ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಅಗಸರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ 7 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಗೆದ್ದವರ ವಿವರ: ಮಹೇಶ್.ಆರ್, ಲೋಕೇಶ್.ಎಸ್, ಎ.ಟಿ.ಹರೀಶ್, ಜಿ.ಗಿರೀಶ್, ಎ.ವಿ.ಮೋಹನ್, ಅಶ್ವಿನಿರವಿ, ಮಂಜುಳಾ ಯೋಗೇಗೌಡ, ಎ.ಎಸ್.ಶ್ಯಾಮೇಶ್, ಮಂಜುನಾಥ್.ಆರ್, ಕುಮಾರ್ ಅವರುಗಳು ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ವಾಸಿಂಪಾಷಾ ಅವರು ತಿಳಿಸಿದ್ದಾರೆ. ಸಹ ಚುನಾವಣಾಧಿಕಾರಿಯಾಗಿ ಡೇರಿಯ ಕಾರ್ಯದರ್ಶಿ ಗೋವಿಂದೇಗೌಡ ಕಾರ್ಯನಿರ್ವಹಣೆ ಮಾಡಿದರು.
ನೂತನ ನಿರ್ದೇಶಕರನ್ನು ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎನ್.ಗೋವಿಂದರಾಜು, ಮುಖಂಡರಾದ ಯುವರಾಜ್, ಕೃಷ್ಣೇಗೌಡ, ಎ.ಡಿ.ನಾಗರಾಜು, ರಾಮಕೃಷ್ಣ ಸೇರಿದಂತೆ ಅಗಸರಹಳ್ಳಿ ಗ್ರಾಮಸ್ಥರು ಹಾಗೂ ಮುಖಂಡರು, ಯುವಕರು ಅಭಿನಂದಿಸಿದರು.
ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎನ್.ಗೋವಿಂದರಾಜು ಮಾತನಾಡಿ ನಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಎಲ್ಲಾ ನಿರ್ದೇಶಕರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತೇನೆ. ಗ್ರಾಮದ ಅಭಿವೃದ್ಧಿಗೆ ಹಾಲು ಉತ್ಪಾದಕರ ಸಹಕಾರ ಸಂಘವು ಪೂರಕವಾಗಿ ಕೆಲಸ ಮಾಡುತ್ತಿದೆ. ಚುನಾವಣೆ ಮುಗಿದಿದೆ. ಗೆದ್ದ ಎಲ್ಲಾ ನಿರ್ದೇಶಕರು ನಮ್ಮ ಗ್ರಾಮದವರೇ ಆಗಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಗ್ರಾಮದ ಡೇರಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿಬೇಕು. ಡೇರಿಯಲ್ಲಿ ರಾಜಕೀಯ ಬೆರೆಸಬಾರದು. ರಾಜಕೀಯ ಬದಿಗಿಟ್ಟು ಡೈರಿಯ ಅಭಿವೃದ್ದಿಗೆ ಎಲ್ಲರೂ ಶ್ರಮಿಸಬೇಕು. ಈ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಗೋವಿಂದರಾಜು ನೂತನ ನಿರ್ದೇಶಕರಿಗೆ ಸಲಹೆ ನೀಡಿದರು.
– ಶ್ರೀನಿವಾಸ್ ಆರ್.
