ಕೊರಟಗೆರೆ- ಕೊರಟಗೆರೆ ಹಲವು ಗ್ರಾಮಗಳಲ್ಲಿ ಕೇಂದ್ರ ಸರ್ಕಾರದ ದಿಶಾ ಕಮಿಟಿ ಸದಸ್ಯರಿಂದ ಕೇಂದ್ರ ಸರ್ಕಾರದ ಅನುಧಾನ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ದಿಶಾ ಕಮಿಟಿಯ ಸದಸ್ಯರಾದ ಮಾಜಿ ಜಿ.ಪಂ.ಅದ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ಬಿಜೆಪಿ ಮಾಜಿ ಅದ್ಯಕ್ಷ ಶಿವಪ್ರಸಾದ್, ತಿಪಟೂರು ಶಂಕರಪ್ಪ, ನಾಗರಾಜು ರವರುಗಳು ಅಧಿಕಾರಿಗಳ ತಂಡದೊಂದಿಗೆ ತಾಲ್ಲೂಕಿನ ತುಂಬಾಡಿ, ಟಿ.ಗೊಲ್ಲಹಳ್ಳಿ, ಮುಗೊಂಡನಹಳ್ಳಿಗಳಿಗೆ ಭೇಟಿ ರೈತರು ಮತ್ತು ಸಾರ್ವಜನಿಕರನ್ನು ಸಂಪರ್ಕಿಸಿ ಜಿ ರಾಮ್ ಜಿ, ಮನ್ರೇಗಾ ಕಾಮಗಾರಿಗಳ ಪಾರದರ್ಶಕತೆ ಗುಣಮಟ್ಟದ ಬಗ್ಗೆ ವಿವರ ಪಡೆದು ಪರಿಶೀಲಿಸಿದರು, ಈ ಸಂದರ್ಭದಲ್ಲಿ ಕಮಿ ಟಿ ಸದಸ್ಯರಾದ ವೈ.ಹೆಚ್.ಹುಚ್ಚಯ್ಯ ಮಾತನಾಡಿ ಕೇಂದ್ರ ಸರ್ಕಾರವು ಈ ಯೊಜನೆಗಳಿಗೆ ಹಣ ನೀಡುತ್ತಿದೆ ಅದೇ ರೀತಿ ರಾಜ್ಯ ಸರ್ಕಾರವು ಹಣ ನೀಡಿ ಕಾಮಗಾರಿಯನ್ನು ಚುರುಕುಗೊಳಿಸಿ ಬರಗಾಲದ ಈ ದಿನಗಳಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಬೇಕು, ಜನರಿಗೆ ಉದ್ಯೋಗ ಕಲ್ಪಿಸಿ ಕೊಡಬೇಕು ಎಂದರು.

ಸದಸ್ಯ ಎಸ್.ಶಿವಪ್ರಸಾದ್ ಮಾತನಾಡಿ ಜೆಜೆಎಂ ಕಾಮಗಾರಿಗಳು ತ್ವರಿತವಾಗಿ ಪೂರ್ಣಗೊಳ್ಳಬೇಕು, ಗುತ್ತಿಗೆದಾರರ ಹಳೇ ಬಿಲ್ಲುಗಳನ್ನು ಪಾವತಿಸಬೇಕು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದ್ದಿದ್ದಲ್ಲಿ ಹಳ್ಳಿಗಳಲ್ಲಿ ಈಗ ತಲೆದೋರುತ್ತಿರುವ ಸಮಸ್ಯೆ ಮತಷ್ಟು ಉಲ್ಬಣಗೊಳ್ಳಲಿದೆ, ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಪ್ರವಾಸಕೈಗೊಂಡು ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಶೀಲನೆ ಮಾಡಲಾಗುವುದು ಮತ್ತು ಕೆಂದ್ರಸರ್ಕಾರದ ಯೊಜನೆಗಳು ಜನರಿಗೆ ತಲುಪಬೇಕು ಎನ್ನುವ ಉದ್ದೇಶ ಸಮಿತಿ ಉದ್ದೇಶವಾಗಿದೆ ಮತ್ತು ಕೇಂದ್ರದ ಮಾನ್ಯ ರೈಲ್ವೇ ಸಚಿವರಾದ ವಿ.ಸೋಮಣ್ಣ ಮತ್ತು ಸಂಸದ ಗೋವಿಂದ ಕಾರಜೋಳ ಅದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇ.ಓ ಅಪೂರ್ವ, ಸಮಾಜಕಲ್ಯಾಧಿಕಾರಿ ಯಮುನಾ, ಮಧುಸೂಧನ್, ತಾಲ್ಲೂಕು ಬಿ.ಜಿ.ಪಿ ಅದ್ಯಕ್ಷ ರುದ್ರೇಶ್, ಮಾಜಿ ಅದ್ಯಕ್ಷ ಪವನ್ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
