ಹಾಸನ : ಕದಂಬ ಸೈನ್ಯ : ಕನ್ನಡ ಸಂಘಟನೆ ರಾಜ್ಯ ಘಟಕವು ಕನ್ನಡಾಂಬೆಯ ಸೇವೆ ಸಲ್ಲಿಸುತ್ತ ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ಸಾಧನೆ ಮಾಡುತ್ತಿರುವವರನ್ನು ಪ್ರೋತ್ಸಾಹಿಸುವ ಕೈಂಕರ್ಯದಲ್ಲಿ ಸದಾ ನಿರತವಾಗಿದೆ. ಈ ನಿಟ್ಟಿನಲ್ಲಿ ಸಾಹಿತಿಗಳು, ಕಲಾವಿದರು, ಸಮಾಜಸೇವಕರು, ಪ್ರಗತಿಪರ ಕೃಷಿಕರು ಮುಂತಾದವರನ್ನು ಗುರುತಿಸಿ ಸನ್ಮಾನಿಸುತ್ತಾ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ 2026 ನೇ ಸಾಲಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮೂವರು ಸಾಹಿತಿಗಳನ್ನು ಚಾಲುಕ್ಯ ರತ್ನ ಇಮ್ಮಡಿ ಪುಲಿಕೇಶಿ ಪ್ರಶಸ್ತಿಗೆ ಗುರುತಿಸಿದೆ.
ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರಾದ ಮಧುನಾಯ್ಕ ಲಂಬಾಣಿ, ಹಿರಿಯ ಸಾಹಿತಿಗಳಾದ ಟಿ. ಶಂಕರಪ್ಪ ಹುಲ್ಲಂಗಾಲ (ರಾಜಣ್ಣ ರಾಶಿ) ಮತ್ತು ಯುವ ಸಾಹಿತಿಗಳಾದ ಕೆ.ಎನ್. ಚಿದಾನಂದ (ನಾನಂಚಿ ) ಇವರನ್ನು ಗುರುತಿಸಿದೆ. ಇದೇ ತಿಂಗಳ 8ನೇ ತಾರೀಖಿನಂದು ಬಾದಾಮಿ ತಾಲ್ಲೂಕಿನ ಬನಶಂಕರಿಯ ಶ್ರೀ ಗಾಯಿತ್ರಿ ಸಭಾಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಘಟಕದ ಅಧ್ಯಕ್ಷರಾದ ಬೇಕ್ರಿ ರಮೇಶ್ ರವರು ತಿಳಿಸಿ ಅಭಿನಂದಿಸಿರುತ್ತಾರೆ. ಅಲ್ಲದೇ ಕದಂಬ ಸೈನ್ಯ ಕನ್ನಡ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಎ.ಹೆಚ್. ಗಣೇಶ್ ಅಂಕಪುರ, ಹಿರಿಯ ಸಾಹಿತಿಗಳಾದ ಗೊರೂರು ಅನಂತರಾಜು, ಹೊಳೆನರಸೀಪುರ ತಾಲ್ಲೂಕು ಘಟಕದ ಅಧ್ಯಕ್ಷರಾದ ಆರ್. ಕೆ. ಪುಟ್ಟಸ್ವಾಮಿ ಗೌಡ್ರು, ಆಲೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಪಟ್ಣ ವೆಂಕಟೇಗೌಡ್ರು, ಸಕಲೇಶಪುರ ತಾಲ್ಲೂಕು ಘಟಕದ ಅಧ್ಯಕ್ಷರಾದ ವಿಶ್ವಾಸ್ ಡಿ. ಗೌಡ್ರು ಮತ್ತು ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷರಾದ ಬೇಕ್ರಿ ರಾಜೇಗೌಡ್ರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳನ್ನು ತಿಳಿಸಿರುತ್ತಾರೆ.
