ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದೇವೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ನಾಟನಹಳ್ಳಿ ಅನಿಲ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ ಬಯಸಿ ದೇವೇಗೌಡರು ಹೊರತುಪಡಿಸಿ ಉಳಿದ ನಿರ್ದೇಶಕರು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಕಾರ್ಯನಿರ್ವಹಿಸಿದ ಸಂಘದ ಕಾರ್ಯದರ್ಶಿ ಸತೀಶ್ ಘೋಷಿಸಿದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಎನ್ ಕುಮಾರ್ ಅವರು ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಅಧ್ಯಕ್ಷ ಸ್ಥಾನವನ್ನು ಈ ಬಾರಿ ನಮ್ಮ ನಾಯಕರಾದ ಶಾಸಕ ಎಚ್.ಟಿ. ಮಂಜು ಅವರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ನಮ್ಮ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ದೇವೇಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇದು ನಮ್ಮ ಕಾರ್ಯಕರ್ತರ ಶ್ರಮ ಮತ್ತು ನಾಯಕರ ಮಾರ್ಗದರ್ಶನಕ್ಕೆ ಸಿಕ್ಕ ಗೆಲುವು. ನೂತನ ಅಧ್ಯಕ್ಷರಾದ ದೇವೇಗೌಡರು ತಮ್ಮ ಆಡಳಿತ ಅವಧಿಯಲ್ಲಿ ಸಂಘದ ಅಭಿವೃದ್ಧಿ, ರೈತರ ಸಮಸ್ಯೆಗಳ ಪರಿಹಾರ ಹಾಗೂ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ದೇವೇಗೌಡ ಅವರು,ನನ್ನ ಅವಿರೋಧ ಆಯ್ಕೆಗೆ ಮಾರ್ಗದರ್ಶನ ನೀಡಿದ ನಮ್ಮ ನಾಯಕರಾದ ಶಾಸಕ ಎಚ್.ಟಿ. ಮಂಜು, ತಾ.ಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಗ್ರಾ.ಪಂ ಸದಸ್ಯ ಬಿ.ಎನ್ ಕುಮಾರ್, ಹಿರಿಯ ಮುಖಂಡ ಲಕ್ಷ್ಮೇಗೌಡರ ಮಾರ್ಗದರ್ಶನ ಹಾಗೂ ಎಲ್ಲಾ ನಿರ್ದೇಶಕರ ಸಹಕಾರಕ್ಕೆ ನಾನು ಸದಾ ಋಣಿಯಾಗಿರುತ್ತೇನೆ. ನನಗೆ ಅವಕಾಶ ನೀಡಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು. ನನ್ನ ಆಡಳಿತದಲ್ಲಿ ರೈತ ಸ್ನೇಹಿ ಆಡಳಿತ ಮಂಡಳಿ ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ರೈತರಿಗೆ ಸಾಲ, ರಸಗೊಬ್ಬರ ವಿತರಣೆ ಹಾಗೂ ಸಂಘದ ಎಲ್ಲಾ ಸೌಲಭ್ಯಗಳನ್ನು ಪಾರದರ್ಶಕವಾಗಿ ತಲುಪಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ. ಸಂಘದ ಅಭಿವೃದ್ಧಿಗಾಗಿ ಎಲ್ಲರ ಸಹಕಾರ ಬೇಕು ಎಂದು ಭರವಸೆ ನೀಡಿದರು.
ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾದ ಕೂಡಲೇ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಬಿ.ಆರ್ ಕೃಷ್ಣೇಗೌಡ, ಅಕ್ಕಿಹೆಬ್ಬಾಳು ಹೋಬಳಿ ಜೆಡಿಎಸ್ ಅಧ್ಯಕ್ಷ ಬಸವಲಿಂಗಪ್ಪ,ಹಿರಿಯ ಮುಖಂಡ ಲಕ್ಷ್ಮೇಗೌಡ ,ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಎನ್ ಕುಮಾರ್,ಸೊಸೈಟಿ ನಿರ್ದೇಶಕರಾದ ಜಗದೀಶ್,ಬಿ ಎಲ್,ನಟೇಶ್,ಬಿ.ಎಸ್ ಕುಮಾರ್,ಜಯಮ್ಮ ಚಂದ್ರೆಗೌಡ, ಕುಮಾರ್,ಅಶ್ವಿನಿ ಕುಮಾರ್, ಸೊಸೈಟಿ ಮಾಜಿ ಅಧ್ಯಕ್ಷ ಹರೀಶ್, ವೆಂಕಟೇಶಗೌಡ,ಬಿ.ಟಿ ಕುಮಾರ್, ಚಲುವರಾಜು,ಅಣ್ಣೇಗೌಡ, ರಾಮೇಗೌಡ,ಸತೀಶ್, ಪಾಪಣ್ಣ, ಹಿರೇಗೌಡ, ವಿರೂಪಾಕ್ಷ, ಬಿ.ಎನ್ ಪರಶುರಾಮ, ಲೋಹಿತ್, ಜಯಪ್ರಕಾಶ್, ಸುನಿಲ್, ಡೈರಿ ಅಧ್ಯಕ್ಷ ಬಿ.ಎಲ್ ನಾಗೇಂದ್ರ,ಡೈರಿ ಉಪಾಧ್ಯಕ್ಷ ಮಾದೇವಪ್ಪ, ಬಿ.ಎಸ್ ಮಹೇಶ್, ನಂದಿಪುರ ನರೇಂದ್ರ ಬಾಬು,ಬಿ.ಸಿ ದಿನೇಶ್, ಮರಿಲಿಂಗ, ಧನಂಜಯ್ ,ರುದ್ರೇಶ್, ಬಾಂಬೆ ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
