ಕೊರಟಗೆರೆ:- ಕರ್ನಾಟಕ ಸರ್ಕಾರದದಲ್ಲಿ ಎರಡನೇ ಬಾರಿಗೆ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ರವರಿಗೆ ಕೊರಟಗೆರೆ ಕ್ಷೇತ್ರದ ಸಮಸ್ತ ಮತಭಾಂದವರಿಂದ ಬೃಹತ್ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೊಡ್ಲಹಳ್ಳಿ ಅಶ್ವಥನಾರಾಯಣ ತಿಳಿಸಿದರು.
ಅವರು ಪಟ್ಟಣದ ರಾಜೀವಭವನದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಅಭಿಮಾನಿಗಳಿಂದ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜೂನ್ 14 ರ ನಾ ಳೆ ಭಾನುವಾರದಂದು ಬೆಳ್ಳಿಗೆ 10 ಗಂಟೆಗೆ ಕೊರಟಗೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕ್ಷೇತ್ರ ಶಾಸಕರಾದ ಡಾ.ಜಿ.ಪರಮೇಶ್ವರರವರು ಎರಡೇ ಬಾರಿಗೆ ಉಪಮುಖ್ಯಮಂತ್ರಿಗಳಾಗಿ ರಾಜ್ಯದ ಅಧಿಕಾರ ವಹಿಸಿಕೊಂಡ ಹಿನ್ನಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು ವಿವಿಧ ಘಟಕಗಳಿಂದ, ತಾಲ್ಲೂಕಿನ ವಿವಿಧ ಸಂಘಟನೆಗಳಿಂದ, ಅಭಿಮಾನಿಗಳಿಂದ ಮತ್ತು ಮತದಾರರಿಂದ ಬೃಹತ್ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದು ಎಲ್ಲಾ ಮತಬಾಂಧವರು ಹಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕೆರೆ ಶಂಕರ್ ಮಾತನಾಡಿ ಭಾನುವಾರದಂದು ಬೆಳ್ಳಿಗೆ ನಮ್ಮ ಕ್ಷೇತ್ರದ ಹೆಮ್ಮೆಯ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ರವರನ್ನು ಸಮಾರಂಭಕ್ಕೆ ಮುಂಚಿತವಾಗಿ ಹೋವಿನ ರಥದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಟಾಂಡ್ನಿಂದ ಪದವಿ ಪೂರ್ವ ಕಾಲೇಜು ಮೈದಾನದವರೆಗೆ ವಿವಿಧ ಜಾನಪದ ತಂಡಗಳು, ಕುಂಭ ಕಳಶಗಳು, ಸಿಡಿ ಮದ್ದಿಗಳಿಂದ ಸಾವಿರಾರು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮತದಾರರಿಂದ ಬೃಹತ್ ಮೆರವಣಿಗೆಯನ್ನು ನಡೆಸಲಾಗುವುದು ಎಂದರು.
ಕೆ.ಪಿ.ಸಿ.ಸಿ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ ಡಾ.ಜಿ.ಪರಮೇಶ್ವರ ರವರು ಕೊರಟಗೆರೆ ಕ್ಷೇತಕ್ಕೆ ಬಂದು ಶಾಸಕರಾದ ಮೇಲೆ 8 ವರ್ಷಗಳ ಅವಧಿ ಕೆ.ಪಿ.ಸಿ.ಸಿ ಅದ್ಯಕ್ಷರು, ಎರಡು ಭಾರಿ ಉಪಮಖ್ಯಮಂತ್ರಿಗಳು, 3 ಭಾರಿ ಗೃಹ ಸಚಿವರು ಹಾಗಿದ್ದು ಅದಕ್ಕಾಗಿ ಕೊರಟಗೆರೆ ಮತಬಾಂಧವರು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ ಆದರೆ ಅವರು ಮುಖ್ಯಮಂತ್ರಿ ಗಳಾಗಲಿಲ್ಲ ಎಂಬ ಕೊರಗು ಕೊರಟಗೆರೆ ಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧ ಅಭಿಮನಿಗಳಲ್ಲಿ ಇದೆ ಎಂದರು.
ಮುಖಂಡರಾದ ಮಹಾಲಿಂಗಪ್ಪ ಮಾತನಾಡಿ ಭಾನುವಾರ ಸಮಾರಂಭಕ್ಕೆ ಬರುವ ಸಮಸ್ತ ಮತಬಾಂಧವರಿಗೆ ಉಪಹಾರದ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ, ಎರಡನೇ ಬಾರಿಗೆ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ರವರನ್ನು ಕೊರಟಗೆರೆಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ನಮ್ಮ ಕ್ಷೇತ್ರದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.
ಗೋಷ್ಟಿಯಲ್ಲಿ ಮಹಿಳಾ ಅದ್ಯಕ್ಷೆ ಜಯಮ್ಮ, ಮುಖಂಡರುಗಳಾದ ವೆಂಕಟೇಶ್ಮೂರ್ತಿ, ಎಲ್.ರಾಜಣ್ಣ, ರುದ್ರಪ್ರಸಾದ್, ನರಸಮ್ಮ ನರಸಿಂಹಮೂರ್ತಿ, ಸೈಯದ್ಸೈಪುಲ್ಲಾ, ಟಿ.ಸಿ.ರಾಮಣ್ಣ, ಜಯರಾಮ್, ವಿನಯ್ಕುಮಾರ್, ಗಟ್ಲಹಳಿಕುಮಾರ್, ಮಕ್ತಿಯಾರ್, ಅರವಿಂದ್, ಲಕ್ಷಮ್ಮ, ಮಲ್ಲಣ್ಣ, ಹನುಮಂತರಾಜು, ಬೈರೇಶ್, ದೀಪಕ್, ರಘುವೀರ್, ಸೂಪಿಯಾನ್, ದೇವರಾಜು,(ಸಕ್ಕರೆ), ಸೋಮೇಶ್, ಭರತ್, ರವಿ, ರಮೇಶ್, ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
