ಕೆ.ಆರ್.ಪೇಟೆ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಂಗ್ಲಿಷ್ ಪಂಡಿತ್ ನಿವೃತ್ತ ಅಧ್ಯಾಪಕರಾದ ಅಂಬಿಗರಹಳ್ಳಿ ಎಸ್.ಸಿದ್ದೇಗೌಡರು(95) ಅವರು ಇಂದು ಪಟ್ಟಣದ ಹೇಮಾವತಿ ಬಡಾವಣೆಯ ತಮ್ಮ ನಿವಾಸದಲ್ಲಿ ಸಂಜೆ ವಯೋಸಹಜ ನಿಧನ ಹೊಂದಿರುತ್ತಾರೆ.
ಮೂಲತಃ ತಾಲ್ಲೂಕಿನ ಅಂಬಿಗರಹಳ್ಳಿ ಗ್ರಾಮದವರಾದ ಎಸ್.ಸಿದ್ದೇಗೌಡರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಸೇರಿದಂತೆ ತಾಲ್ಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಳೆದ 35ವರ್ಷಗಳ ಹಿಂದೆ ನಿವೃತ್ತಿಯಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಪುತ್ರ ಕುಮಾರ್(ಪ್ರಭಾಕರ್), ಪುತ್ರಿ ಕಾಂತಾಮಣಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಿವೃತ್ತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸ್ ಗೌಡ ಅವರ ಚಿಕ್ಕಪ್ಪನರಾಗಿರುವ ಸಿದ್ದೇಗೌಡರು ನಡೆದಾಡುವ ಇಂಗ್ಲೀಷ್ ನಿಘಂಟು ಎಂದೇ ಪ್ರಸಿದ್ದಯಾಗಿದ್ದರು.
ಇಂಗ್ಲೀಷ್ ಪಂಡಿತ್ ಆಗಿದ್ದ ಎಸ್.ಸಿದ್ದೇಗೌಡರು ಇಂಗ್ಲೀಷ್ ಸಿದ್ದೇಗೌಡ್ರು ಎಂದೇ ಪ್ರಖ್ಯಾತಿಯಾಗಿದ್ದರು. ನಿವೃತ್ತಿಯ ನಂತರವೂ ಉಚಿತವಾಗಿ ಇಂಗ್ಲೀಷ್ ಟ್ಯೂಷನ್ ಮಾಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದ್ದರು.
ಮೃತರ ನಿಧನಕ್ಕೆ ಶಾಸಕ ಹೆಚ್.ಟಿ.ಮಂಜು, ಐ.ಎ.ಎಸ್.ಅಧಿಕಾರಿ ಡಾ.ಮುತ್ತೇಶ್ ಗೌಡ, ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಆ.06ರಂದು ಗುರುವಾರ ಮಧ್ಯಾಹ್ನ 3ಗಂಟೆಗೆ ಹುಟ್ಟೂರು ಅಂಬಿಗರಹಳ್ಳಿ ಗ್ರಾಮದಲ್ಲಿ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
– ಶ್ರೀನಿವಾಸ್ ಆರ್.
