ವರದಿ. 1.
ರಾಮನಾಥಪುರ- ಧಾರ್ಮಿಕ ಚಿಂತನೆಯಿದ್ದಲ್ಲಿ ಮನಸ್ಸಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಧಾರ್ಮಿಕ ಅಚರಣೆಗಳು ದೇಶದಲ್ಲಿ ತಲೆತಲಾಂತರಗಳಿಂದ ನಡೆದು ಬರುತ್ತಿದೆ ನಾಡಿನ ಐಕ್ಯತೆಗೆ ಪೂರಕವಾಗಲಿದೆ. ಧಾರ್ಮಿಕ ಚಿಂತನೆಗಳ ಮೂಲಕ ಊರು ಅಭಿವೃದ್ದಿ ಹೊಂದುತ್ತದೆ. ಅದಕ್ಕೆ ಪೂರಕವಾದ ವಾತಾವರಣ ದೇವಾಲಯಗಳಲ್ಲಿ ಇರುತ್ತದೆ
ಎಂದು ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕರು ಕನಕಾಚಾರ್ಯರು ತಿಳಿಸಿದರು.
ರಾಮನಾಥಪುರದ ಶ್ರೀ ಉತ್ತರಾಧಿಮಠದಲ್ಲಿ ಇಂದು ಗುರುವಾರ ಶ್ರೀ ರಾಘವೇಂದ್ರಸ್ವಾಮಿಗಳವರ ವಿಶೇಷ ಪೂಜೆ ಮಹಾ ಮಂಗಳಾರತಿ ನಂತರ ಅಶಿರ್ವಚನ ನೀಡಿದ ಅವರು ಧಾರ್ಮಿಕ ಕಾರ್ಯಕ್ರಮಗಳು ಗ್ರಾಮೀಣ ಜನರ ಜೀವನಾಡಿ, ಧಾರ್ಮಿಕ ಕೇಂದ್ರಗಳು, ಅಥವಾ ದೇಗುಲಗಳು ತೆರೆದಂತೆಲ್ಲಾ ಧಾರ್ಮಿಕತೆ ಬೆಳೆಯುತ್ತ ಸಾಗುತ್ತಿದೆ. ಇಂತಹ ದೇಗುಲಗಳಿಗೆ ತೆರಳುವಾಗ ಹಣ್ಣು, ಕಾಯಿ, ಕೊಂಡೊಯ್ದು ದೇವರಿಗೆ ಪೂಜೆ ಸಲ್ಲಿಸುತ್ತೇವೆ. ಹಾಗೆಯೇ ಹಿಂದಿರುಗುವಾಗ ಅಲ್ಲಿ ಏನನ್ನಾದರೂ ಬಿಟ್ಟು ಬರುವುದು ನಮ್ಮ ಸಂಪ್ರದಾಯ. ಹಾಗಾಗಿ ದೇಗುಲದಲ್ಲಿ ಕೆಲಕಾಲ ಕುಳಿತು ಧ್ಯಾನಿಸಿ ಬಳಿಕ ಕೋಪ, ದೋಷ, ಅಹಂಕಾರ, ಹಾಗೂ ಕೆಟ್ಡ ಭಾವನೆಗಳನ್ನು ಅಲ್ಲಿಯೇ ಬಿಟ್ಟು ಬರುವುದನ್ನು ರೂಢಿಸಿಕೊಳ್ಳುವಣ. ದೇವಾಲಯ ಸ್ಥಾಪನೆಯಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಶ್ರೀಮಠದ ವ್ಯವಸ್ಥಾಪಕರು ಕನಕಾಚಾರ್ಯರು ಹೇಳಿದರು.
ವರದಿ. ಎಂ.ಎನ್. ಕುಮಾರಸ್ವಾಮಿ. ರಾಮನಾಥಪುರ
