ಕೆ.ಆರ್.ಪೇಟೆ,ಮೇ.08: ತಾಲೂಕು ಯುವ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಮಾದಾಪುರ ಸೋಮಶೇಖರ್ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಚಿಕ್ಕಗಾಡಿಗನಹಳ್ಳಿ ಎನ್.ಪರಮೇಶ್ ಅವರ ಅಧ್ಯಕ್ಷತೆ ನಡೆದ ಸಭೆಯಲ್ಲಿ ತಾಲ್ಲೂಕು ಯುವ ಪರಿಷತ್ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಸಭೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಯುವ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಮಾದಾಪುರ ಸೋಮಶೇಖರ್ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಉಪಾಧ್ಯಕ್ಷರಾಗಿ ಶಶಿಕಲಾ ನಾಗೇಂದ್ರ, ಕಾರ್ಯದರ್ಶಿಯಾಗಿ ರಾಯಸಮುದ್ರ ದರ್ಶನ್, ಸಂಘಟನಾ ಕಾರ್ಯದರ್ಶಿಯಾಗಿ ಪ್ರೀತಿ, ಸಹ ಕಾರ್ಯದರ್ಶಿಯಾಗಿ ಮನೋಜ್, ಖಜಾಂಚಿಯಾಗಿ ಹರಿಹರಪುರ ನಾಗೇಂದ್ರ, ನಿರ್ದೇಶಕರುಗಳಾಗಿ ಮಾದಾಪುರ ಅಭಿಷೇಕ್, ಹರಿಹರಪುರ ನರಸಿಂಹ, ಚೆಲುವರಾಜು, ಅಲೇನಹಳ್ಳಿ ಚಂದ್ರು, ಸಲಹಾ ಸಮಿತಿ ಸದಸ್ಯರಾಗಿ ಹೊಸಹೊಳಲು ಮಂಜುಳಮ್ಮ, ಸುಕನ್ಯಾ ರಂಗನಾಥ್, ಸುನೀತಾ ದಯಾನಂದ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಯುವ ಪರಿಷತ್ ಅಧ್ಯಕ್ಷರಾದ ಎನ್.ಪರಮೇಶ್ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಯುವ ಪರಿಷತ್ ಉಪಾಧ್ಯಕ್ಷರಾದ ಕುಮಾರ್, ತಡಗವಾಡಿ ನಾಗರಾಜು, ಸಹ ಕಾರ್ಯದರ್ಶಿಗಳಾದ ಅರಕೆರೆ ಮುನಿಸ್ವಾಮಿ ಇತರರು ಉಪಸ್ಥಿತರಿದ್ದರು.
ನೂತನ ತಾಲ್ಲೂಕು ಯುವ ಪರಿಷತ್ ಅಧ್ಯಕ್ಷ ಮಾದಾಪುರ ಸೋಮಶೇಖರ್ ಮಾತನಾಡಿ ತಾಲ್ಲೂಕಿನಲ್ಲಿ ಯುವ ಜನರ ಪ್ರಗತಿಗೆ ತಾಲ್ಲೂಕು ಘಟಕವು ಕೆಲಸ ಮಾಡಲಿದೆ. ಯುವ ಸಮುದಾಯದ ಅಭಿವೃದ್ಧಿ ನಮ್ಮ ಯುವ ಪರಿಷತ್ ಕೆಲಸ ಮಾಡಲಿದೆ. ಯುವಕರ ಸಂಘಗಳಿಗೆ ಹಾಗೂ ಯುವತಿಯರ ಸಂಘಗಳಿಗೆ ಯುವಜನ ಕ್ರೀಡಾ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯಗಳು ಕೊಡಿಸಲು ತಾವು ಶ್ರಮಿಸುವುದಾಗಿ ತಿಳಿಸಿದರು. ಯುವ ಜನರು ಸಂಘಟಿತರಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ದುಶ್ಚಟಗಳಿಂದ ದೂರವಿರಬೇಕು. ಈ ಬಗ್ಗೆ ನಮ್ಮ ಯುವ ಪರಿಷತ್ ವತಿಯಿಂದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಯುವಜನರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಹಕಾರ ನೀಡಬೇಕು ಎಂದು ಮಾದಾಪುರ ಸೋಮಶೇಖರ್ ಮನವಿ ಮಾಡಿದರು.
– ಶ್ರೀನಿವಾಸ್ ಆರ್.
