ಬೆಂಗಳೂರು, ಮೇ 25: Bangalore Water Supply and Sewerage Board ವತಿಯಿಂದ ಭಾರತದ ಮೊದಲ “National AI Summit on Water 2026” ಸಮಾರಂಭವನ್ನು ಮೇ 27ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಈ ಮಹತ್ವದ ಶೃಂಗಸಭೆಯನ್ನು BWSSB ಹಾಗೂ Elets Technomedia Pvt. Ltd. ಸಂಯುಕ್ತವಾಗಿ ಆಯೋಜಿಸುತ್ತಿದ್ದು, ಕಾರ್ಯಕ್ರಮದ ಒಪ್ಪಂದ ಪತ್ರಕ್ಕೆ 2026ರ ಫೆಬ್ರವರಿ 20ರಂದು ಸಹಿ ಹಾಕಲಾಗಿತ್ತು.
ನಗರ ಜಲ ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯ ಕುರಿತು ಈ ಸಮಿಟ್ನಲ್ಲಿ ವಿಶೇಷ ಚರ್ಚೆಗಳು ನಡೆಯಲಿವೆ. AI ಆಧಾರಿತ ಸ್ಮಾರ್ಟ್ ಕಾರ್ಯಾಚರಣೆಗಳು, ಡಿಜಿಟಲ್ ಟ್ವಿನ್ಸ್, ನೀರು ಸೋರಿಕೆ ನಿಯಂತ್ರಣ, ಇಂಧನ ದಕ್ಷತೆ, ಡೇಟಾ ಆಡಳಿತ, ನೈತಿಕ ಎಐ ಹಾಗೂ ಸೈಬರ್ ಭದ್ರತೆ ಪ್ರಮುಖ ವಿಷಯಗಳಾಗಿವೆ.
BWSSB ತನ್ನ ಡಿಜಿಟಲ್ ಪರಿವರ್ತನೆ ಕಾರ್ಯಕ್ರಮಗಳಾದ SCADA ವ್ಯವಸ್ಥೆ, GIS ಮ್ಯಾಪಿಂಗ್, IoT ಆಧಾರಿತ ಟ್ಯಾಂಕರ್ ಟ್ರ್ಯಾಕಿಂಗ್ ಹಾಗೂ ಸ್ಮಾರ್ಟ್ ಮೀಟರಿಂಗ್ ವ್ಯವಸ್ಥೆಗಳನ್ನು ಸಮಿಟ್ನಲ್ಲಿ ಪ್ರದರ್ಶಿಸಲಿದೆ.
ನಗರ ಜಲ ಆಡಳಿತದ ಭವಿಷ್ಯಕ್ಕಾಗಿ BWSSB ರೂಪಿಸಿರುವ “Five Panchasutras” ಮಾದರಿಯನ್ನೂ ಇದೇ ವೇಳೆ ಪರಿಚಯಿಸಲಾಗುತ್ತದೆ. ಇದರಲ್ಲಿ ಕೃತಕ ಬುದ್ಧಿಮತ್ತೆ, ಡೇಟಾ ಆಧಾರಿತ ಆಡಳಿತ, ಸ್ಮಾರ್ಟ್ ಮೂಲಸೌಕರ್ಯ, ಸುಸ್ಥಿರ ಹೂಡಿಕೆ ಹಾಗೂ ಹವಾಮಾನ ಪ್ರತಿರೋಧಕ ಜಲ ಭದ್ರತಾ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗಿದೆ.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ.
ಜಯನಗರದ ಶಿಂಷಾ ಭವನದಲ್ಲಿ ಏಷ್ಯಾದ ಅತಿ ದೊಡ್ಡ AI ಆಧಾರಿತ ಜಲ ಮತ್ತು ಒಳಚರಂಡಿ ಕಮಾಂಡ್ ಸೆಂಟರ್ ಸ್ಥಾಪನೆಗೂ BWSSB ಯೋಜನೆ ರೂಪಿಸಿದೆ.
