಮಳೆಯ ಜಲ ಇರಲಿ
ಪ್ರಕೃತಿಯ ಒಲವು ಚೆಲುವು
ಮೋಹಕ ಬಣ್ಣವಿದು ಚೆಂದವೂ
ಅರಳಿ ನಗುವ ಹೂವುಗಳು
ಸುಂದರ ಪರಿಸರ ಸೃಷ್ಟಿಯ
ಏಕನಾದ ಮೊಳಗುವ ಘಂಟೆ
ಪೂಜಾ ಮಂತ್ರಗಳು ನಿತ್ಯವೂ
ಎಲ್ಲ ಇರುವ ಸೊಗಸು ಆನಂದ
ಹೆಚ್ಚಳ ಬದುಕ ನೈಸರ್ಗಿಕವಿದು
ಸವಿಯುವ ಆನಂದವೇ ಬೇರೆ
ರಮಣೀಯ ನಿಸರ್ಗ ತಾಣವು
✍️ ಗಾಯತ್ರಿ ಎಸ್ ಕೆ
ಬೇರು ಭೂಮಿ 🌱☘️
