ತುಮಕೂರು: ನಗರದಲ್ಲಿ ಆರು ದಿನಗಳಿಂದ ನಡೆದ ಯೋನೆಕ್ಸ್-ಸನ್ರೈಸ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತು ಅಂಡರ್-13 ವಿಭಾಗಗಳ ಬ್ಯಾಡ್ಮಿಂಟನ್ ಪಂದ್ಯಾವಳಿ ಮುಕ್ತಾಯಗೊಂಡಿದ್ದು ಶನಿವಾರ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಿವಿಧ ವಿಭಾಗಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ಬಾಲಕರ ಅಂಡರ್-11 ವಿಭಾಗದ ಸಿಂಗಲ್ಸ್ನಲ್ಲಿ ರಿಯಾನ್ಸ್ ರಿಷಿಕ್ ಸಾಯಿ ಯಗಂಟಿ ಪ್ರಥಮ, ಲಿತಿನ್ ಪಿ ದ್ವಿತೀಯ ಸ್ಥಾನ ಪಡೆದರೆ, ಡಬಲ್ಸ್ನಲ್ಲಿ ಅಥರ್ವಾ ಸಾಹು ಹಾಗೂ ರೆಯಾನ್ಸ್ ರಿಷಿಕ್ ಪ್ರಥಮ ಸ್ಥಾನ ಗಳಿಸಿದರು. ಇದೇ ವಿಭಾಗದ ಬಾಲಕಿಯರ ಸಿಂಗಲ್ಸ್ನಲ್ಲಿ ಜ್ಯೋತ್ನಾ ವಿನೋದ್ ಪ್ರಥಮ, ಯುವಿಕ ತಮ್ಮಯ್ಯ ದ್ವಿತೀಯ ಸ್ಥಾನ ಪಡೆದರು. ಡಬಲ್ಸ್ನಲ್ಲಿ ಜ್ಯೋತ್ನಾ ವಿನೋದ್, ಕೃಷಾ ಸಿಂಗ್ದೇವ್ ಪ್ರಥಮ, ಆರುಶಿ ವೈನವಿ, ಸ್ವರ ಎಸ್. ಭಾರಧ್ವಜ್ ಗೆಲುವು ಪಡೆದರು.
ಬಾಲಕಿಯರ ಅಂಡರ್ 13ರಲ್ಲಿ ವಿಭಾಗದ ಸಿಂಗಲ್ಸ್ನಲ್ಲಿ ಸಿಹಿ ಆದರ್ಶ್ ಮೊದಲ, ಸಾನ್ವಿ ಪಿ.ಎನ್ ದ್ವಿತೀಯ ಸ್ಥಾನ ಹಾಗೂ ಡಬಲ್ಸ್ನಲ್ಲಿ ಶಾನ್ವಿ ಪಿ.ಎನ್, ಶಾಂಭವಿ ಶರ್ಮಾ ಪ್ರಥಮ, ಹೇಮಶ್ರೀ, ಸಿಹಿ ಆದರ್ಶ್ ದ್ವಿತೀಯ ಸ್ಥಾನ ಪಡೆದರು. ಬಾಲಕರ ಅಂಡರ್ 13 ವಿಭಾಗದ ಸಿಂಗಲ್ಸ್ನಲ್ಲಿ ವೈಭವ್ ರಾವ್ ನಂದಿಕೊಳ್ಳ ಮೊದಲ ಹಾಗೂ ಜ್ಞಾನ್ ರಿಷಿಕ್ ಬೊಲಿಗರ್ಲಾ ಎರಡನೇ ಸ್ಥಾನ ಗಳಿಸಿದರು. ಡಬಲ್ಸ್ನಲ್ಲಿ ಮಾನ್ವಿತ ಮಾಣಿಬೆಟ್ಟು, ಆದೇಶ್, ವೈಭವ್ ರಾವ್ ಮೊದಲ ಹಾಗೂ ಜ್ಞಾನ್ ರಿಷಿಕ್ ಬೋಳಿಗರ್ಲಾ, ಕೌಶಿಕ್ ಹಳೆಬೀಡು ದ್ವಿತೀಯ ಸ್ಥಾನ ಪಡೆದರು.
