ಕೆ.ಆರ್.ಪೇಟೆ,ಜು.21: ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಐಪನಹಳ್ಳಿ ಬಿ.ನಾಗೇಂದ್ರಕುಮಾರ್ ಅವರು ತಮ್ಮ 52ನೇ ಹುಟ್ಟು ಹಬ್ಬದ ಅಂಗವಾಗಿ ಮಾತೃಭೂಮಿ ಅನಾಥಾಶ್ರಮದಲ್ಲಿ ಅನಾಥರು ಹಾಗೂ ವಯೋವೃದ್ದರಿಗೆ ಊಟದ ವ್ಯವಸ್ಥೆ ಮಾಡಿ ಸಹಪಂಕ್ತಿ ಬೋಜನ ಸೇವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಈ ವೇಳೆ ಅನಾಥಾಶ್ರಮದ ಮುಖ್ಯಸ್ಥ ಜೈಹಿಂದ್ ನಾಗಣ್ಣ ಅವರು ನಾಗೇಂದ್ರಕುಮಾರ್ ಅವರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಮಾತನಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್ ಅವರು ಕಳೆದ ಹಲವು ವರ್ಷಗಳಿಂದಲೂ ನಮ್ಮ ಅನಾಥಾಶ್ರಮದಲ್ಲಿ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸುಮಾರು 90ಮಂದಿ ಅನಾಥರಿಗೆ ಒಂದು ದಿನದ ಪೂರ್ಣ ಊಟದ ವ್ಯವಸ್ಥೆ ಮಾಡುವ ಜೊತೆಗೆ ತಾವೂ ಸಹ ಅನಾಥರೊಂದಿಗೆ ಕುಳಿತು ಸಹಪಂಕ್ತಿ ಭೋಜನ ಸೇವಿಸುವ ಮೂಲಕ ತಮ್ಮ ಸರಳತೆ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಆದರೆ ಈ ಭಾರಿ ಅವರು ಕೇವಲ ಕಾಂಗ್ರೆಸ್ ಅಧ್ಯಕ್ಷರಾಗಿ ಬಾರದೇ, ಕರ್ನಾಟಕ ಸರ್ಕಾರದ ಸಚಿವ ಸ್ಥಾನಮಾನ ಹೊಂದಿರುವ ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೂ ಸಹ ಯಾವುದೇ ಹಮ್ಮುಬಿಮ್ಮು ಇಲ್ಲದೇ ತಮ್ಮ ಸರಳತೆಯಿಂದಲೇ ಅನಾಥಾಶ್ರಮಕ್ಕೆ ಬಂದು ಸ್ವತಃ ತಾವೇ ಎಲ್ಲಾ ಅನಾಥರು ಹಾಗೂ ವಯೋವೃದ್ದರಿಗೂ ಊಟ ಬಡಿಸುವ ಮೂಲಕ ಅವರಿಗೆ ಆಶೀರ್ವಾದ ಪಡೆದುಕೊಂಡರು. ಅಲ್ಲದೇ ಅನಾಥರೊಂದಿಗೆ ಊಟ ಸೇವಿಸಿ ಎಂದಿನಂತೆ ತಮ್ಮ ಸರಳತೆ ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಅನಾಥಾಶ್ರಮದ ಮುಖ್ಯಸ್ಥ ನಾಗಣ್ಣ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
