ತುಮಕೂರು:ವಕೀಲರ ಅಭ್ಯುದಯಕ್ಕಾಗಿ ಹಗಲು ರಾತ್ರಿ ದುಡಿಯುತ್ತೇನೆ,ವಕೀಲರು ಕಕ್ಷಿದಾರರ ಹಿತಕ್ಕೆ ತಮ್ಮ ಆರೋಗ್ಯವನ್ನು ಸಹ ಲೆಕ್ಕಿಸದೆ ಹಗಲು ರಾತ್ರಿ ದುಡಿಯುತ್ತಿದ್ದಾರೆ,ಆದ್ದರಿಂದ ವಕೀಲರ ಆರೋಗ್ಯಕ್ಕಾಗಿ ಆರೋಗ್ಯ ವಿಮೆ ಮಾಡಿಸಲು ಕಾರ್ಯಕ್ರಮ ರೂಪಿಸಲಾಗುವುದು,ವಕೀಲರ ಮರಣನಿಧಿಯನ್ನು ಈಗಿರುವ 8ಲಕ್ಷದಿಂದ ಹೆಚ್ಚಿನ ಹಣ ನೀಡಲು ಹೋರಾಟ ಮಾಡಲಾಗುವುದು,ವಕೀಲರ ಜ್ಞಾನ ಹೆಚ್ಚಿಸಿಕೊಳ್ಳಲು ಪ್ರತಿ ಬಾರ್ ನಲ್ಲಿ ವಿಶೇಷ ಕಾರ್ಯಾಗಾರವನ್ನು ಮಾಡಲು ಕಾರ್ಯಕ್ರಮ ರೂಪಿಸಲಾಗುವುದು,ಪ್ರತಿ ಬಾರ್ ನಲ್ಲಿ ಉತ್ತಮ ಗ್ರಂಥಾಲಯ,ಸ್ವಂತ ವಕೀಲರ ಭವನಗಳನ್ನು ನಿರ್ಮಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ರಾಜ್ಯ ವಕೀಲರ ಪರಿಷತ್ತಿಗೆ ಅತಿ ಹೆಚ್ಚು ಮತಗಳಿಂದ ಗೆದ್ದು ಚುನಾಯಿತರಾದ ಸದಸ್ಯ ಜಿ.ನಾರಾಯಣಸ್ವಾಮಿರವರು ತಿಳಿಸಿದರು.

ಅವರನ್ನು ನಗರದ ನ್ಯಾಯಾಲಯ ಆವರಣದ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ ಮತ್ತು ಪದಾಧಿಕಾರಿಗಳು ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿ ಶುಭಕೋರಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯನವರು ಮಾತನಾಡುತ್ತಾ ಜಿ.ನಾರಾಯಣಸ್ವಾಮಿರವರು ಈಗಾಗಲೇ ನಮ್ಮ ನ್ಯಾಯಾಲಯದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಗಣೇಶ ದೇವಾಲಯಕ್ಕೆ 1ಲಕ್ಷ ದೇಣಿಗೆ ನೀಡಿದ್ದು ಪ್ರತಿ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಒಂದು ದಿನ ಗಣೇಶ ಪೂಜೆಗೆ ತಗಲುವ ಖರ್ಚು-ವೆಚ್ಚವನ್ನು ನೀಡಲಾಗುವುದು ಎಂದು ತಿಳಿಸಿರುವುದು ನಮಗೆ ಸಂತೋಷ ತಂದಿದೆ,ಹಾಗೆಯೇ ವಕೀಲರ ಕಷ್ಟ-ಸುಖಗಳಿಗೆ ತಾವು ಸ್ಪಂದಿಸುವುದು ತಮ್ಮ ಕರ್ತವ್ಯ,ಜಿಲ್ಲಾ ವಕೀಲರ ಸಂಘದ ಸಹಕಾರ ತಮ್ಮ ಜೊತೆ ಇರುತ್ತದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಪ್ರಧಾನಕಾರ್ಯದರ್ಶಿ ಹಿರೇಹಳ್ಳಿಮಹೇಶ್, ಜಂಟಿ ಕಾರ್ಯದರ್ಶಿ ಧನಂಜಯ, ಖಜಾಂಚಿ ಶ್ರೀಮತಿಸಿಂಧು, ವಕೀಲರಾದ ಹೆಚ್.ಜಿ.ರಘು, ಬಿ.ಜೆ.ಮಹಾವೀರ್,ಟಿ.ಎನ್. ಗುರುರಾಜ್, ಬೆಂಗಳೂರು ವಕೀಲರ ಸಂಘದ ಜಂಟಿ ಕಾರ್ಯದರ್ಶಿ ರಾಕೇಶ್, ಜಯಕರ್ನಾಟಕ ಸಂಘಟನೆರಾಜ್ಯ ಸಂಘಟನಾ ಕಾರ್ಯದರ್ಶಿ ಸುಧೀರ್, ಜಿಲ್ಲಾಧ್ಯಕ್ಷ ಅನಿಲ್ ನಾಯಕ್, ನಗರ ಜೆಡಿಎಸ್ ಯುವಘಟಕ ಅಧ್ಯಕ್ಷ ಪ್ರಮೋದ್ಗೌಡ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
