ಕೊರಟಗೆರೆ ;- ರಾಜ್ಯದಲ್ಲಿ ವಿದ್ಯುತ್ ವಿತರಣಾ ಚಟುವಟಿಕೆಗಳನ್ನು ನಡೆಸಲು ಟಾಟಾ ಪವರ್ ಕಂಪನಿಗಳಿಗೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಕೊರಟಗೆರೆ ಬೆಸ್ಕಾಂ ಉಪವಿಭಾಗದ ಕಛೇರಿ ಮುಂದೆ ಬೆಸ್ಕಾಂ ನೌಕರರು ಕೇಂದ್ರ ಸರ್ಕಾರದ ವಿರುದ್ದ ಸಾಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕೊರಟಗೆರೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಪ್ರಸನ್ನ ಕುಮಾರ್ ಕೇಂದ್ರ ಸರ್ಕಾರವು ವಿದ್ಯುತ್ ಪ್ರಸರಣ ಹಾಗೂ ಸರಬರಾಜು ನಿಗಮಗಳನ್ನು ಖಾಸಗೀಕರಣ ಗೊಳಿಸುವ ಉದ್ದೇಶದಿಂದ ಜಾರಿ ಮಾಡಲು ಹೊರಟಿರುವ ವಿದ್ಯುತ್ ತಿದ್ದುಪಡಿ ಕಾಯ್ದೆ-2026 ಅನ್ನು ವಾಪಸ್ ಪಡೆಯಬೇಕು ಬೆಸ್ಕಾಂ ಸೇರಿದಂತೆ ಇನ್ನಿತರ ವಿದ್ಯುತ್ ಪ್ರಸರಣಾ ಕೇಂದ್ರಗಳು ಸಾವಿರಾರು ಕೋಟಿ ಮೌಲ್ಯದ ವಿತರಣಾ ಕಂಪನಿಗಳು, ಉಪಕೇಂದ್ರಗಳು, ಯಂತ್ರೋಪಕರಣ ಬೃಹತ್ ಸೌಕರ್ಯ ಹೊಂದಿರುವ ಸಾರ್ವಜನಿಕ ಅಸ್ತಿ ಅಗಿದ್ದು ನೌಕರರು ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ, ಅದರೂ ಖಾಸಗಿ ಕಂಪನಿಯವರಿಗೆ ವಹಿಸುವುದನ್ನು ಖಂಡನೀಯ ಎಂದ ಅವರು ಖಾಸಗಿ ಕಂಪನಿಗಳಿಗೆ ನೀಡಿದರೆ ಖಾಸಗಿ ಕಂಪನಿಗಳು ಸ್ಮಾರ್ಟ್ ಮೀಟರ್ಗಳನ್ನು ಹಾಕಿ ಮೊಬೈಲ್ ಕಂಪನಿಗಳ ರೀತಿ ಪೋಸ್ಟ್ ಪೇಯ್ದ್ ತರಹ ವ್ಯವಸ್ಥೆಗಳನ್ನು ಮಾಡುತ್ತಾರೆ, ರೈತರು ಬಡವರಿಗೆ ಕೂಲಿ ಕಾರ್ಮಿಕರಿಗೆ, ವೃದ್ದರಿಗೆ, ರೈತರ ಪಂಪ್ ಸೇಟ್ಗಳಿಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸೇರಿದೆಂತೆ ಇನ್ನಿತರ ಯೋಜೆನಗಳು ಮುಂದಿನ ದಿನಗಳಲ್ಲಿ ರದ್ದಾಗಲಿದ್ದು ಯವುದೇ ಕಾರಣಕ್ಕೂ ಕಾರ್ನಾಟಕ ಸರ್ಕಾರ ವಿದ್ಯುತ್ ವಿತರಣೆ ಕಂಪನಿಗಳನ್ನು ಖಾಸಗಿ ಯವರಿಗೆ ವಿಹಿಸಬಾರದು ಎಂದು ತಿಳಿಸಿದರು.
ಕೊರಟಗೆರೆ ಉಪವಿಭಾಗದ ನೌಕರರ ಸಂಘದ ಕಾರ್ಯದರ್ಶಿ ಕೆ.ವಿ.ನಟರಾಜು ಮಾತನಾಡಿ ವಿದ್ಯುತ್ ಚಟುವಟಿಕೆ ಖಾಸಗೀಕರಣ ಮಾಡಿದರೆ ಮೊಬೈಲ್ ಸೇವಾ ಕಂಪನಿಗಳ ರೀತಿ ಕರನ್ಸಿಹಾಕಿಸಿ ವಿದ್ಯುತ್ ಬಲಸುವ ಪರಿಸ್ಥಿತಿ ಬರುತ್ತದೆ ರೈತರ ಕೊಳವೆಬಾವಿಗೂ ವಿದ್ಯುತ್ ಸಿಗದ ಪರಿಸ್ಥಿತಿ ನಿರ್ಮಾಣವಾಗಲಿದ್ದು ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಟನೆಯಲ್ಲಿ ಕೆಪಿಟಿಸಿಎಲ್ 659 ನೌಕರರ ಸಂಘದ ಆಧಿಕ ಕಾರ್ಯದರ್ಶಿ ಹೆಚ್. ತಿಮ್ಮಪ್ಪ, ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಕೊರಟಗೆರೆ ಉಪ ವಿಭಾಗದ ನೌಕರರ ಸಂಘದ ಅಧ್ಯಕ್ಷ ಹೆಚ್.ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ವಿ.ನಟರಾಜು, ಸುನಿಲ್ಕುಮಾರ್, ಸಹಾಯಕ ಇಂಜಿನಿಯರ್ ಯೋಗೀಶ್, ಕಿರಿಯ ಇಂಜಿನಿಯರ್ ಮಲ್ಲಯ್ಯ, ಕಂದಾಯ ಶಾಖೆಯ ಜೆ.ಡಿ.ರಾಘವೇಂದ್ರ, ಕೆ.ವಿ.ಮಂಜುಳಾವಾಣಿ, ಪಾತೀಮ, ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಲಕ್ಷ್ಮಿಕಾಂತಬಾಬು, ಮೂಡ್ಲಗಿರಿಯಪ್ಪ, ಗೋವಿಂದರಾಜು, ವೆಂಕಟೇಶ್, ಮುತ್ತುರಾಜ್ ಸೇರಿದಂತೆ ನೌಕರರು, ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳು, ಮುಖಂಡರುಗಳು ಭಾಗವಹಿಸಿ ಖಾಸಗಿಕರಣ ವಿರೋಧಕ್ಕೆ ಬೆಂಬಲ ವ್ಯಕ್ತಪಡಿಸಿದರು.
-ಶ್ರೀನಿವಾಸ್ ಕೊರಟಗೆರೆ.