ಕೇಂದ್ರ ಸಚಿವ ವಿ. ಸೋಮಣ್ಣ ವಿಜೇತರಿಗೆ ಬಹುಮಾನ ವಿತರಿಸಿ, ದೇಶದ ಪ್ರಗತಿಗೆ, ಹಿರಿಮೆಗೆ ಕ್ರೀಡೆಯೂ ಪೂರಕವಾಗಿರಬೇಕು. ವಿಕಸಿತ ಭಾರತ 2047ರ ವೇಳೆಗೆ ಭಾರತದ ಕ್ರೀಡೆಗಳಉ ಉತ್ತುಂಗದಲ್ಲಿರಬೇಕು. ಅದಕ್ಕಾಗಿ ಈಗಿನಿಂದಲೇ ಯುವಕ್ರೀಡಾಪಟುಗಳು ಸಜ್ಜಾಗಬೇಕು. ಕ್ರೀಡಾಪ್ರತಿಭೆಗಳನ್ನು ಬೆಳಕಿಗೆ ತರಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗಬೇಕು. ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ತುಮಕೂರಿನಲ್ಲಿ ಪಂದ್ಯಾವಳಿ ಆಯೋಜಿಸಿದ್ದಕ್ಕೆ ಅಭಿನಂದನೆಗಳು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ, ರವಿಶಂಕರ್ ಹೆಬ್ಬಾಕ, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ. ಮುರಳಿಧರ್, ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷ ಪಿ.ಪ್ರವೀಣ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ. ಮುರಳಿಧರ್, ಸಂಯೋಜಕರಾದ ನಿಶಾಂತ್, ಗುರುಪ್ರಸಾದ್, ಮುಖಂಡರಾದ ಅಜಯ್ಕುಮಾರ್, ಊರುಕೆರೆ ಪುರುಷೋತ್ತಮ್, ಮಲ್ಲಸಂದ್ರ ಶಿವಣ್ಣ, ಬ್ಯಾಟರಂಗೇಗೌಡ, ಚಂದ್ರಶೇಖರಬಾಬು, ರುದ್ರೇಶ್, ಲಕ್ಷ್ಮೀನಾರಾಯಣ ಮೊದಲಾದವರು ಭಾಗವಹಿಸಿದ್ದರು. ನಗರದಲ್ಲಿ ಆರು ದಿನಗಳಿಂದ ನಡೆದ ಯೋನೆಕ್ಸ್-ಸನ್ರೈಸ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತು ಅಂಡರ್-13 ವಿಭಾಗಗಳ ಬ್ಯಾಡ್ಮಿಂಟನ್ ಪಂದ್ಯಾವಳಿ ಮುಕ್ತಾಯಗೊಂಡಿದ್ದು ಶನಿವಾರ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಿವಿಧ ವಿಭಾಗಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ಬಾಲಕರ ಅಂಡರ್-11 ವಿಭಾಗದ ಸಿಂಗಲ್ಸ್ನಲ್ಲಿ ರಿಯಾನ್ಸ್ ರಿಷಿಕ್ ಸಾಯಿ ಯಗಂಟಿ ಪ್ರಥಮ, ಲಿತಿನ್ ಪಿ ದ್ವಿತೀಯ ಸ್ಥಾನ ಪಡೆದರೆ, ಡಬಲ್ಸ್ನಲ್ಲಿ ಅಥರ್ವಾ ಸಾಹು ಹಾಗೂ ರೆಯಾನ್ಸ್ ರಿಷಿಕ್ ಪ್ರಥಮ ಸ್ಥಾನ ಗಳಿಸಿದರು. ಇದೇ ವಿಭಾಗದ ಬಾಲಕಿಯರ ಸಿಂಗಲ್ಸ್ನಲ್ಲಿ ಜ್ಯೋತ್ನಾ ವಿನೋದ್ ಪ್ರಥಮ, ಯುವಿಕ ತಮ್ಮಯ್ಯ ದ್ವಿತೀಯ ಸ್ಥಾನ ಪಡೆದರು. ಡಬಲ್ಸ್ನಲ್ಲಿ ಜ್ಯೋತ್ನಾ ವಿನೋದ್, ಕೃಷಾ ಸಿಂಗ್ದೇವ್ ಪ್ರಥಮ, ಆರುಶಿ ವೈನವಿ, ಸ್ವರ ಎಸ್. ಭಾರಧ್ವಜ್ ಗೆಲುವು ಪಡೆದರು.
