ಅಧ್ಯಾಯ-1
ಶ್ಲೋಕ – 23
ಯೋತ್ಸ್ಯಮಾನಾನವೇಕ್ಷೇಹಂ ಯ ಏತೇತ್ರ ಸಮಾಗತಾಃ ।
ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ ॥೨೩॥
ಧಾರ್ತರಾಷ್ಟ್ರಸ್ಯ ದುರ್ಬುದ್ಧೇರ್ಯುದ್ಧೇ ಪ್ರಿಯಚಿಕೀರ್ಷವಃ ॥೨೩॥
ಇಲ್ಲಿ ನೆರೆದ- ಈ ಕಾದ ಹೊರಟವರನ್ನು, ಬುದ್ಧಿಗೇಡಿಯಾದ ದುರ್ಯೋಧನನ ಹಿತವನ್ನು ಬಯಸಿ ಯುದ್ಧದಲ್ಲಿ ಆತನಿಗೆ ಹೆಗಲು ಕೊಡ ಬಯಸಿದವರನ್ನು, ನಾನೊಮ್ಮೆ ನೋಡುತ್ತೇನೆ ಎನ್ನುತ್ತಾನೆ ಅರ್ಜುನ.
“ಬುದ್ಧಿಗೇಡಿ ದುರ್ಯೋಧನನಿಗೆ ಜಯವಾಗಬೇಕು ಎಂದು ಬಯಸಿ, ನಮಗೆ ತೊಂದರೆ ಕೊಡಲು ನನ್ನ ವಿರುದ್ಧ ನಿಂತವರನೊಮ್ಮೆ ನಾನು ನೋಡಬೇಕು” ಎಂದು ಅರ್ಜುನ ಶ್ರೀಕೃಷ್ಣನಲ್ಲಿ ಆಜ್ಞಾರೂಪಿ ಸ್ವರದಲ್ಲಿ ಹೇಳುತ್ತಾನೆ. ಇಲ್ಲಿ ‘ಅಹಮ್‘ ಎಂದು ಸಂಬೋಧಿಸುತ್ತಿರುವ ಅರ್ಜುನ ಅಹಂಕಾರದ ದಾಸನಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.

[…] […]
[…] 1.ಭಗವದ್ಗೀತೆ – ದಿನಕ್ಕೊಂದು ಶ್ಲೋಕ-ಇದು ಭಕ್ತಿ ವೇದಾಂತ ಸಾರ-ಶ್ಲೋಕ – 23 https://vicharavisthara.com/bhagavad-gita-shloka-23/ […]