ಕೊರಟಗೆರೆ :- ಮದಚಾರಿ ವ್ಯಕ್ತಿಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಫಲಕರಿಯಾಗದೆ ಕೊನೆ ಉಸಿರೇಳದಿರುವ ಘಟನೆ ಜರುಗಿದೆ.
ಕೊರಟಗೆರೆ ತಾಲೂಕಿನ ತೀತಾ ಜಲಾಶಯದ ಗೊರವನಹಳ್ಳಿ -ತೀತಾ ನಡುವಿನ ಸೇತುವೆ ಬಳಿ ಈ ದುರ್ಘಟನೆ ಜರುಗಿದ್ದು, ತೀತಾದ ಲೇಟ್ ನಾರಾಯಣಪ್ಪನವರ ಮಗ ನರೇಂದ್ರಬಾಬು (51 ವರ್ಷ) ಸಾವಿಗೀಡಾದ ದುರ್ದೈವಿಯಾಗಿದ್ದಾನೆ,
ಮೃತ ನರೇಂದ್ರಬಾಬು ಸಂಜೆ 7:30ರ ಸಂದರ್ಭದಲ್ಲಿ ಗೊರವನಹಳ್ಳಿ ಮಾರ್ಗದ ಕಡೆಯಿಂದ ಸ್ವಗ್ರಾಮ ತೀತಾಗೆ ಕಾಲ್ನಡಿಗೆಯಲ್ಲಿ ಬರುತ್ತಿರುವಾಗ ಯಾವುದೋ ಅಪರಿಚಿತ ಎಲೆಕ್ಟ್ರಿಕ್ ದ್ವಿಚಕ್ರವಾಹನ ಹಿಂಬದಿಯಿಂದ ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ನರೇಂದ್ರಬಾಬು ಸೇತುವೆಯ ಸೀಮಂಟಿನ ದಿಂಡಿಗೆ ತಲೆ ಒಡೆದುಕೊಂಡು ತಲೆಗೆ ತೀವ್ರ ಪೆಟ್ಟಾಗಿ ರಕ್ತಶ್ರಾವತಿಯಿಂದ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಕೊನೆ ಉಸಿರುಳಿದಿದ್ದಾನೆ ಎನ್ನಲಾಗಿದೆ,
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿ ಪಿ ಐ ಪುರುಷೋತ್ತಮ್ ಹಾಗೂ ಪಿಎಸ್ಐ ಅಭಿಷೇಕ್ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