ಬಾಲಕಿಯರ ಅಂಡರ್ 13ರಲ್ಲಿ ವಿಭಾಗದ ಸಿಂಗಲ್ಸ್ನಲ್ಲಿ ಸಿಹಿ ಆದರ್ಶ್ ಮೊದಲ, ಸಾನ್ವಿ ಪಿ.ಎನ್ ದ್ವಿತೀಯ ಸ್ಥಾನ ಹಾಗೂ ಡಬಲ್ಸ್ನಲ್ಲಿ ಶಾನ್ವಿ ಪಿ.ಎನ್, ಶಾಂಭವಿ ಶರ್ಮಾ ಪ್ರಥಮ, ಹೇಮಶ್ರೀ, ಸಿಹಿ ಆದರ್ಶ್ ದ್ವಿತೀಯ ಸ್ಥಾನ ಪಡೆದರು. ಬಾಲಕರ ಅಂಡರ್ 13 ವಿಭಾಗದ ಸಿಂಗಲ್ಸ್ನಲ್ಲಿ ವೈಭವ್ ರಾವ್ ನಂದಿಕೊಳ್ಳ ಮೊದಲ ಹಾಗೂ ಜ್ಞಾನ್ ರಿಷಿಕ್ ಬೊಲಿಗರ್ಲಾ ಎರಡನೇ ಸ್ಥಾನ ಗಳಿಸಿದರು. ಡಬಲ್ಸ್ನಲ್ಲಿ ಮಾನ್ವಿತ ಮಾಣಿಬೆಟ್ಟು, ಆದೇಶ್, ವೈಭವ್ ರಾವ್ ಮೊದಲ ಹಾಗೂ ಜ್ಞಾನ್ ರಿಷಿಕ್ ಬೋಳಿಗರ್ಲಾ, ಕೌಶಿಕ್ ಹಳೆಬೀಡು ದ್ವಿತೀಯ ಸ್ಥಾನ ಪಡೆದರು.
ಕೇಂದ್ರ ಸಚಿವ ವಿ. ಸೋಮಣ್ಣ ವಿಜೇತರಿಗೆ ಬಹುಮಾನ ವಿತರಿಸಿ, ದೇಶದ ಪ್ರಗತಿಗೆ, ಹಿರಿಮೆಗೆ ಕ್ರೀಡೆಯೂ ಪೂರಕವಾಗಿರಬೇಕು. ವಿಕಸಿತ ಭಾರತ 2047ರ ವೇಳೆಗೆ ಭಾರತದ ಕ್ರೀಡೆಗಳಉ ಉತ್ತುಂಗದಲ್ಲಿರಬೇಕು. ಅದಕ್ಕಾಗಿ ಈಗಿನಿಂದಲೇ ಯುವಕ್ರೀಡಾಪಟುಗಳು ಸಜ್ಜಾಗಬೇಕು. ಕ್ರೀಡಾಪ್ರತಿಭೆಗಳನ್ನು ಬೆಳಕಿಗೆ ತರಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗಬೇಕು. ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ತುಮಕೂರಿನಲ್ಲಿ ಪಂದ್ಯಾವಳಿ ಆಯೋಜಿಸಿದ್ದಕ್ಕೆ ಅಭಿನಂದನೆಗಳು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ, ರವಿಶಂಕರ್ ಹೆಬ್ಬಾಕ, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ. ಮುರಳಿಧರ್, ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷ ಪಿ.ಪ್ರವೀಣ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ವಿ. ಮುರಳಿಧರ್, ಸಂಯೋಜಕರಾದ ನಿಶಾಂತ್, ಗುರುಪ್ರಸಾದ್, ಮುಖಂಡರಾದ ಅಜಯ್ಕುಮಾರ್, ಊರುಕೆರೆ ಪುರುಷೋತ್ತಮ್, ಮಲ್ಲಸಂದ್ರ ಶಿವಣ್ಣ, ಬ್ಯಾಟರಂಗೇಗೌಡ, ಚಂದ್ರಶೇಖರಬಾಬು, ರುದ್ರೇಶ್, ಲಕ್ಷ್ಮೀನಾರಾಯಣ ಮೊದಲಾದವರು ಭಾಗವಹಿಸಿದ್ದರು.
-ಕೆ.ಬಿ. ಚಂದ್ರಚೂಡ