ತುಮಕೂರು: ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಅಗಲಕೋಟೆ ತುಮಕೂರು ಇವರ ಸಹಕಾರದೊಂದಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ತುಮಕೂರು 1 ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಅವರು ದೀಪ ಬೆಳಗಿಸಿ ಮಾತನಾಡಿದ ಅವರು ಯೋಜನೆ ನಡೆದು ಬಂದ ಹಾದಿ, ಚತುರ್ದಾನಗಳಿಗೆ ಪೂರಕವಾಗಿ ಸಂಸ್ಥೆ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಹೊಳಕಲ್ಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಂಜಿನಪ್ಪ ಅವರು ಸರ್ಕಾರ ಮಾಡದೇ ಇರುವಂತಹ ಎಷ್ಟೋ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತ ಬಂದಿದೆ ಬಡವರ ಬದುಕಿಗೆ ಬುನಾದಿಯಾಗಿದೆ ಎಂದು ಆರೋಗ್ಯ ಶಿಬಿರ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ತಾಲೂಕಿನ ಮಾನ್ಯ ಯೋಜನಾಧಿಕಾರಿ ಪ್ರಭಾಕರ್ರಾಮ್ ನಾಯಕ್, ರೈತ ಮೋರ್ಚಾ ಅಧ್ಯಕ್ಷರಾದ ನಾಗಣ್ಣ, ಸಿದ್ದಾರ್ಥ ವೈದ್ಯಕೀಯ ಸಂಸ್ಥೆಯ ವೈದ್ಯರು, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಖಾ, ಹೊನ್ನುಡಿಕೆ ವಲಯದ ಮೇಲ್ವಿಚಾರಕರಾದ ಕು.ತನುಜಾ, ಹೊನ್ನುಡಿಕೆ ವಲಯದ ಸೇವಾಪ್ರತಿನಿಧಿಗಳಾದ ಶಾರದಾ, ಲಕ್ಷ್ಮೀದೇವಿ, ಜಗದಾಂಬ, ಹೇಮಾ, ಶಬೀನ, ಅನುಸೂಯ ಹಾಗೂ ಸಿದ್ದಾರ್ಥ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸದಸ್ಯರು ಬಿಪಿ, ಶುಗರ್, ಕಣ್ಣಿನ ತಪಾಸಣೆ, ಇಸಿಜಿ, ಕೀಲು-ಮೂಳೆ,ಕಣ್ಣು, ಹಲ್ಲು ಹಾಗೂ ಸ್ತ್ರೀ ರೋಗಕ್ಕೆ ಸಂಬಂಧಪಟ್ಟ ತಪಾಸಣೆ ಮಾಡಿಸಿ ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದರು.
– ಕೆ.ಬಿ.ಚಂದ್ರಚೂಡ
