ತುಮಕೂರು:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಭೀಮಸಂದ್ರ ವಲಯದ ಕೊತ್ತಿಹಳ್ಳಿ ಕಾರ್ಯಕ್ಷೇತ್ರದಲ್ಲಿ ವಿಜಯಲಕ್ಷ್ಮಿ ಜ್ಞಾನವಿಕಾಸ ಕೇಂದ್ರದಲ್ಲಿ ಸೃಜನಶೀಲ ಕಾರ್ಯಕ್ರಮ ದಡಿಯಲ್ಲಿ ಗಿಡ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ತಾಲೂಕಿನ ಯೋಜನಾಧಿಕಾರಿಗಳಾದ ಪಿ.ಬಿ.ಸಂದೇಶ ರವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಯೋಜನಾಧಿಕಾರಿಯವರು ಜ್ಞಾನವಿಕಾಸ ಕೇಂದ್ರದಲ್ಲಿ ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಕಾನೂನಾತ್ಮಕವಾಗಿ ಎಲ್ಲ ವಿಚಾರದಲ್ಲೂ ಕೂಡ ಮಹಿಳೆಯರು ಸಬಲಿಕರಣರಾಗಬೇಕು ಎಂದು ತಿಳಿಸಿದರು.
ಸೃಜನಶೀಲ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಕನಕಾಂಬರ ಗಿಡವನ್ನು ವಿತರಣೆ ಮಾಡಿ ಸದಸ್ಯರು ಆ ಗಿಡವನ್ನು ನೆಟ್ಟು ಅದರಿಂದ ಬರುವ ಆದಾಯದಿಂದ ಅವರು ಸ್ವಾವಲಂಬಿಯಾಗಿ ಜೀವನ ಮಾಡಬೇಕು ಎಂದು ತಿಳಿಸಿದ್ದರು ಯೋಜನೆಯಲ್ಲಿ ಇರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಈ ಸಂದರ್ಭ ಕೇಂದ್ರದ ಅಧ್ಯಕ್ಷರಾದ ನಾಗಲಕ್ಷ್ಮಿ ಹಾಗೂ ವಲಯದ ಮೇಲ್ವಿಚಾರಕರಾದ ಸಿದ್ದರಾಜು ಹಾಗೂ ಜ್ಞಾನವಿಕಾಸದ ಸಮನ್ವಯಾಧಿಕಾರಿ ಶ್ರೀಮತಿ ನೇತ್ರ ಸೇವಾಪ್ರತಿನಿಧಿ ಶ್ರೀಮತಿ ಮಂಜುಳಾ. ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
-ಕೆ.ಬಿ. ಚಂದ್ರಚೂಡ
