ನವದೆಹಲಿ: ಜಾಗತಿಕ ವಾಣಿಜ್ಯ ನೌಕಾಯಾನ ಕ್ಷೇತ್ರದಲ್ಲಿ (Merchant Navy) ಭಾರತ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ತಲುಪಿದೆ. ಜುಲೈ 28, 2026 ರ ವೇಳೆಗೆ ಒಟ್ಟು 3,11,936 ಭಾರತೀಯ ನಾವಿಕರು (Seafarers) ಅಂತರರಾಷ್ಟ್ರೀಯ ಹಡಗುಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಜಾಗತಿಕವಾಗಿ ನಾವಿಕರನ್ನು ಪೂರೈಸುವ ದೇಶಗಳ ಸಾಲಿನಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನ ಪಡೆದುಕೊಂಡಿದೆ.
ಬಿಮ್ಕೋ-ಐಸಿಎಸ್ (BIMCO-ICS) ನಾವಿಕರ ಕಾರ್ಯಪಡೆ ವರದಿ 2026ರ ಪ್ರಕಾರ, ಪ್ರಸ್ತುತ ವಿಶ್ವದ ಒಟ್ಟು ನೌಕಾಯಾನ ಸಿಬ್ಬಂದಿಯಲ್ಲಿ ಭಾರತೀಯರ ಪಾಲು 12.16% ಆಗಿದೆ. ಈ ಪಟ್ಟಿಯಲ್ಲಿ ಫಿಲಿಪೈನ್ಸ್ ದೇಶವು ಮೊದಲ ಸ್ಥಾನದಲ್ಲಿದೆ. 2015 ರಲ್ಲಿ ಶೇ. 5.2 ರಷ್ಟು ಶೇರ್ ಹೊಂದಿದ್ದ ಭಾರತವು ಕೇವಲ ಒಂದು ದಶಕದಲ್ಲಿ ವಿಶ್ವದ 2ನೇ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ.
📌 ಭಾರತೀಯ ನಾವಿಕರ ಪಡೆಯ ವೈಶಿಷ್ಟ್ಯಗಳು
-
ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ: ಭಾರತದಿಂದ ಒಟ್ಟು 1,40,718 ಹಡಗು ಅಧಿಕಾರಿಗಳು (Ship Officers – 13.41%) ಹಾಗೂ 1,71,218 ಕಾರ್ಯಾಚರಣಾ ಸಿಬ್ಬಂದಿ (Ratings – 11.29%) ಜಾಗತಿಕ ವಾಣಿಜ್ಯ ಹಡಗುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
-
ಮಿಷನ್ 20% (Mission 20%): ಜಾಗತಿಕ ನಾವಿಕರ ಪಡೆಯಲ್ಲಿ ಭಾರತದ ಪಾಲನ್ನು ಶೇ. 20ಕ್ಕೆ ಏರಿಸಲು ಕೇಂದ್ರ ಸರ್ಕಾರವು ‘ಮಿಷನ್ 20%’ ಎಂಬ ಬೃಹತ್ ಗುರಿಯನ್ನು ಹೊಂದಿದೆ.
-
ಮಹಿಳಾ ನಾವಿಕರ ಹೆಚ್ಚಳ: ಭಾರತೀಯ ಮಹಿಳಾ ನಾವಿಕರ ಸಂಖ್ಯೆ 2021 ರಲ್ಲಿ 1,600 ಇತ್ತು, ಆದರೆ 2025 ರ ವೇಳೆಗೆ ಈ ಸಂಖ್ಯೆ 7,000 ಕ್ಕೂ ಅಧಿಕಕ್ಕೆ ಜಿಗಿದಿದೆ.
ಚಿಂತಾಜನಕ ವಿಷಯ: 2025 ರಲ್ಲಿ ಜಾಗತಿಕವಾಗಿ ಹಡಗಿನ ಮಾಲೀಕರಿಂದ ಪರಿತ್ಯಜಿಸಲ್ಪಟ್ಟ (Abandonment) 6,223 ನಾವಿಕರಲ್ಲಿ 1,125 ಭಾರತೀಯರು ಸೇರಿದ್ದು, ಸತತ ಮೂರನೇ ವರ್ಷವೂ ಭಾರತೀಯ ನಾವಿಕರೇ ಈ ಸಮಸ್ಯೆಗೆ ಹೆಚ್ಚು ತೊಳಗಾಗಿದ್ದಾರೆ.
