ಕೊರಟಗೆರೆ : – ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೊರಟಗೆರೆ-ಮಧುಗಿರಿ ರಾಜ್ಯ ಹೆದ್ದಾರಿಯ ಕಂಬದಹಳ್ಳಿ ಸಮೀಪದ ನರಸೇಗೌಡರ ಕೋಳಿ ಫಾರಂ ಬಳಿ ನಡೆದಿದೆ.
ಮೃತರನ್ನು ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ದಾಸೇನಹಳ್ಳಿ ಗ್ರಾಮದ ನಿವಾಸಿ ಲೇಟ್ ಗುರುಮೂರ್ತಿ ಅವರ ಪುತ್ರ ಸಿದ್ದೇಶ್ (24) ಎಂದು ಗುರುತಿಸಲಾಗಿದೆ.
ಲಭ್ಯವಾದ ಮಾಹಿತಿಯಂತೆ, ದ್ವಿಚಕ್ರ ವಾಹನ ಸವಾರ ಸಿದ್ದೇಶ್ ಅವರು ಓವರ್ಟೇಕ್ ಮಾಡಲು ಮುಂದಾದ ವೇಳೆ ಲಾರಿಗೆ ಸಿಲುಕಿದ್ದು, ಪರಿಣಾಮವಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ
