ಬೆಂಗಳೂರು, ಜೂ. 11: ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಇದೇ ಜೂನ್ 14ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಗೌಡತಿಯರ ಸೇನೆ ವತಿಯಿಂದ ಆಯೋಜಿಸಿರುವ “ನಮ್ಮ ಕುಲ ಶಿಲ್ಪಿಗಳು” ಉಪನ್ಯಾಸ ಮಾಲೆಯ ಮೂರನೇ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ “ಗಂಗ ಅರಸರು ಮತ್ತು ಗಜಶಾಸ್ತ್ರ ಪ್ರಾವೀಣ್ಯತೆ” ವಿಷಯದ ಕುರಿತು ಇತಿಹಾಸ ಹಾಗೂ ಶಾಸನ ತಜ್ಞೆ, ಪುರಾತತ್ವ ಇಲಾಖೆ ಮತ್ತು ವಸ್ತು ಸಂಗ್ರಹಾಲಯ ಇಲಾಖೆಯ ನಿರ್ದೇಶಕಿ ಡಾ. ಸ್ಮಿತಾ ರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹಾಗೂ ಖ್ಯಾತ ಅನುವಾದಕಿ ಡಾ. ಕೆ.ಆರ್. ಸಂಧ್ಯಾರೆಡ್ಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಡಬ್ಲ್ಯೂ.ಡಿ. ಅಶೋಕ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಅನಿಕೇತನ ಮಾಯಣ್ಣ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಲೇಖಕಿ ಡಾ. ಎಂ.ಎಸ್. ಶಶಿಕಲಾಗೌಡ, ಗೌಡತಿಯರ ಸೇನೆಯ ಅಧ್ಯಕ್ಷೆ ಕೆಂಪಾಜಮ್ಮ, ಕಾರ್ಯದರ್ಶಿ ರೂಪಾಗೌಡ, ಸಂಸ್ಥಾಪಕ ಗರ್ಕಳ್ಳಿ ಕೃಷ್ಣೇಗೌಡ ಹಾಗೂ ಸಾಹಿತಿ ಡಾ. ಸಿಸಿರಾ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬೊಮ್ಮನಾಯಕನಹಳ್ಳಿ ಲಾಲ್ಬಾಗ್ ಮಹೇಶ್, ದೇಶಮುಖ ಪತ್ರಿಕೆಯ ಸಂಪಾದಕ ಹೆಚ್.ಕೆ. ಬೊಮ್ಮೇಗೌಡ, ಖ್ಯಾತ ಗಾಯಕಿ ಭಾಗ್ಯಶ್ರೀ ಹಾಗೂ ಸಮಾಜ ಸೇವಕಿ ಹೆಚ್.ಡಿ. ಪುಷ್ಪಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಗುವುದು.
ಇದೇ ಸಂದರ್ಭದಲ್ಲಿ ಭುವನೇಶ್ವರಿ ಕಲಾ ಬಳಗದ ಎಲ್. ಬಸವಲಿಂಗ ಮತ್ತು ತಂಡದವರಿಂದ ಕನ್ನಡ ನಾಡು-ನುಡಿ ಗೀತೆಗಳ ಗಾಯನ ಹಾಗೂ ಕು. ಶ್ರೇಯಾಶ್ರೀ ಅವರಿಂದ ನೃತ್ಯ ಪ್ರದರ್ಶನ ನಡೆಯಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌಡತಿಯರ ಸೇನೆ ಪ್ರಕಟಣೆಯಲ್ಲಿ ಕೋರಿದೆ.
