ಬೆಂಗಳೂರು, ಜೂನ್ 18: ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಸುಮಧುರ ಗ್ರೂಪ್, ಉತ್ತರ ಬೆಂಗಳೂರಿನ ದೇವನಹಳ್ಳಿಯಲ್ಲಿ ತನ್ನ ಮಹತ್ವಾಕಾಂಕ್ಷೆಯ ‘ಸುಮಧುರ ಪನೋರಮಾ’ ಹಂತ-2 ವಿಲ್ಲಾ ಪ್ಲಾಟ್ ಯೋಜನೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಒಟ್ಟು 34 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿಗೊಳ್ಳಲಿರುವ ಈ ಯೋಜನೆಯಿಂದ ಸುಮಾರು ₹700 ಕೋಟಿ ಆದಾಯ ಗಳಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ದಕ್ಷಿಣ ಭಾರತೀಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಐಷಾರಾಮಿ ವಿಲ್ಲಾ ಪ್ಲಾಟ್ ಸಮುದಾಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಯೋಜನೆಯ ಮೊದಲ ಹಂತಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಎರಡನೇ ಹಂತವನ್ನು ಆರಂಭಿಸಲಾಗಿದ್ದು, ಉತ್ತರ ಬೆಂಗಳೂರಿನಲ್ಲಿ ಪ್ರೀಮಿಯಂ ಭೂಮಿಗೆ ಹೆಚ್ಚುತ್ತಿರುವ ಬೇಡಿಕೆಗೆ ಇದು ಸಾಕ್ಷಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ದೇವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ-44ರ ಸಮೀಪದಲ್ಲಿರುವ ಈ ಯೋಜನೆಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 10 ನಿಮಿಷಗಳ ದೂರದಲ್ಲಿದೆ. ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ಹಾಗೂ ಮುಂಬರುವ ನಮ್ಮ ಮೆಟ್ರೋ ಬ್ಲೂ ಲೈನ್ ಸಂಪರ್ಕವೂ ಯೋಜನೆಗೆ ಮತ್ತಷ್ಟು ಮೌಲ್ಯವನ್ನು ತಂದುಕೊಡಲಿದೆ.
ಇದರೊಂದಿಗೆ, ಕ್ವಿನ್ ಸಿಟಿ, ಕೆಐಎಡಿಬಿ ಏರೋಸ್ಪೇಸ್ ಪಾರ್ಕ್ ಮತ್ತು ದೇವನಹಳ್ಳಿ ಬಿಸಿನೆಸ್ ಪಾರ್ಕ್ನಂತಹ ಪ್ರಮುಖ ಉದ್ಯೋಗ ಕೇಂದ್ರಗಳು ಯೋಜನೆಗೆ ಸಮೀಪದಲ್ಲಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳೂ ಲಭ್ಯವಿವೆ. ಇದರಿಂದ ಹೂಡಿಕೆದಾರರು ಹಾಗೂ ಮನೆ ಖರೀದಿದಾರರಿಗೆ ಉತ್ತಮ ಅವಕಾಶ ಸಿಗಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.
ಯೋಜನೆಯ ಕುರಿತು ಮಾತನಾಡಿದ ಸುಮಧುರ ಗ್ರೂಪ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಧುಸೂದನ್ ಜಿ, “ಇಂದಿನ ಮನೆ ಖರೀದಿದಾರರು ಕೇವಲ ಭೂಮಿಯ ಮಾಲೀಕತ್ವವಲ್ಲ, ಉತ್ತಮ ಮೂಲಸೌಕರ್ಯ, ಆಧುನಿಕ ಸೌಲಭ್ಯಗಳು ಮತ್ತು ದೀರ್ಘಾವಧಿಯ ಮೌಲ್ಯವನ್ನು ನೀಡುವ ಸಮುದಾಯಗಳನ್ನು ಬಯಸುತ್ತಿದ್ದಾರೆ. ಉತ್ತರ ಬೆಂಗಳೂರು, ವಿಶೇಷವಾಗಿ ದೇವನಹಳ್ಳಿ ಪ್ರದೇಶವು ವೇಗವಾಗಿ ಬೆಳೆಯುತ್ತಿರುವ ಅಭಿವೃದ್ಧಿ ಕಾರಿಡಾರ್ ಆಗಿ ಹೊರಹೊಮ್ಮಿದೆ,” ಎಂದು ಹೇಳಿದರು.
“ಪನೋರಮಾ ಹಂತ-2 ಯೋಜನೆಯು ಮೊದಲ ಹಂತದ ಯಶಸ್ಸಿನ ಮುಂದುವರಿದ ಭಾಗವಾಗಿದ್ದು, ಸಾಂಸ್ಕೃತಿಕ ಅನನ್ಯತೆ ಮತ್ತು ಆಧುನಿಕ ಜೀವನಶೈಲಿಯನ್ನು ಒಗ್ಗೂಡಿಸುವ ನಮ್ಮ ಬದ್ಧತೆಯ ಪ್ರತೀಕವಾಗಿದೆ. ಭವಿಷ್ಯದ ಅಗತ್ಯಗಳಿಗೆ ಅನುಗುಣವಾದ ಹಾಗೂ ದೀರ್ಘಾವಧಿಯ ಮೌಲ್ಯ ಸೃಷ್ಟಿಸುವ ಯೋಜನೆಗಳ ಅಭಿವೃದ್ಧಿಗೆ ನಾವು ಆದ್ಯತೆ ನೀಡುತ್ತಿದ್ದೇವೆ,” ಎಂದು ಅವರು ತಿಳಿಸಿದರು.
ಯೋಜನೆಯಲ್ಲಿ 45,000 ಚದರ ಅಡಿ ವಿಸ್ತೀರ್ಣದ ಬೃಹತ್ ಕ್ಲಬ್ಹೌಸ್ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಪ್ರತಿಬಿಂಬಿಸುವ ವಿನ್ಯಾಸಗಳು ಈ ಯೋಜನೆಯ ವಿಶೇಷತೆಯಾಗಿದೆ.
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಸುಮಧುರ ಗ್ರೂಪ್ ಇದುವರೆಗೆ 56ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದ್ದು, 17 ಮಿಲಿಯನ್ ಚದರ ಅಡಿಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಪ್ರಸ್ತುತ 40 ಮಿಲಿಯನ್ ಚದರ ಅಡಿಗೂ ಹೆಚ್ಚಿನ ಯೋಜನೆಗಳು ವಿವಿಧ ಹಂತಗಳಲ್ಲಿ ಅಭಿವೃದ್ಧಿಯಲ್ಲಿವೆ.
