ಆಲೂರು: ತಾಲೂಕಿನ ಕಾಮತಿ ಗ್ರಾಮದ ಕಾಫಿ ತೋಟವೊಂದರಲ್ಲಿ ಮೆಣಸು ಕುಯ್ಯಲೆಂದು ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ಸ್ಥಳದಲ್ಲಿಯೆ ಮೃ*ತಪಟ್ಟ ಘಟನೆ ಸೋಮವಾರ ನಡೆದಿದೆ.
ಆಲೂರು ತಾಲೂಕಿನ ವಾಟೆಹೊಳೆ ಸಮೀಪದ ಹರಿಹರಪುರ ಗ್ರಾಮದ ಲಕ್ಷ್ಮಣ್ (50) ಮೃತ ದುರ್ದೈವಿಯಾಗಿದ್ದಾರೆ ಸೋಮವಾರ ಬೆಳಗ್ಗೆ ಕೂಲಿ ಕೆಲಸಕ್ಕೆಂದು ತಾಲೂಕಿನ ಕಾಮತಿ ಸಮೀಪದ ಹುಣಸೆ ಗ್ರಾಮದ ಶಿವಣ್ಣ ಎಂಬುವರ ಕಾಫಿ ತೋಟದ ಕೆಲಸಕ್ಕೆ ತೆರಳಿದ್ದರು. ಮರ ಹತ್ತಿ ಮೆಣಸು ಕುಯ್ಯುವಾಗ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೆ ಮೃ*ತಪಟ್ಟಿದ್ದಾರೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳು ಒಬ್ಬ ಪತ್ನಿ ಹೊಂದಿದ್ದರು.
ಈ ಘಟನೆ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
