ನವದೆಹಲಿ, ಮೇ 25: Reserve Bank of India ನಗರ ಹಾಗೂ ಗ್ರಾಮೀಣ ಸಹಕಾರಿ ಬ್ಯಾಂಕ್ಗಳ ನಿರ್ದೇಶಕರಿಗೆ ಮಹತ್ವದ ನಿಯಮ ಜಾರಿಗೆ ತಂದಿದ್ದು, ಒಂದೇ ಸಹಕಾರಿ ಬ್ಯಾಂಕ್ನಲ್ಲಿ ನಿರಂತರ 10 ವರ್ಷ ಸೇವೆ ಸಲ್ಲಿಸಿದ ನಿರ್ದೇಶಕರು ಮರುನೇಮಕವಾಗಲು ಮೂರು ವರ್ಷದ “ಕೂಲಿಂಗ್ ಆಫ್” ಅವಧಿ ಕಡ್ಡಾಯಗೊಳಿಸಿದೆ.
2026ರ ಮೇ 25ರಂದು RBI ಅಂತಿಮ ತಿದ್ದುಪಡಿ ನಿರ್ದೇಶನಗಳನ್ನು ಪ್ರಕಟಿಸಿದ್ದು, ಈ ನಿಯಮವು Urban Co-operative Banks, State Co-operative Banks ಹಾಗೂ Central Co-operative Banksಗಳಿಗೆ ಅನ್ವಯವಾಗಲಿದೆ.
ಹೊಸ ನಿಯಮದ ಪ್ರಕಾರ, ಒಂದೇ ಬ್ಯಾಂಕ್ನ ಆಡಳಿತ ಮಂಡಳಿಯಲ್ಲಿ 10 ವರ್ಷಗಳ ನಿರಂತರ ಸೇವೆ ಸಲ್ಲಿಸಿದ ನಿರ್ದೇಶಕರು ಮೂರು ವರ್ಷಗಳ ವಿರಾಮ ಪಡೆದ ನಂತರ ಮಾತ್ರ ಮರುನೇಮಕಕ್ಕೆ ಅರ್ಹರಾಗುತ್ತಾರೆ.
ಈ ಮೂರು ವರ್ಷದ ಕೂಲಿಂಗ್ ಆಫ್ ಅವಧಿಯಲ್ಲಿ, ಮಾಜಿ ನಿರ್ದೇಶಕರು ಅದೇ ಬ್ಯಾಂಕ್ನಲ್ಲಿ ಸದಸ್ಯ ಅಥವಾ ಗ್ರಾಹಕರಾಗಿ ಹೊರತುಪಡಿಸಿ ಯಾವುದೇ ಹುದ್ದೆ ಅಥವಾ ಜವಾಬ್ದಾರಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಇರುವುದಿಲ್ಲ.
ಆದರೆ, ಸಂಬಂಧಿತ ನಿಯಮಗಳ ಪ್ರಕಾರ ಅರ್ಹತೆ ಹೊಂದಿದ್ದರೆ ಬೇರೆ ಸಹಕಾರಿ ಬ್ಯಾಂಕ್ಗಳ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ನಿರಂತರ ಸೇವಾ ಅವಧಿ ಲೆಕ್ಕಾಚಾರದಲ್ಲಿ ಮೂರು ವರ್ಷಕ್ಕಿಂತ ಕಡಿಮೆ ವಿರಾಮವನ್ನು ಸಹ ಒಟ್ಟು ಸೇವಾ ಅವಧಿಯ ಭಾಗವೆಂದು ಪರಿಗಣಿಸಲಾಗುತ್ತದೆ. ಕನಿಷ್ಠ ಮೂರು ವರ್ಷದ ವಿರಾಮವಿದ್ದರೆ ಮಾತ್ರ ಹೊಸ ಸೇವಾ ಅವಧಿ ಪ್ರಾರಂಭವಾದಂತೆ ಪರಿಗಣಿಸಲಾಗುತ್ತದೆ.
ಈ ಹಿಂದೆ ಜಾರಿಯಲ್ಲಿದ್ದ ನಿಯಮದ ಪ್ರಕಾರ ನಿರ್ದೇಶಕರ ಗರಿಷ್ಠ ನಿರಂತರ ಸೇವಾ ಅವಧಿ ಎಂಟು ವರ್ಷಗಳಾಗಿತ್ತು. ಆದರೆ Banking Regulation (Amendment) Act, 2025 ತಿದ್ದುಪಡಿಯ ಮೂಲಕ 2025ರ ಆಗಸ್ಟ್ 1ರಿಂದ ಅದನ್ನು 10 ವರ್ಷಗಳಿಗೆ ವಿಸ್ತರಿಸಲಾಗಿತ್ತು.
ಆರ್ಬಿಐ ಈ ಸಂಬಂಧ ಕರಡು ತಿದ್ದುಪಡಿ ನಿರ್ದೇಶನಗಳನ್ನು 2026ರ ಜನವರಿ 8ರಂದು ಪ್ರಕಟಿಸಿ, ಜನವರಿ 30ರವರೆಗೆ ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿತ್ತು. ಇದೀಗ ಅಂತಿಮ ಆದೇಶ ಮೇ 25ರಿಂದ ಜಾರಿಗೆ ಬಂದಿದೆ.
