ಕೊರಟಗೆರೆ.ತಾಲ್ಲೂಕಿನ ಕೋಳಾಲ ಕ್ಷೇತ್ರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಕ್ಷೇತ್ರ ಜನರ ನೆಚ್ಚಿನ ನಾಯಕ ಬಡವರ ಕಷ್ಟಗಳಿಗೆ ಸ್ಪಂದಿಸುವ ಆಪತ್ಬಾಂಧವ ಯುವ ಪೀಳಿಗೆಯ ಜನನಾಯಕ ಪಿಎನ್ ಕೃಷ್ಣಮೂರ್ತಿ ರವರು ಶಿಕ್ಷಣ ಮತ್ತು ಸಮಾಜಸೇವೆಗೆ ಮತ್ತೊಂದು ಹೆಜ್ಜೆ ಇಟ್ಟಿರುವ ಪಿ.ಎನ್. ಕೃಷ್ಣಮೂರ್ತಿ. ಪಿ.ಎನ್.ಕೆ ಅವರು ತಾಲ್ಲೂಕಿನ ಕೋಳಾಲ ಹೋಬಳಿಯ ಮಾವತ್ತೂರು ಗ್ರಾಮದ ವಿಶ್ವಭಾರತಿ ಅನುದಾನಿತ ಪ್ರೌಢಶಾಲೆಯನ್ನು ದತ್ತು ಪಡೆದು 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.
ಕೊರಟಗೆರೆ ಪಿ.ಎನ್.ಕೆ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಟ್ರ್ಯಾಕ್ಸೂಟ್, ಸಮವಸ್ತ್ರ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಶೈಕ್ಷಣಿಕ ಸಮಾಜಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ, “ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಬಡವರ ಪರವಾಗಿ ಜನಸೇವೆ ಮಾಡಿದ್ದೇನೆ. 20 ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ಕುಟುಂಬದ ಸದಸ್ಯರಂತೆ ಒಡನಾಟ ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ತಾಲೂಕಿನ 80 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 1750ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಟ್ರ್ಯಾಕ್ಸೂಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದರು.
ಅವರು “ತಾಲ್ಲೂಕಿನ ಆರು ಹೋಬಳಿ ಕೇಂದ್ರಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಸಿದ್ದರಬೆಟ್ಟ ಶ್ರೀಕ್ಷೇತ್ರದಲ್ಲಿ ಕಲ್ಯಾಣ ಮಂಟಪ ನಿರ್ಮಿಸುವ ಕನಸಿದೆ ಶ್ರಾವಣ ಮಾಸದಲ್ಲಿ ಕೆಲಸ ಪ್ರಾರಂಭಿಸುವುದಾಗಿ ಶ್ರೀಗಳ ಸಮ್ಮುಖದಲ್ಲಿ ತಿಳಿಸಿದರು .


ಸಿದ್ದರಬೆಟ್ಟ ಮತ್ತು ಎಲೆರಾಂಪುರ ಕೊರಟಗೆರೆ ಕ್ಷೇತ್ರದ ಎರಡು ಕಣ್ಣುಗಳಿದ್ದಂತೆ. ಇಲ್ಲಿ ಜಾತಿ-ಬೇಧವಿಲ್ಲದ ಸಹೋದರತ್ವವಿದೆ” ಎಂದು ಹೇಳಿದರು.
ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅವರು, “2028ರಲ್ಲಿ ಕ್ಷೇತ್ರ ವಿಂಗಡಣೆ ನಡೆದರೆ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸುವ ಮನಸ್ಸಿದೆ” ಎಂದು ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾವತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ : ಪಿ.ಎನ್. ಕೃಷ್ಣಮೂರ್ತಿ ಅವರು ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.
ಈ ವೇಳೆ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ, ಶಿಸ್ತು ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿ ಬಳಗದ ಮಾಜಿ ಅಧ್ಯಕ್ಷ ಪರಮೇಶ್ ಮಾತನಾಡಿ :
“ಬಾಲ್ಯದ ಜೀವನ ಮತ್ತೊಮ್ಮೆ ಸಿಗುವುದಿಲ್ಲ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಂಸ್ಕಾರಕ್ಕೂ ಮಹತ್ವ ನೀಡಬೇಕು” ಎಂದು ಕಿವಿಮಾತು ಹೇಳಿದರು.
ಒಟ್ಟಾರೆ, ಶಿಕ್ಷಣ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗುವ ಸಂಕಲ್ಪದೊಂದಿಗೆ ಪಿಎನ್ಕೆ ಅಭಿಮಾನಿ ಬಳಗ ಕೈಗೊಂಡಿರುವ ಈ ಯೋಜನೆ ತುಂಬಾ ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು…
ಕಾರ್ಯಕ್ರಮದಲ್ಲಿ ಆರ್ ಎಸ್ ರಾಜಣ್ಣ, ಪರಮೇಶ್, ಮಾಜಿ ಗ್ರಾ .ಪಂ. ಅಧ್ಯಕ್ಷರು ಮಾವತೂರು ಮಂಜು. ಸದಸ್ಯರುಗಳಾದ. ಕುಮಾರ ನವೀನ್ . ಮಹಾಲಿಂಗಯ್ಯ
.ಗಿರೀಶ್.ವಜ್ಜನಕುರಿಕೆ ರಂಗನಾಥ್, ಹಾಗೂ ನರಸಿಂಹರಾಜು ಎಲ್ ಕೊರಟಗೆರೆ ಪಿ. ಎನ್. ಕೆ ಅಭಿಮಾನಿ ಬಳಗದ ಸದಸ್ಯರುಗಳು ಸೇರಿದಂತೆ ಶಾಲೆ ಶಿಕ್ಷಕರು ಮಕ್ಕಳು ಪೋಷಕರು ಹಾಗೂ ಅನೇಕ ರಾಜಕೀಯ ಮುಖಂಡರು ಉಪಸ್ಥಿತರಿದ್ದು.
-ವರದಿ ನರಸಿಂಹಯ್ಯ ಹೊಸಕೋಟೆ
